ETV Bharat / state

ಯಡಿಯೂರಪ್ಪ ಅವರ ನಾಲಿಗೆ- ಕೈ ಮಗನ ಕೈಯಲ್ಲಿದೆ : ವಿಶ್ವನಾಥ್ ವಾಗ್ದಾಳಿ - ಮುಖ್ಯಮಂತ್ರಿ ಸ್ಥಾನ ಬದಲಾವಣೆ ಬಗ್ಗೆ ಹೆಚ್​. ವಿಶ್ವನಾಥ್​ ಹೇಳಿಕೆ

ಯೋಗೇಶ್ವರ್ ರಾಜ್ಯದಲ್ಲಿ 3 ಪಾರ್ಟಿಯ ಸರ್ಕಾರ ಇದೆ ಎಂದು ಟೀಕಿಸಿದ್ದು ಸರಿಯಿದೆ. ಬಿಜೆಪಿಗೆ ಬಂದು ಮಂತ್ರಿಯಾದ 17 ಜನರಲ್ಲಿ‌ ಯಾರೂ ಸಹ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅವರಿಗೆ ಮತ್ತೆ ಸಿಎಂ ಬದಲಾವಣೆ ಆದರೆ ಮಂತ್ರಿ ಸ್ಥಾನ ಕೊಡಬೇಡಿ.‌ ಸರ್ಕಾರ ಹೋದರೂ ಮತ್ತೆ ಚುನಾವಣೆಗೆ ಹೋಗೋಣ, ಜನಾದೇಶ ಪಡೆಯೋಣ..

MLC H Vishwanath
ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್
author img

By

Published : Jul 21, 2021, 3:35 PM IST

ಮೈಸೂರು :‌ ಸಿಎಂ ಯಡಿಯೂರಪ್ಪ ಅವರ ಕೈ ಮತ್ತು ನಾಲಿಗೆ ಅವರ ಮಗನ ಕೈಯಲ್ಲಿದೆ. ಆದ್ದರಿಂದ ಬಿಎಸ್​ವೈ ಗೌರವಯುತವಾಗಿ ಪದವಿಯನ್ನು ಬಿಡಬೇಕು ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಹೇಳಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ವಾಮೀಜಿಗಳು ಸಂವಿಧಾನಕ್ಕಿಂತ ದೊಡ್ಡವರಲ್ಲ. ಸಂವಿಧಾನವೇ ಸಾರ್ವಭೌಮ. ಸ್ವಾಮೀಜಿಗಳು ನಾವೇ ಸಾರ್ವಭೌಮರು ಎಂದು ಹೋಗುವುದು ಸರಿಯಲ್ಲ. ಬಿಎಸ್​ವೈ ಅವರ ಬದಲಾವಣೆಗೆ ಮುಖ್ಯ ಕಾರಣ‌ ಭ್ರಷ್ಟಾಚಾರ ಎಂದು ಆರೋಪಿಸಿದರು.

ಯಾವುದೇ ಸ್ವಾಮೀಜಿಗಳು ಸಿಎಂ ಇವರೇ ಮುಂದುವರೆಯಬೇಕು ಎಂದು ಹೇಳುವುದು ಸರಿಯಲ್ಲ‌. ಒಂದು ಧರ್ಮದ ಸ್ವಾಮೀಜಿಗಳು ರಾಜಕಾರಣ ಮಾಡಬಾರದು. ಧರ್ಮದಲ್ಲಿ ರಾಜಕಾರಣ ಇರಬಾರದು. ಆದರೆ, ಈಗ ಧರ್ಮದಲ್ಲೇ ರಾಜಕಾರಣ ನೋಡುವ ಸ್ಥಿತಿ ಬಂದಿದೆ ಎಂದು ಸ್ವಾಮೀಜಿಗಳ ನಡವಳಿಕೆಗಳನ್ನು ಟೀಕಿಸಿದರು.

ಮೋದಿಯಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದಿಯೇ ವಿನಹಃ, ಯಡಿಯೂರಪ್ಪ ಅವರಿಂದ ಅಲ್ಲ. ಇದನ್ನು ನೆನೆಪಿಸಿಕೊಳ್ಳಬೇಕು. ಯಡಿಯೂರಪ್ಪ ಪರವಾಗಿ ಶ್ಯಾಮನೂರು ಶಿವಶಂಕರಪ್ಪ ಹಾಗೂ ಕಾಂಗ್ರೆಸ್ ನ ಎಂ ಬಿ ಪಾಟೀಲ್‌ ಮಾತನಾಡುತ್ತಿರುವುದನ್ನು ನೋಡಿದರೆ, ಇವರು ಶಿಕ್ಷಣದ ವ್ಯಾಪಾರಿಗಳು ಎಂಬುದು ತಿಳಿಯುತ್ತದೆ. ಇವರು ಯಾವೊಬ್ಬ ಬಡ ಲಿಂಗಾಯತ ಮಕ್ಕಳಿಗೆ ಸೀಟು ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಂತ್ರಿ ಸ್ಥಾನ ಕೊಡಬೇಡಿ : ಯೋಗೇಶ್ವರ್ ರಾಜ್ಯದಲ್ಲಿ 3 ಪಾರ್ಟಿಯ ಸರ್ಕಾರ ಇದೆ ಎಂದು ಟೀಕಿಸಿದ್ದು ಸರಿಯಿದೆ. ಬಿಜೆಪಿಗೆ ಬಂದು ಮಂತ್ರಿಯಾದ 17 ಜನರಲ್ಲಿ‌ ಯಾರೂ ಸಹ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅವರಿಗೆ ಮತ್ತೆ ಸಿಎಂ ಬದಲಾವಣೆ ಆದರೆ ಮಂತ್ರಿ ಸ್ಥಾನ ಕೊಡಬೇಡಿ.‌ ಸರ್ಕಾರ ಹೋದರೂ ಮತ್ತೆ ಚುನಾವಣೆಗೆ ಹೋಗೋಣ, ಜನಾದೇಶ ಪಡೆಯೋಣ ಎಂದರು.

ಲಾಕ್‌ಡೌನ್ ಸಂದರ್ಭದಲ್ಲಿ ಎಲ್ಲಿ ಹೋಗಿದ್ದರು? : ಯಡಿಯೂರಪ್ಪ ಬಿಜೆಪಿ ಪಕ್ಷ ಕಟ್ಟಿಲ್ಲ. ಅವರನ್ನು ಕೆಳಗಿಳಿಸಲು ಹೈಕಮಾಂಡ್ ‌ನಿರ್ಧಾರ ತೆಗೆದುಕೊಂಡಿದೆ. ಇಂತಹ ಸಂದರ್ಭಗಳಲ್ಲಿ ಸ್ವಾಮೀಜಿಗಳು ನಡೆದಾಡುವ ದೇವರಾಗಬೇಕು‌. ನಡೆದಾಡುವ ರಾಜಕಾರಣಿಗಳಾಗಬಾರದು. ಇದು ಜನತಂತ್ರ ವ್ಯವಸ್ಥೆಗೆ ಮಾರಕ. ಯಡಿಯೂರಪ್ಪ ಅವರ ಪರ ಮಾತನಾಡುತ್ತಿರುವ ಕೆಲವು‌‌ ಕಾಣಿಕೆ ಸ್ವಾಮೀಜಿಗಳು ಲಾಕ್‌ಡೌನ್ ಸಂದರ್ಭದಲ್ಲಿ ಎಲ್ಲಿ ಹೋಗಿದ್ದರು? ಎಂದು ವಾಗ್ದಾಳಿ ನಡೆಸಿದರು.

ಓದಿ: ರಾಜ್ಯ ರಾಜಕೀಯ ಬೆಳವಣಿಗೆ ಕೋಡಿಶ್ರೀ ನುಡಿದ್ರು ಮಹತ್ವದ ಭವಿಷ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.