ಮೈಸೂರು: ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿ ಸಾರಿಗೆ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಇದರಿಂದಾಗಿ ಕಳೆದ ವಾರದಿಂದ ಸರ್ಕಾರಿ ಬಸ್ಗಳಲ್ಲಿ ಜನರ ಸಂಚಾರ ಹೆಚ್ಚಿದೆ. ಅದರಲ್ಲೂ, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೀರ್ಥಕ್ಷೇತ್ರಗಳು, ಧಾರ್ಮಿಕ ಕೇಂದ್ರಗಳು ಹಾಗೂ ಪ್ರವಾಸಿತಾಣಗಳಿಗೆ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಇದರ ನಡುವೆ ಪ್ರಯಾಣದ ಸಮಯದಲ್ಲಿ ಹತ್ತು-ಹಲವು ಅವಾಂತರಗಳು ಹಾಗೂ ಅಹಿತರ ಘಟನೆಗಳೂ ಸಹ ವರದಿಯಾಗುತ್ತಿವೆ.
ಉಚಿತ ಪ್ರಯಣ ಪರಿಣಾಮ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರ ಸಂಖ್ಯೆ ಅಧಿಕವಾಗಿ ಕಾಣುತ್ತಿದೆ. ಕೆಲವು ಬಸ್ಗಳಲ್ಲಿ ನಿರ್ವಾಹಕರು ನಿಲ್ಲಲೂ ಸಾಧ್ಯವಿಲ್ಲದಂತಹ ಪರಿಸ್ಥಿತಿ ಇದೆ. ಮತ್ತೊಂದೆಡೆ, ಮಹಿಳೆಯರು ಅಪಾಯಕಾರಿ ಸ್ಥಿತಿಯಲ್ಲಿ ಸಂಚರಿಸುವುದು ಕಂಡುಬರುತ್ತಿದೆ. ಬಸ್ ಹತ್ತುವಾಗ ಹಾಗೂ ಸೀಟ್ ಪಡೆಯುವ ವಿಚಾರವಾಗಿ ಪ್ರಯಾಣಿಕರ ನಡುವೆ ಗಲಾಟೆ, ವಾಗ್ವಾದವೂ ನಡೆಯುತ್ತಿದೆ. ಇದೀಗ ನಗರ ಸಾರಿಗೆ ಬಸ್ನಲ್ಲಿ ಸೀಟಿಗಾಗಿ ನಾರಿಯರು ಕೈ- ಕೈ ಮಿಲಾಯಿಸಿದ ಘಟನೆ ಜರುಗಿದೆ. ಇದರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಬಸ್ನಲ್ಲಿ ಹೋಗುವಾಗ ನಡೆದ ಘಟನೆ ಎನ್ನಲಾಗುತ್ತಿದೆ.
-
ಉಚಿತ ಪ್ರಯಾಣದ ವೇಳೆ ಬಸ್ ಸೀಟಿಗಾಗಿ ಮಹಿಳೆಯರು ಪರಸ್ಪರ ಜಡೆ ಹಿಡಿದು ಮಾರಾಮಾರಿ ನಡೆಸಿದ್ದಾರೆ..#KannadaNews #BreakingNews #KannadaLiveTv #LatestNews #KarnatakaNews #viralvideo#fighting @CMofKarnataka pic.twitter.com/AhrzHvzSyx
— ಸತೀಶ್ ಕಂದಗಲ್ ಪುರ (@sathisho2555) June 20, 2023 " class="align-text-top noRightClick twitterSection" data="
">ಉಚಿತ ಪ್ರಯಾಣದ ವೇಳೆ ಬಸ್ ಸೀಟಿಗಾಗಿ ಮಹಿಳೆಯರು ಪರಸ್ಪರ ಜಡೆ ಹಿಡಿದು ಮಾರಾಮಾರಿ ನಡೆಸಿದ್ದಾರೆ..#KannadaNews #BreakingNews #KannadaLiveTv #LatestNews #KarnatakaNews #viralvideo#fighting @CMofKarnataka pic.twitter.com/AhrzHvzSyx
— ಸತೀಶ್ ಕಂದಗಲ್ ಪುರ (@sathisho2555) June 20, 2023ಉಚಿತ ಪ್ರಯಾಣದ ವೇಳೆ ಬಸ್ ಸೀಟಿಗಾಗಿ ಮಹಿಳೆಯರು ಪರಸ್ಪರ ಜಡೆ ಹಿಡಿದು ಮಾರಾಮಾರಿ ನಡೆಸಿದ್ದಾರೆ..#KannadaNews #BreakingNews #KannadaLiveTv #LatestNews #KarnatakaNews #viralvideo#fighting @CMofKarnataka pic.twitter.com/AhrzHvzSyx
— ಸತೀಶ್ ಕಂದಗಲ್ ಪುರ (@sathisho2555) June 20, 2023
ಇದನ್ನೂ ಓದಿ: ಮಹಿಳೆಯರಿಗೆ ಉಚಿತ ಪ್ರಯಾಣ: ಸೀಟ್ ಮೇಲೆ ಹತ್ತಿ ಟಿಕೆಟ್ ನೀಡಿದ ಕಂಡಕ್ಟರ್ ವಿಡಿಯೋ ವೈರಲ್
ಮೈಸೂರು ನಗರ ಬಸ್ ನಿಲ್ದಾಣದಿಂದ ನಗರ ಸಾರಿಗೆ ಬಸ್ ಚಾಮುಂಡಿ ಬೆಟ್ಟಕ್ಕೆ ಬಸ್ ಪ್ರಯಾಣಿಸುತ್ತಿತ್ತು. ಬಸ್ನಲ್ಲಿ ದೇವರ ದರ್ಶನಕ್ಕೆ ಮಹಿಳೆಯರು ಹೊರಟಿದ್ದರು. ಆದರೆ, ಸೀಟಿಗಾಗಿ ಬಸ್ನಲ್ಲೇ ಗಲಾಟೆ ಉಂಟಾಗಿದೆ. ಇದು ವಿಕೋಪಕ್ಕೆ ತಿರುಗಿ ಕೊನೆಗೆ ಕೈ-ಕೈ ಮಿಲಾಯಿಸುವ ಹಂತ ತಲುಪಿದೆ. ಇದರ ದೃಶ್ಯಗಳನ್ನು ಬಸ್ನಲ್ಲಿದ್ದ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಘಟನೆ ಯಾವಾಗ ನಡೆದಿದೆ ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಸದ್ಯಕ್ಕೆ ಬಸ್ನಲ್ಲಿ ಮಹಿಳೆಯರು ಕಿತ್ತಾಟದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ನಾಲ್ಕು ದಿನಗಳ ಹಿಂದೆ ಗದಗ ಜಿಲ್ಲೆಯಲ್ಲಿ ಮಹಿಳೆಯರು ಬಸ್ನ ಬಾಗಿಲಿನ ತುದಿಯಲ್ಲಿ ನಿಂತು ಅಪಾಯಕಾರಿ ಸ್ಥಿತಿಯಲ್ಲಿ ಪ್ರಯಾಣಿಸುತ್ತಿದ್ದ ವಿಡಿಯೋ ಸೆರೆಯಾಗಿತ್ತು. ನರಗುಂದದಿಂದ ರೋಣ ಕಡೆ ಸಾರಿಗೆ ಬಸ್ನಲ್ಲಿ ಮಹಿಳೆಯರು ಮಕ್ಕಳೊಂದಿಗೆ ಬಾಗಿಲಿನಲ್ಲೇ ಜೋತು ಬಿದ್ದುಕೊಂಡು ಸಾಗುತ್ತಿರುವ ದೃಶ್ಯಗಳು ಸೆರೆಯಾಗಿತ್ತು. ಇಂತಹ ಘಟನೆಗಳು ವರದಿಯಾದ ಹಿನ್ನೆಲೆಯಲ್ಲಿ ಸಾರಿಗೆ ನಿಗಮಗಳು ಎಚ್ಚೆತ್ತುಕೊಂಡಿದ್ದವು. ಸಾರ್ವಜನಿಕರು ಪ್ರಯಾಣದ ಸಮಯದಲ್ಲಿ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನ ಕೊಡಬೇಕೆಂದು ಸಾರಿಗೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಬಸ್ಗಳೆಲ್ಲ ರಶ್ ರಶ್.. ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ: ವಿಡಿಯೋ