ಮೈಸೂರು: ಪತಿಯನ್ನು ಕಳೆದುಕೊಂಡ ನೋವಿನಿಂದ ಹೊರಬರಲಾಗದೆ ಪತ್ನಿ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಮೈಸೂರಿನ ಜೆ.ಪಿ.ನಗರದ ನಿವಾಸಿ ಚಾಂದಿನಿ (25) ಮೃತ ಮಹಿಳೆ. 5 ವರ್ಷಗಳ ಹಿಂದೆ ಚಾಂದಿನಿ ಹಾಗೂ ಮಧುಸೂಧನ್ ವಿವಾಹವಾಗಿದ್ದರು. ಮಧುಸೂದನ್ 21 ದಿನಗಳ ಹಿಂದೆ ಮೃತಪಟ್ಟಿದ್ದರು. ಚಾಂದಿನಿಗೆ ಮತ್ತೊಂದು ಮದುವೆ ಮಾಡಲು ಪೋಷಕರು ನಿರ್ಧರಿಸಿದ್ದರು. ಆದರೆ ಪತಿಯ ನೆನಪಿನಿಂದ ಹೊರಬರಲಾಗದ ಚಾಂದಿನಿ, ಪೋಷಕರ ನಿರ್ಧಾರಕ್ಕೆ ಬೇಸತ್ತು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ