ಮೈಸೂರು: ಕೊರೊನಾ ಭೀತಿಯಿಂದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ವಿದ್ಯಾರಣ್ಯಾಪುರಂನಲ್ಲಿ ನಡೆದಿದೆ.
ರತ್ಮಮ್ಮ (47) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಪತಿಯಿಂದ ದೂರವಾಗಿ ಒಬ್ಬಂಟಿಯಾಗಿ ವಾಸಿಸುತಿದ್ದ ಮಹಿಳೆ, ಗ್ಯಾಸ್ಟ್ರಿಕ್, ಎದೆನೋವು ಹಾಗೂ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದರು.
ಇತ್ತೀಚೆಗೆ ಕೆ.ಆರ್.ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದ ರತ್ನಮ್ಮ, ವರದಿ ಪಾಸಿಟಿವ್ ಬರಬಹುದೆಂಬ ಆತಂಕದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆಕೆಯ ಪುತ್ರಿ ಐಶ್ವರ್ಯ ವಿದ್ಯಾರಣ್ಯಾಪುರ ಪೊಲೀಸರಿಗೆ ದೂರು ನೀಡಿದ್ದಾರೆ.