ಮೈಸೂರು: ಕಾಡಿನಿಂದ ನಾಡಿಗೆ ಬಂದ ಆನೆಗಳ ಹಿಂಡು ಕಾಲುವೆಗೆ ಇಳಿದು ನಂತರ ಮೇಲೆ ಬರಲು ಹರಸಾಹಸ ಪಟ್ಟಿರುವ ಘಟನೆ ಹುಣಸೂರು ತಾಲೂಕಿನ ನೆಲ್ಲೂರು ಪಾಲ ಗ್ರಾಮದಲ್ಲಿ ನಡೆದಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನದಿಂದ ಹೊರ ಬಂದಿರುವ ಕಾಡಾನೆಗಳ ಹಿಂಡು ಹುಣಸೂರು ತಾಲೂಕಿನ ನೆಲ್ಲೂರು ಪಾಲ ಗ್ರಾಮದಲ್ಲಿ ಪ್ರತ್ಯಕ್ಷವಾಗಿದೆ. 5 ಆನೆಗಳನ್ನ ಕಂಡು ಗ್ರಾಮಸ್ಥರು ಆತಂಕಗೊಂಡಿದ್ದು, ಆನೆಗಳನ್ನ ಓಡಿಸಲು ಬೊಬ್ಬೆ ಹಾಕಿ, ಕೂಗಾಟ ಮಾಡಿದ್ದಾರೆ.
ಜನರ ಕೂಗಾಟದಿಂದ ಕಾಲುವೆಗೆ ಇಳಿದಿದ್ದ ಕಾಡಾನೆಗಳು ಮೇಲೆ ಬರಲು ಪರದಾಡಿವೆ. ಸ್ಥಳಿಯರ ಕೂಗಾಟಕ್ಕೆ ಬೆದರಿದ ಕಾಡಾನೆಗಳು ಎಷ್ಟೇ ಪ್ರಯತ್ನಪಟ್ಟರೂ ಕಾಲುವೆಯಿಂದ ಮೇಲೆ ಬರಲು ಸಾಧ್ಯವಾಗಲಿಲ್ಲ.
ನಾಡಿಗೆ ಬಂದ ಆನೆಗಳ ಹಿಂಡನ್ನು ಕಾಡಿಗೆ ಓಡಿಸಲು ಅರಣ್ಯ ಇಲಾಖೆಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಓದಿ: ಹಣಕ್ಕಾಗಿ 'ಪತ್ನಿಯರ ವಿನಿಮಯ' ದಂಧೆ ಬೆಳಕಿಗೆ.. ಇದಕ್ಕಾಗಿ ಮೆಸೆಂಜರ್, ಟೆಲಿಗ್ರಾಂ ಗ್ರೂಪ್ ರಚನೆ