ಮೈಸೂರು: ನಾಗರಹೊಳೆ ಅರಣ್ಯದಿಂದ ಕಾಡಂಚಿನ ಗ್ರಾಮಗಳಿಗೆ ನುಗ್ಗಿದ ಒಂಟಿ ಸಲಗವೊಂದು ದ್ವಿಚಕ್ರ ವಾಹನಗಳನ್ನ ತುಳಿದು ಜಖಂ ಮಾಡಿ ಜನರಲ್ಲಿ ಭಯ ಉಂಟುಮಾಡಿದೆ. ನಾಗರಹೊಳೆ ಕಾಡಿನಿಂದ ಬಂದ ಒಂಟಿ ಸಲಗವೊಂದು ಕಾಡಂಚಿನ ಗ್ರಾಮಗಳಾದ ಕೊಳವಿಗೆ, ನಾಗಪುರ ಹಾಡಿಯ ರಸ್ತೆಗಳಲ್ಲಿ ನಿನ್ನೆ ದಿನವೀಡಿ ಓಡಾಟ ನಡೆಸಿದ್ದು, ಆನೆಯನ್ನ ಕಂಡ ಜನರು ಆತಂಕಗೊಂಡಿದ್ದಾರೆ.
ನಿನ್ನೆ ಶಾಲೆಯ ಕಾಂಪೌಂಡ್ಗೆ ಎಂಟ್ರಿ ಕೊಟ್ಟಿದ್ದ ಗಜರಾಜ, ಮಧ್ಯಾಹ್ನ ನಾಗಪುರ ಹಾಡಿಯ ರಸ್ತೆಗಳಲ್ಲಿ ಗಾಂಭೀರ್ಯದಿಂದ ಓಡಾಟ ನಡೆಸಿದೆ. ಅಷ್ಟೇ ಅಲ್ಲದೆ ಸಲಗವನ್ನು ಹಿಮ್ಮೆಟ್ಟಿಸಲು ಬಂದ ಬೈಕ್ ಸವಾರರ ಮೇಲೂ ದಾಳಿ ಮಾಡಿದ್ದು, ಮೂರು ದ್ವಿಚಕ್ರ ವಾಹನಗಳನ್ನ ಜಖಂ ಮಾಡಿದೆ.
ಓದಿ: Watch.. ಚಿರತೆ ಬಂತು ಚಿರತೆ... ಓಡು..ಓಡು.. ಅರಣ್ಯ ಅಧಿಕಾರಿ ಸೇರಿ ನಾಲ್ವರಿಗೆ ಗಾಯ.. ಮೈಜುಮ್ಮೆನ್ನಿಸುವ ವಿಡಿಯೋ!
ಸಂಜೆ ವೇಳೆಗೆ ಮತ್ತೆ ಕಾಡಿನ ಕಡೆಗೆ ಸಲಗ ಮುಖ ಮಾಡಿದ್ದು, ಯಾವಾಗ ಬೇಕಾದರೂ ಕಾಡಿನಿಂದ ಹೊರಬಂದು ಮತ್ತೆ ದಾಂಧಲೆ ನಡೆಸಬಹುದು. ಕೂಡಲೇ ಶಾಸಕರು ಹಾಗೂ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.