ಮೈಸೂರು: ಕುರಿ ಮೇಯಿಸುತ್ತಿದ್ದ ವ್ಯಕ್ತಿಯ ಮೇಲೆ ಕಾಡು ಹಂದಿಯೊಂದು ದಾಳಿ ಮಾಡಿರುವ ಘಟನೆ ನಂಜನಗೂಡು ತಾಲೂಕಿನ ಬದನವಾಳು ಗ್ರಾಮದಲ್ಲಿ ನಡೆದಿದೆ.
ಇಂದು ಬೆಳಗ್ಗೆ ಬದನವಾಳು ಗ್ರಾಮದ ರಂಗಸ್ವಾಮಿ ಎಂಬ ವ್ಯಕ್ತಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಕುರಿ ಮೇಯಿಸುತ್ತಿದ್ದ. ಈ ವೇಳೆ ಜಮೀನಿನ ಪೊದೆಯಲ್ಲಿದ್ದ ಕಾಡುಹಂದಿ ಈತನ ಮೇಲೆ ಏಕಾಏಕಿ ಎರಗಿದೆ. ಪರಿಣಾಮ ರಂಗಸ್ವಾಮಿಯ ತೊಡೆ ಭಾಗಕ್ಕೆ ಪೆಟ್ಟಾಗಿದ್ದು, ತಕ್ಷಣ ಈತನನ್ನು ನಂಜನಗೂಡು ಸರ್ಕಾರಿ ಆಸ್ಪತ್ರೆ ಸೇರಿಸಲಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.