ETV Bharat / state

ಅತಿಯಾದ ಮಡಿವಂತಿಕೆ: ಹೆಂಡತಿಯ ಕೊಂದು ತಾನೂ ನೇಣಿಗೆ ಶರಣಾದ ಗಂಡ! - murder of wife by husband

ಹೆಂಡತಿಯ ಅತಿಯಾದ ಮಡಿವಂತಿಕೆಯಿಂದ ಬೇಸರಗೊಂಡ ಗಂಡನೋರ್ವ ಅದನ್ನು ತಾಳಲಾರದೆ ಹೆಂಡತಿಯನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ಮಂಡಹಳ್ಳಿ ಗ್ರಾಮದಲ್ಲಿ ನಡೆದಿದೆ.

Wife was murdered for excessive sacredness
ಅತೀಯಾದ ಮಡಿವಂತಿಕೆಯಿಂದ ಬೇಸರಗೊಂಡು ಹೆಂಡತಿಯನ್ನು ಕೊಂದ ಗಂಡ
author img

By

Published : Feb 19, 2020, 4:22 PM IST

ಮೈಸೂರು: ಅತಿಯಾದ ಮಡಿವಂತಿಕೆಯಿಂದ ಬೇಸರಗೊಂಡ ಗಂಡನೋರ್ವ ಹೆಂಡತಿಯನ್ನು ಕತ್ತರಿಸಿ ಕೊಲೆ ಮಾಡಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನಲ್ಲಿ ನಡೆದಿದೆ.

ಜಿಲ್ಲೆಯ ನಂಜನಗೂಡು ತಾಲೂಕಿನ ಮಂಡಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೊಲೆಯಾದ ಪುಟ್ಟಮಣಿಯ ಅತಿಯಾದ ಮಡಿವಂತಿಕೆಯಿಂದ ಬೇಸರಗೊಂಡ ಗಂಡ ಶಾಂತಮೂರ್ತಿ ಈ ಮಡಿವಂತಿಕೆ ತಾಳಲಾರದೆ ಹೆಂಡತಿಯನ್ನು ಸೌದೆ ತರಲು ಜಮೀನಿಗೆ ಕರೆದುಕೊಂಡು ಹೋಗಿದ್ದನಂತೆ. ಬಳಿಕ ಅಲ್ಲಿ ಮಚ್ಚಿನಿಂದ ಕುತ್ತಿಗೆ ಕತ್ತರಿಸಿ ಆಕೆಯ ಶವವನ್ನು ನಿನ್ನೆ ರಾತ್ರಿ ಮನೆಗೆ ತಂದು ನೇಣು ಹಾಕಿ ತಾನೂ ಸಹ ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ.

ಅತಿಯಾದ ಮಡಿವಂತಿಕೆಯಿಂದ ಬೇಸರಗೊಂಡು ಹೆಂಡತಿಯನ್ನು ಕೊಂದ ಗಂಡ

ಯಾವ ರೀತಿಯ ಮಡಿವಂತಿಕೆ?

15 ವರ್ಷಗಳ ಹಿಂದೆ ಪುಟ್ಟಮಣಿಯನ್ನು ಮದುವೆಯಾಗಿದ್ದ ಶಾಂತಮೂರ್ತಿ ಈಕೆಯ ಮಡಿವಂತಿಕೆಯಿಂದ ಬೇಸರಗೊಂಡಿದ್ದನಂತೆ. ಈ ಸಂದರ್ಭದಲ್ಲಿ ಅತ್ತೆಗೆ ಹೇಳಿ ನಿಮ್ಮ ಮಗಳ ಮಡಿವಂತಿಕೆ ಜಾಸ್ತಿಯಾಗಿದೆ. ನಾನು ಮನೆಗೆ ಬಂದರೂ ಪ್ರತಿ ಬಾರಿ ಸ್ನಾನ ಮಾಡಿ ಮನೆ ಒಳಗೆ ಪ್ರವೇಶ ಮಾಡಬೇಕು. ಇಬ್ಬರು ಹೆಣ್ಣು ಮಕ್ಕಳು ಶಾಲೆಯಿಂದ ಬಂದರೂ ಅವರೂ ಪುಸ್ತಕದ ಬ್ಯಾಗ್​ಗೆ ನೀರನ್ನು ಸಿಂಪಡಿಸಬೇಕು. ಅಲ್ಲದೆ ಮಕ್ಕಳಿಗೆ ತಣ್ಣೀರು ಸ್ನಾನ ಮಾಡಿಸಿ ಮನೆಯೊಳಗೆ ಕರೆದುಕೊಳ್ಳುತ್ತಿದ್ದಳು.

ಒಂದೊಂದು ದಿನ ಹೊರಗೆ ಹೋಗಿ ಬಂದ ನಂತರ 10-10 ಬಾರಿ ತಣ್ಣೀರು ಸ್ನಾನ ಮಾಡಿಸಿದ್ದಾಳೆ. ನಿಮ್ಮ ಮಗಳ ಮಡಿವಂತಿಕೆಯಿಂದ ನಮಗೆ ಸಾಕಾಗಿದೆ. ಆಕೆಯನ್ನು ಕೊಲೆ ಮಾಡಿ ನಾನು ಸಹ ಸಾಯುತ್ತೇನೆ ಎಂದು ಆತ್ಮಹತ್ಯೆಗೆ ಶರಣಾದ ಶಾಂತಮೂರ್ತಿ ತನ್ನ ಅತ್ತೆಗೆ ಕಳೆದ ವಾರ ಹೇಳಿದ್ದನೆಂದು ಅವರ ಸೋದರ ಸಂಬಂಧಿ ಶಿವಸ್ವಾಮಿ ಈಟಿವಿ ಭಾರತ್​ಗೆ ತಿಳಿಸಿದ್ದಾರೆ. ಅಲ್ಲದೆ ಪುಟ್ಟಮಣಿಯ ಮಡಿವಂತಿಕೆಯಿಂದ 2 ಮಕ್ಕಳು ಅನಾಥವಾದವು. ಈ ತರಹದ ಪ್ರಕಾರಣವನ್ನು ನಾನು ನೋಡಿಲ್ಲ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.