ಮೈಸೂರು: ಮೃತಪಟ್ಟ ಗಂಡನ ಸಾವಿನ ಸುದ್ದಿ ತಿಳಿದು ಹೆಂಡತಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಣಸೂರು ನಗರದ ಮಾರುತಿ ಬಡಾವಣೆಯಲ್ಲಿ ನಡೆದಿದೆ.
ನಗರದ ಮಾರುತಿ ಬಡಾವಣೆಯಲ್ಲಿ ಅಡಿಕೆ ಎಲೆ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ನಂಜಪ್ಪ (60) ಕಳೆದ ಸೋಮವಾರ ರಾತ್ರಿ ನಿಧನರಾಗಿದ್ರು. ಈ ವೇಳೆ, ಹೆಂಡತಿ ತವರು ಮನೆಗೆ ಹೋಗಿದ್ದರು. ಗಂಡ ಹೃದಯಾಘಾತದಿಂದ ಸತ್ತು ಹೋದ ವಿಚಾರ ತಿಳಿದು ತೀವ್ರವಾಗಿ ಮನನೊಂದಿದ್ದ ಸುಶೀಲಮ್ಮ (50) ಸಂತೇಕೆರೆ ಕೋಡಿಕೆರೆಯ ಬಳಿ ಹೋಗಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸಂಬಂಧ ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕೆರೆಯಲ್ಲಿ ಸುಶೀಲಮ್ಮ ಮೃತದೇಹ ಸಿಕ್ಕಿದ್ದು, ಮರಣೋತ್ತರ ಪರೀಕ್ಷೆಯ ನಂತರ ಸಂಬಂಧಿಕರಿಗೆ ಶವ ಹಸ್ತಾಂತರಿಸಲಿದ್ದಾರೆ.