ETV Bharat / state

ಚಿನ್ನದ ದರ ಹೆಚ್ಚಳಕ್ಕೆ ಕಾರಣಗಳೇನು : ಮೈಸೂರು ಚಿನ್ನ ಬೆಳ್ಳಿ ವರ್ತಕರ ಸಂಘದ ಅಧ್ಯಕ್ಷರು ಹೇಳಿದ್ದೇನು? - ETV Bharat kannada News

ಭಾರತದಲ್ಲಿ ಗಗನಕ್ಕೇರಿದ ಚಿನ್ನದ ಬೆಲೆಯಿಂದ ಜನಸಾಮಾನ್ಯರು ಚಿನ್ನ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.

Gold price increase
ಚಿನ್ನದ ದರ ಹೆಚ್ಚಳ
author img

By

Published : Mar 20, 2023, 4:32 PM IST

Updated : Mar 20, 2023, 6:31 PM IST

ಚಿನ್ನದ ದರ ಹೆಚ್ಚಳಕ್ಕೆ ಕಾರಣಗಳೇನು ?

ಮೈಸೂರು : ಕಳೆದ ಮೂರು ತಿಂಗಳಿಂದ ಪ್ರತಿದಿನ ಚಿನ್ನದ ದರ ಹೆಚ್ಚಾಗುತ್ತಲೇ ಇದೆ. ಚಿನ್ನದ ದರ ಹೆಚ್ಚಳವಾಗಲು ಕಾರಣಗಳೇನು, ಯಾವಾಗ ಚಿನ್ನದ ದರ ಕಡಿಮೆ ಆಗಬಹುದು ಎಂಬುದರ ಬಗ್ಗೆ ಮೈಸೂರು ನಗರದ ಚಿನ್ನ ಬೆಳ್ಳಿ ವರ್ತಕರ ಸಂಘದ ಅಧ್ಯಕ್ಷ ಅಮರ್​ನಾಥ್ ಅವರು, 'ಈಟಿವಿ ಭಾರತ' ಪ್ರತಿನಿಧಿಯೊಂದಿಗೆ ಮಾತನಾಡಿ ಸಂಪೂರ್ಣ ಮಾಹಿತಿಯನ್ನು ನೀಡಿದರು.

ಭಾರತದಲ್ಲಿ ಶುಭ ಸಮಾರಂಭ ಮಾಡಲು ಕನಿಷ್ಠ ಅಂದರು ಒಂದು ಗ್ರಾಂ ಆದರೂ ಚಿನ್ನದ ಪ್ರಾಮುಖ್ಯತೆ ಇದ್ದೇ ಇರುತ್ತದೆ. ಆದರೆ, ಪ್ರಸ್ತುತ ಪ್ರತಿನಿತ್ಯ ಚಿನ್ನದ ಬೆಲೆ ದಾಖಲೆಯ ಮಟ್ಟದಲ್ಲಿ ಹೆಚ್ಚಾಗುತ್ತಿರುವುದರಿಂದ ಜನ ಸಾಮಾನ್ಯರಿಗೆ ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನ್ಸರ್ಟಿನಿಟಿ ಹೆಚ್ಚಾಗಿರುವುದು ಒಂದು ಕಾರಣವಾದರೆ. ಮತ್ತೊಂದು ಬಹುಮುಖ್ಯ ಕಾರಣ ಉಕ್ರೇನ್ ಮತ್ತು ರಷ್ಯಾ ನಡುವಿನ ಸುಧೀರ್ಘ ಯುದ್ಧ. ಮುಖ್ಯವಾಗಿ ಅಮೆರಿಕದ ಪ್ರತಿಷ್ಠಿತ ಮೂರು ಬ್ಯಾಂಕ್​ಗಳು ನಷ್ಟ ಅನುಭವಿಸಿರುವುದು. ಈಗ ಜನರು ಡಾಲರ್ ಮೇಲಿನ ಹೂಡಿಕೆಗಿಂತ ಚಿನ್ನದ ಮೇಲಿನ ಹೂಡಿಕೆ ಹೆಚ್ಚು ಮಾಡುತ್ತಿರುವುದು ಸಹ ಚಿನ್ನದ ಬೆಲೆ ಹೆಚ್ಚಾಗಲು ಮುಖ್ಯ ಕಾರಣವಾಗಿದೆ ಎಂದು ಅಮರ್​ನಾಥ್​ ಹೇಳಿದರು.

ಉದಾಹರಣೆಗೆ ರಷ್ಯಾ ದೇಶಕ್ಕೆ ಡಾಲರ್ ನಿರ್ಬಂಧ ಹಾಕಿದರು. ಇದರಿಂದ ಸ್ವಿಫ್ಟ್ ರಿಸರ್ವ್ ಮಾಡುವ ಹಾಗಿಲ್ಲ. ಹಾಗಾಗಿ‌ ಅಮೆರಿಕದಲ್ಲಿ ನಿರ್ಬಂಧ ಹೇರಲಾಗಿದೆ. ಇದರಿಂದ ಭಾರತದಲ್ಲಿ ಜನರು ಆತಂಕದಿಂದ ಮುಂದೊಂದು ದಿನ ಡಾಲರ್​ ನಿರ್ಬಂಧದಿಂದ ಸಮಸ್ಯೆ ಉಂಟಾಗಿ ನಷ್ಟವಾಗಬಹುದು ಎಂದು ತಿಳಿದು ಎಲ್ಲರೂ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ ಎಂದರು.

ಭಾರತ ಈ ವರ್ಷ 1200 ಟನ್ ಚಿನ್ನವನ್ನು ಖರೀದಿ ಮಾಡಿದ್ದು, ಇನ್ನೂ 800 ಟನ್​ ಚಿನ್ನ ಟನ್​ ಖರೀದಿ ಮಾಡಬೇಕಾಗಿದೆ. 1950ರ ನಂತರ ಭಾರತ ವಿಶ್ವಬ್ಯಾಂಕ್​ನಿಂದ ಚಿನ್ನ ಖರೀದಿ ಮಾಡಿರುವುದು ದಾಖಲೆಯಾಗಿದೆ. ಇದಕ್ಕೆ ಕಾರಣ ಗ್ಲೋಬಲ್ ಟೆನ್ಷನ್ ಇರುವುದರಿಂದ ಚಿನ್ನದ ಬೆಲೆ ಕಡಿಮೆಯಾಗುವುದಿಲ್ಲ ಪ್ರಪಂಚದಲ್ಲಿ ಶಾಂತಿ ನೆಲೆಸಿದಾಗ ಮಾತ್ರ ಚಿನ್ನದ ದರ ಕಡಿಮೆ ಆಗುತ್ತದೆ. ಇದರ ಜೊತೆಗೆ ಗೋಲ್ಡ್ ಮೈನಿಂಗ್ ಮಾಡುವ ದೇಶಗಳು ಚಿನ್ನವನ್ನು ಮಾರಾಟ ಮಾಡುತ್ತಿಲ್ಲ,‌ ಅವರೇ ಇಟ್ಟುಕೊಳ್ಳುತ್ತಿದ್ದಾರೆ, ಇದು ಸಹ ಚಿನ್ನದ ದರ ಹೆಚ್ಚಾಗಲು ಕಾರಣವಾಗಿದೆ ಎಂದು ಇದೇ ಸಂದರ್ಭದಲ್ಲಿ ಅಮರ್​ನಾಥ್​ ವಿವರಿಸಿದರು.

ಜನ ಸಾಮಾನ್ಯರಿಗೆ ತೊಂದರೆ : ಭಾರತದಲ್ಲಿ ಚಿನ್ನವಿಲ್ಲದೆ ಮದುವೆ ನಡೆಯುವುದಿಲ್ಲ, ಪ್ರತಿಯೊಂದು ಮದುವೆಗೂ ಚಿನ್ನ ಬೇಕೆ ಬೇಕು. ಆದರೆ ಚಿನ್ನದ ದರ ಹೆಚ್ಚಳದಿಂದ ಸಾಮಾನ್ಯ ಜನರು ಮದುವೆ ಹಾಗೂ ಇತರ ಶುಭ ಸಮಾರಂಭಗಳಿಗೆ ಚಿನ್ನ ಖರೀದಿ ಮಾಡಲು ತುಂಬಾ ತೊಂದರೆಯಾಗಿದೆ. ಇದರ ಜೊತೆಗೆ ಚಿನ್ನದ ಖರೀದಿ ಮೇಲೆ ಶೇ 15% ಕಸ್ಟಮ್ ಶುಲ್ಕ ಜಾಸ್ತಿ ಮಾಡಿದ್ದಾರೆ. ಇದು ಸಹ ಚಿನ್ನದ ದರ ಹೆಚ್ಚಾಗಲು ಕಾರಣವಾಗಿದೆ ಎಂದು ಮೈಸೂರಿನ ಚಿನ್ನ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಮರನಾಥ್ ಅವರು ಚಿನ್ನದ ಬೆಲೆ ಗಗನಕ್ಕೇರುತ್ತಿರುವುದಕ್ಕೆ ಕಾರಣಗಳನ್ನು ತಿಳಿಸಿದರು.

ಇದನ್ನೂ ಓದಿ :ದಿವಾಳಿಯಾದ ಅಮೆರಿಕ ಬ್ಯಾಂಕ್​ಗಳ ನೆರವಿಗೆ ಬಂದ ಉದ್ಯಮಿಗಳು, ಇತರ ಬ್ಯಾಂಕ್​ಗಳು!

Last Updated : Mar 20, 2023, 6:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.