ETV Bharat / state

ಜಂಬೂಸವಾರಿ ಯಶಸ್ವಿಯಾಗಿ ಮುಗಿಸಿದ ಆನೆಗಳ ಈಗಿನ ತೂಕ ಎಷ್ಟು? ಇಲ್ಲಿದೆ ವಿವರ - etv bharat kannada

ಜಂಬೂಸವಾರಿ ಸಂಪನ್ನಗೊಂಡ ಹಿನ್ನೆಲೆಯಲ್ಲಿ ಇಂದು 14 ಆನೆಗಳಿಗೆ ಬೀಳ್ಕೊಡುಗೆ ತೂಕ ಹಾಕುವ ಕಾರ್ಯಕ್ರಮ ನಡೆಯಿತು.

Etv Bharatweight-check-to-14-elephants-after-jambusawari-in-mysuru
ಜಂಬೂಸವಾರಿ ಮುಗಿಸಿದ ಗಜಪಡೆಗೆ ಬೀಳ್ಕೊಡುಗೆ ತೂಕ: ಈಗ ಆನೆಗಳ ತೂಕ ಎಷ್ಟಿದೆ ಗೊತ್ತಾ?
author img

By ETV Bharat Karnataka Team

Published : Oct 25, 2023, 6:25 PM IST

Updated : Oct 25, 2023, 7:02 PM IST

ಡಿಸಿಎಫ್ ಸೌರವ್ ಕುಮಾರ್ ಪ್ರತಿಕ್ರಿಯೆ

ಮೈಸೂರು: ಜಂಬೂಸವಾರಿಯನ್ನು ಯಶಸ್ವಿಯಾಗಿ ಮುಗಿಸಿದ ಅಭಿಮನ್ಯು ನೇತೃತ್ವದ ಗಜಪಡೆ ಗುರುವಾರ ಆನೆ ಶಿಬಿರಗಳಿಗೆ ಮರಳಲಿವೆ. ಈ ಹಿನ್ನೆಲೆಯಲ್ಲಿ ಹದಿನಾಲ್ಕು ಆನೆಗಳಿಗೆ ಜಂಬೂಸವಾರಿ ಮುಗಿಸಿದ ನಂತರ ಬೀಳ್ಕೊಡುಗೆ ತೂಕ ಹಾಕುವ ಕಾರ್ಯಕ್ರಮ ಸಾಂಪ್ರದಾಯಿಕವಾಗಿ ಇಂದು ನಡೆಯಿತು. ಈ ಬಾರಿಯೂ ಜಂಬೂಸವಾರಿಯ ಹಳೆಯ ಕ್ಯಾಪ್ಟನ್ ಅರ್ಜುನನೇ ಅತಿ ಹೆಚ್ಚು ತೂಕ ಹೊಂದಿರುವ ಆನೆ.

ಸೆಪ್ಟೆಂಬರ್ 1 ರಂದು ಗಜಪಯಣದ ಮೂಲಕ 9 ಆನೆಗಳು ಮೈಸೂರಿಗೆ ಆಗಮಿಸಿದ್ದವು. ಸೆಪ್ಟೆಂಬರ್ 5ರಂದು ಅರಮನೆಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಗಿತ್ತು. ಸೆಪ್ಟೆಂಬರ್ 6ರಂದು ಅಭಿಮನ್ಯು ಸೇರಿದಂತೆ 8 ಆನೆಗಳ ತೂಕ ಮಾಡಲಾಗಿತ್ತು. ಸೆಪ್ಟೆಂಬರ್ 25ರಂದು ಅರಮನೆಗೆ ಆಗಮಿಸಿದ 6 ಆನೆಗಳ ತೂಕ ಹಾಕುವ ಕಾರ್ಯ ನಡೆದಿದೆ. ಈಗ ಎರಡನೇ ಬಾರಿಗೆ ತೂಕ ಹಾಕಲಾಗಿದ್ದು, 14 ಆನೆಗಳ ತೂಕದ ವಿವರ ಹೀಗಿದೆ.

ಅರ್ಜುನ ಆನೆ ಬಂದಾಗ 5,680 ಕೆ.ಜಿ ತೂಕವಿದ್ದು, ಜಂಬೂಸವಾರಿ ಮುಗಿದ ನಂತರ ಎರಡನೇ ಬಾರಿ ತೂಕ ಹಾಕಿದಾಗ 5,850 ತೂಕ ಹೊಂದಿದೆ. ಅಭಿಮನ್ಯು ಆನೆ ಮೊದಲಿಗೆ 5,160 ಈಗ 5,460, ಭೀಮ ಬಂದಾಗ 4,370 ಈಗ 4,870, ಮಹೇಂದ್ರ ಆನೆ ಮೊದಲು 4,530 ಈಗ 4,835, ಧನಂಜಯ ಆನೆ ಬಂದಾಗ 4,940 ಈಗ 5,180, ಗೋಪಿ ಬಂದಾಗ 5,080 ಈಗ 5,240, ಕಂಜನ್ ಬಂದಾಗ 4,240 ಈಗ 4,505 ತೂಕ ಹೊಂದಿವೆ. ವಿಜಯ ಆನೆ ಬಂದಾಗ 2,830 ಈಗ 2,845, ವರಲಕ್ಷ್ಮಿ ಆನೆ ಬಂದಾಗ 3,020 ಈಗ 3,225, ಸುಗ್ರೀವ ಬಂದಾಗ 5,035 ಈಗ 5,310, ಪ್ರಶಾಂತ ಬಂದಾಗ 4,970 ಈಗ 5,215, ರೋಹಿತ ಬಂದಾಗ 3,350 ಈಗ 3,620, ಹಿರಣ್ಯ ಬಂದಾಗ 2,915 ಈಗ 3,025, ಲಕ್ಷ್ಮಿ ಬಂದಾಗ 3,235 ಈಗ 3,365 ತೂಕ ಹೊಂದಿವೆ. ಈ ಮೂಲಕ ಜಂಬೂಸವಾರಿಗೆ ಆಗಮಿಸಿದ್ದ ಎಲ್ಲಾ ಆನೆಗಳು ತೂಕ ಹೆಚ್ಚಿಸಿಕೊಂಡಿವೆ.

ಡಿಸಿಎಫ್ ಸೌರವ್ ಕುಮಾರ್ ಮಾತನಾಡಿ, "ಜಂಬೂಸವಾರಿ ಯಶಸ್ವಿಯಾಗಿ ಮುಗಿದಿದೆ. ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ" ಎಂದರು. ಇದೇ ವೇಳೆ, ನಿನ್ನೆ ಅಭಿಮನ್ಯು ನೇತೃತ್ವದ ಆನೆಗಳು ಮೆರವಣಿಗೆ ಮುಂಭಾಗದಲ್ಲಿ ಹೋಗುವಾಗ ಅರಮನೆ ಮುಂಭಾಗದ ಸಾಲಿನಲ್ಲಿ ಬರದೇ ನೇರವಾಗಿ ಬನ್ನಿ ಮಂಟಪದ ಕಡೆ ಹೊರಟಿದ್ದ ಕಾರಣ ತಿಳಿಸಿದ ಡಿಸಿಎಫ್, "ಪೊಲೀಸರು ಹಾಗೂ ಮಾವುತರ ನಡುವೆ ಯಾವುದೇ ಕಿರಿಕಿರಿ ಆಗಲಿಲ್ಲ. ಭದ್ರತಾ ದೃಷ್ಟಿಯಿಂದ ಪೊಲೀಸರು ತಮ್ಮ ಕೆಲಸ ಮಾಡಿದ್ದಾರೆ" ಎಂದ ಅವರು, "ಅರಮನೆಯಿಂದ ಬನ್ನಿ ಮಂಟಪದವರೆಗೆ ಜಂಬೂಸವಾರಿ ಹೊತ್ತ ಅಭಿಮನ್ಯು ಆನೆ ಸುಮಾರು 2 ಗಂಟೆ ಸಮಯ ತೆಗೆದುಕೊಂಡಿತು. ಭಾರಿ ಜನಸ್ತೋಮದ ನಡುವೆ ಯಶಸ್ವಿಯಾಗಿ ಮೆರವಣಿಗೆ ಮುಗಿಸಿದೆವು" ಎಂದು ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮೈಸೂರು: ಲಿಂಗಾಂಬುಧಿ ಸಸ್ಯ ಶಾಸ್ತ್ರೀಯ ತೋಟ‌ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

Last Updated : Oct 25, 2023, 7:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.