ETV Bharat / state

ಮೈಸೂರು ಭೂ ಅಕ್ರಮಗಳ ತನಿಖೆಗೆ ರೋಹಿಣಿ ಸಿಂಧೂರಿ ನೇಮಿಸಿ; ವಿಶ್ವನಾಥ್ ಮನವಿ

ವರ್ಗಾವಣೆಗೂ ಮುನ್ನಾ ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ ತನಿಖೆಗೆ ಆದೇಶಿಸಿದ್ದ ಭೂ ಹಗರಣ ಸಂಬಂಧ ಪರಿಷತ್ ಸದಸ್ಯ ಹೆಚ್​​.ವಿಶ್ವನಾಥ್​ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಕುರಿತ ತನಿಖೆಗಾಗಿ ನೂತನ ಡಿಸಿ ಬಗಾದಿ ಗೌತಮ್​ ಅವರಿಗೆ ಮನವಿ ಮಾಡಿದ್ದಾರೆ.

Viswanath, Rohini Sindhuri
ವಿಶ್ವನಾಥ್, ರೋಹಿಣಿ ಸಿಂಧೂರಿ
author img

By

Published : Jun 10, 2021, 1:08 PM IST

ಮೈಸೂರು: ನಗರದಲ್ಲಿ ನಡೆಯುತ್ತಿರುವ ಭೂ ಅಕ್ರಮಗಳ ‌ವಿಶೇಷ ತನಿಖೆಗೆ ರೋಹಿಣಿ ಸಿಂಧೂರಿ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಿ ಎಂದು ಜಿಲ್ಲಾಧಿಕಾರಿಗಳಿಗೆ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಮನವಿ ಸಲ್ಲಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇಂದು ಮೈಸೂರಿನ ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಹೆಚ್. ವಿಶ್ವನಾಥ್ ಮೈಸೂರು ಸುತ್ತ ಮುತ್ತ ನಡೆಯುತ್ತಿರುವ ಭೂ ಅಕ್ರಮಗಳ ತನಿಖೆಗಾಗಿ ಶೀಘ್ರವೇ ರೋಹಿಣಿ ಸಿಂಧೂರಿ ಅವರನ್ನು ವಿಶೇಷ ತನಿಖಾಧಿಕಾರಿಯಾಗಿ 6 ತಿಂಗಳು ನೇಮಿಸಿ ತನಿಖೆ ಮಾಡಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಭೂ ಹಗರಣಗಳ ಬಗ್ಗೆ 4 ಆದೇಶ ಮಾಡಿದ್ದು ಈ ಬಗ್ಗೆ ತನಿಖೆ ನಡೆಸಬೇಕು. ರಾಜಕಾಲುವೆ ಮೇಲೆ ಸಾ.ರಾ.ಮಹೇಶ್ ಕಲ್ಯಾಣಮಂಟಪ ನಿರ್ಮಾಣವಾಗಿದೆ. ಜೊತೆಗೆ ಜನಪ್ರತಿನಿಧಿಗಳು ರೀಯಲ್ ಎಸ್ಟೇಟ್ ವ್ಯವಹಾರದವರು ಸಾವಿರಾರು ಎಕರೆ ಭೂಮಿಯನ್ನು ಕಬಳಿಸಿದ್ದಾರೆ, ಅದರ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ಇನ್ನೂ ಪಾಲಿಕೆಯ ಆಯುಕ್ತೆಯಾಗಿದ್ದ ಶಿಲ್ಪಾನಾಗ್ ಒಳ್ಳೆಯ ಅಧಿಕಾರಿ. ಆದರೆ ಅವರ ಹೆಗಲ ಮೇಲೆ ಬಂದೂಕು ಇಟ್ಟು ರೋಹಿಣಿ ಸಿಂಧೂರಿಗೆ ಶೂಟ್ ಮಾಡಿದ್ದಾರೆ ಎಂದು ಆರೋಪಿಸಿದರು.

ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ ಆರೋಪ ಕುರಿತು ಹೆಚ್​ ವಿಶ್ವನಾಥ್ ಪ್ರತಿಕ್ರಿಯೆ

ಶಿಲ್ಪಾನಾಗ್ ಅವರನ್ನು ಬಲಿಪಶು ಮಾಡಿ ರೋಹಿಣಿ ಸಿಂಧೂರಿಯವರನ್ನು ಓಡಿಸಿದ್ದಾರೆ. ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಒಂದೇ ಕಲ್ಲಿನಲ್ಲಿ ಇಬ್ಬರು ಅಧಿಕಾರಿಗಳನ್ನು ಹೊರ ಹಾಕಿದ್ದಾರೆ ಎಂದು ಆರೋಪಿಸಿದರು. ಶನಿವಾರ ಬೆಂಗಳೂರಲ್ಲಿ ಮುಖ್ಯಕಾರ್ಯದರ್ಶಿ ಅವರನ್ನು ಭೇಟಿಯಾಗಿ ರೋಹಿಣಿ ಸಿಂಧೂರಿ ಅವರನ್ನು 6 ತಿಂಗಳ ಕಾಲ ಭೂ ಹಗರಣದ ಹಾಗೂ ಚಾಮುಂಡಿ ಬೆಟ್ಟದ ಸುತ್ತ ಮುತ್ತಲು ಒತ್ತುವರಿಯಾಗಿರುವ ಭೂಮಿಯನ್ನು ತೆರವುಗೊಳಿಸುವ ಬಗ್ಗೆ ವಿಶೇಷ ಅಧಿಕಾರಿಯಾಗಿ ರೋಹಿಣಿ ಸಿಂಧೂರಿ ಅವರನ್ನು ನೇಮಿಸುವಂತೆ ಮನವಿ ಮಾಡುತ್ತೇನೆ ಎಂದರು.

ಇನ್ನೂ ಮೈಸೂರಿನಿಂದ ಸಿಂಧೂರಿಯವರ ವರ್ಗಾವಣೆಗೆ ಭೂ ಮಾಫಿಯಾದವರೇ ಕಾರಣ ಎಂದು ಇದೇ ಸಂದರ್ಭದಲ್ಲಿ ವಿಶ್ವನಾಥ್ ಪರೋಕ್ಷವಾಗಿ ಸಾ.ರಾ.ಮಹೇಶ್​​​ಗೆ ತಿರುಗೇಟು ನೀಡಿದರು.

ಓದಿ: ರೋಹಿಣಿ ಸಿಂಧೂರಿ ವಿರುದ್ಧ ನಾಳೆ ಸಾ.ರಾ.ಮಹೇಶ್ ಏಕಾಂಗಿ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.