ETV Bharat / state

ಮಹಾಪುರುಷರು ತಂದುಕೊಟ್ಟ ಸ್ವಾತಂತ್ರ್ಯ ಕೈತಪ್ಪಿಹೋಗದಂತೆ ನೋಡಿಕೊಳ್ಳಬೇಕು: ಪೇಜಾವರ ಶ್ರೀ - Thinker Nityananda Viveka Vamshi

ಬಾಲಗಂಗಾಧರ ತಿಲಕ್ ಸಾರ್ವಜನಿಕ ಗಣೇಶೋತ್ಸವ ಆಚರಣೆ ಮಾಡುವ ಮೂಲಕ ಜನರನ್ನು ಒಗ್ಗೂಡಿಸಿ ಸ್ವಾತಂತ್ರ್ಯವನ್ನು ತಂದು ಕೊಟ್ಟಿದ್ದಾರೆ ಎಂದು ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

vishwaprasanna-theertha-swamiji-speech-in-167th-birth-anniversary-of-balagangadhar-tilak
ಬಾಲಗಂಗಾಧರ ತಿಲಕರು ಪಟ್ಟಿರುವ ಶ್ರಮ ಊಹಿಸಲೂ ಅಸಾಧ್ಯ: ಪೇಜಾವರ ಶ್ರೀ
author img

By

Published : Jul 23, 2023, 10:56 PM IST

Updated : Jul 23, 2023, 11:02 PM IST

ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಮೈಸೂರು: ಸ್ವಾತಂತ್ರ್ಯ ಪೂರ್ವದಲ್ಲಿ ಗಣೇಶೋತ್ಸವ ಆಚರಣೆ ಮಾಡುವ ಮೂಲಕ ಜನರನ್ನು ಒಟ್ಟು ಸೇರಿಸಿ, ಶ್ರಮಪಟ್ಟು ನಮಗೆ ಸ್ವಾತಂತ್ರ್ಯ ತಂದು ಕೊಟ್ಟವರು ಬಾಲಗಂಗಾಧರ ತಿಲಕ್ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. ವೀರ ಸಾವರ್ಕರ್ ಯುವಬಳಗದ ವತಿಯಿಂದ ಭಾನುವಾರ ಸಂಜೆ ನಗರದ ತಿಲಕ್ ನಗರದಲ್ಲಿ ಆಯೋಜಿಸಿದ್ದ ಬಾಲಗಂಗಾಧರ ತಿಲಕರ 167ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಲೋಕ ಮಾನ್ಯ ಬಾಲಗಂಗಾಧರ ತಿಲಕರ 167ನೇ ಜಯಂತ್ಯುತ್ಸವವನ್ನು ತಿಲಕ್​ ನಗರದಲ್ಲಿ ಆಚರಿಸುತ್ತಿರುವುದು ಅತ್ಯಂತ ಮಹತ್ವಪೂರ್ಣದ್ದಾಗಿದೆ. ನಾವು ಇವರಿಗೆ ಎಷ್ಟು ಕೃತಜ್ಞತೆಗಳನ್ನು ಸಲ್ಲಿಸಿದರು ಅದು ಕಡಿಮೆ. ಯಾಕೆಂದರೆ ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟವರು ಅವರು. ಅವರು ಪಟ್ಟಿರುವ ಶ್ರಮ ಊಹಿಸಲೂ ಅಸಾಧ್ಯ. ಹಿಂದೆ ನಮ್ಮ ಸಮಾಜವನ್ನು ಒಗ್ಗೂಡಿಸುವುದೇ ದೊಡ್ಡ ಕಷ್ಟಕರವಾದ ಕಾರ್ಯವಾಗಿತ್ತು. ಅವರು ಸಾರ್ವಜನಿಕ ಗಣೇಶೋತ್ಸವ ಆಚರಣೆ ಮಾಡುವ ಮೂಲಕ ಜನರನ್ನು ಒಗ್ಗೂಡಿಸಿ ಸ್ವಾತಂತ್ರ್ಯವನ್ನು ತಂದು ಕೊಟ್ಟಿದ್ದಾರೆ ಎಂದರು.

ಸಮಾಜದಲ್ಲಿ ಒಗ್ಗಟ್ಟಾಗಿ ಉಳಿದರೆ ಮಾತ್ರ ಅ ಸ್ವಾತಂತ್ರ್ಯ ಉಳಿಯುತ್ತದೆ: ಅವರನ್ನು ನಾವು ಸದಾ ನೆನಪಿಸಿಕೊಳ್ಳಬೇಕು, ಜೊತೆಗೆ ನಾವು ಅವರಿಗೆ ಕೊಡಬೇಕಾದ ಗೌರವ ಎಂದರೆ, ಅವರು ಏನು ಸ್ವಾತಂತ್ರ್ಯವನ್ನು ದೊರಕಿಸಿ ಕೊಟ್ಟು ಹೋಗಿದ್ದಾರೆಯೋ ನಾವು ಅದನ್ನು ಕೈತಪ್ಪಿ ಹೋಗದಂತೆ ಸಮಾಜದಲ್ಲಿ ಒಗ್ಗಟ್ಟಾಗಿ ಉಳಿದರೆ ಮಾತ್ರ ಅ ಸ್ವಾತಂತ್ರ್ಯ ಉಳಿಯುತ್ತದೆ. ನಮ್ಮೊಳಗೆ ನಾವು ಒಡಕು ಸೃಷ್ಟಿಸಿಕೊಂಡು ಇಲ್ಲ ಸಲ್ಲದ ವಿಚಾರಕ್ಕೆ ಜಗಳವಾಡುತ್ತಿದ್ದರೆ ಮೂರನೇಯವರು ಮಧ್ಯಪ್ರವೇಶಿಸಿ ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಾರೆ. ಇದಕ್ಕೆ ಅವಕಾಶ ಮಾಡಿಕೊಡದೆ ಒಗ್ಗಟ್ಟಿನಿಂದ ಸಮಾಜದಲ್ಲಿ ಬದುಕಿದರೇ ಇದೇ ನಾವು ಅವರಿಗೆ ಕೊಡುವ ದೊಡ್ಡ ಗೌರವ ಎಂದು ಶ್ರೀಗಳು ಕಿವಿಮಾತು ಹೇಳಿದರು.

ವಿವೇಕ ವಿದ್ಯಾ ವಾಹಿನಿ ಸ್ಥಾಪಕರು ಹಾಗೂ ಚಿಂತಕ ನಿತ್ಯಾನಂದ ವಿವೇಕ ವಂಶಿ ಅವರು ಮಾತನಾಡಿ, ನಗರಗಳಲ್ಲಿ ಮಹನೀಯರ ಹೆಸರುಗಳನ್ನು ವೃತ್ತಗಳು, ರಸ್ತೆಗಳಿಗೆ ಇಡುತ್ತಾರೆ ಇದು ಒಳ್ಳೆಯದೆ ಆದರೆ ಆ ಹೆಸರುಗಳು ಚಿಕ್ಕದಾಗಿ ಕರೆಯುವ ಮೂಲಕ ಅರ್ಥಹೀನವಾಗುವಂತಾಗಿದೆ. ಮಹಾಪುರುಷರ ಹೆಸರುಗಳನ್ನು ಅವರು ಸದಾ ಜನಮಾನಸದಲ್ಲಿ ಇರಬೇಕು ಎಂಬ ಒಳ್ಳೆಯ ಉದ್ದೇಶದಿಂದ ಇಡಲಾಗುತ್ತದೆ. ಅವರ ಜಯಂತಿ ಆಚರಿಸುವ ಮೂಲಕ ಮಹಾಪುರುಷರ ಸ್ಮರಣೆ ಮಾಡಬೇಕಿದೆ. ಅದೃಷ್ಟವಶಾತ್ ಇಲ್ಲಿ ತಿಲಕ್ ನಗರ ಎಂಬ ಹೆಸರಿಡಲಾಗಿದೆ, ಇದನ್ನು ಚಿಕ್ಕದಾಗಿ ಕರೆಯಲು ಆಗುವುದಿಲ್ಲ. ಈ ಹೆಸರಿಟ್ಟವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು.

ಶಾಸಕ ಶ್ರೀವತ್ಸ ಮಾತನಾಡಿ, ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಚಾತುರ್ಮಾಸ್ಯದ ಸಂದರ್ಭದಲ್ಲಿ ಮೈಸೂರಿನಲ್ಲಿ ಒಂದಷ್ಟು ಸಮಾಜಮುಖಿ ಕೆಲಸ ಮಾಡಲು ಸಂಕಲ್ಪ ಮಾಡಿದ್ದಾರೆ. ಬಡವರ ಕಲ್ಯಾಣ ಮಾಡಲು ಇಚ್ಛಿಸಿದ್ದಾರೆ ಎಂದು ತಿಳಿಸಿದರು. ಇನ್ನು ಈ ವೇಳೆ ಮಾಜಿ ಶಾಸಕರಾದ ಎಲ್ ನಾಗೇಂದ್ರ, ವೀರ ಸಾವರ್ಕರ್ ಯುವ ಬಳಗದ ಅಧ್ಯಕ್ಷರಾದ ರಾಕೇಶ್ ಭಟ್, ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷ ಜಗದೀಶ್ ಹೆಬ್ಬಾರ್ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ಉತ್ತರಕನ್ನಡ, ಶಿವಮೊಗ್ಗದಲ್ಲಿ ಭಾರಿ ಮಳೆ ಮುನ್ಸೂಚನೆ.. ಸೋಮವಾರ ಶಾಲಾ ಕಾಲೇಜುಗಳಿಗೆ ರಜೆ

Last Updated : Jul 23, 2023, 11:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.