ಮೈಸೂರು : ರಾಜ್ಯದಲ್ಲಿ ಕೊರೊನಾ ಹಾಟ್ಸ್ಪಾಟ್ ಆಗಿರುವ ಮೈಸೂರು ಜಿಲ್ಲೆಯಲ್ಲಿ ಈಗಾಗಲೇ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಆದರೂ ಕೂಡಾ ಇಲ್ಲಿನ ಶಾಂತಿನಗರ, ಉದಯಗಿರಿ, ಗೌಸಿನಗರ, ರಾಜೀವ್ ನಗರಗಳಲ್ಲಿ ಯಾವುದೇ ಲಾಕ್ಡೌನ್ ನಿಯಮ ಪಾಲಿಸದೇ ಜನರು ಮನಸೋ ಇಚ್ಛೆಯಾಗಿ ಸಂಚರಿಸುವುದು ಕಂಡು ಬಂತು.
ಕೆಲವೆಡೆ ದ್ವಿಚಕ್ರ ವಾಹನಗಳಲ್ಲಿ ಯಾವುದೇ ಭಯವಿಲ್ಲದೆ ಸವಾರರು ಸಂಚರಿಸಿದ್ರೆ, ಮಾಂಸ ಖರೀದಿ ಬರದಲ್ಲಿ ಜನರು ಮುಂದೆ ಸಾಮಾಜಿಕ ಅಂತವರವನ್ನೇ ಗಾಳಿಗೆ ತೂರಿದರು. ವ್ಯಾಪಾರಿಗಳು ಇದ್ಯಾವುದನ್ನೂ ತಲೆಗೆ ಹಾಕಿಕೊಳ್ಳದೇ ವ್ಯಾಪಾರದಲ್ಲಿ ನಿರತರಾಗಿದ್ದರು.