ETV Bharat / state

'ಮುಖ್ಯಮಂತ್ರಿ ಬದಲಾವಣೆ ಬೇಡ, ಮಾಡಿದ್ರೆ ಮತ್ತೆ ಲಿಂಗಾಯಿತರನ್ನೇ ಸಿಎಂ ಮಾಡಿ'

author img

By

Published : Jul 23, 2021, 3:01 PM IST

Updated : Jul 23, 2021, 3:11 PM IST

ಸಿಎಂ ಬದಲಾವಣೆ ವಿಚಾರ ತಾರಕಕ್ಕೆ ಏರುತ್ತಿದೆ. ರಾಜ್ಯದಲ್ಲಿ ಈ ಬಗ್ಗೆ ಪರ- ವಿರೋಧದ ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಮಠಾಧೀಶರಂತೂ ಯಡಿಯೂರಪ್ಪರನ್ನು ಕೆಳಗಿಳಿಸಿದರೆ ಪರಿಣಾಮ ನೆಟ್ಟಗಿರೋಲ್ಲ ಎಂದು ಬಹಿರಂಗ ಎಚ್ಚರಿಕೆ ನೀಡುತ್ತಿದ್ದಾರೆ. ಇದೆಲ್ಲದರ ನಡುವೆ ಮತ್ತಷ್ಟು ಬೆಳವಣಿಗೆಗಳು..

'ಮುಖ್ಯಮಂತ್ರಿ ಬದಲಾವಣೆ ಬೇಡ, ಮಾಡಿದ್ರೆ ಮತ್ತೇ ಲಿಂಗಾಯಿತರನ್ನೇ ಸಿಎಂ ಮಾಡಿ'

ಮೈಸೂರು: ಮುಖ್ಯಮಂತ್ರಿ ಅವರನ್ನು ಬದಲಾವಣೆ ಮಾಡಬೇಡಿ, ಮಾಡಿದರೆ ಲಿಂಗಾಯತ ಸಮುದಾಯದವರಿಗೇ ಸಿಎಂ ಸ್ಥಾನ ನೀಡಿ ಎಂದು ಮೈಸೂರು ಜಿಲ್ಲಾ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಆಗ್ರಹಿಸಿದೆ.

ಇಂದು ಮೈಸೂರಿನ ಪತ್ರಿಕಾ ಭವನದಲ್ಲಿ ಮಾಧ್ಯಮಗೋಷ್ಠಿ‌ ಉದ್ದೇಶಿಸಿ ಮಾತನಾಡಿದ ಮಹಾಸಭಾದ ಜಿಲ್ಲಾ‌ ಘಟಕದ ಪದಾಧಿಕಾರಿಗಳ ಪರವಾಗಿ ಲೋಕೇಶ್ ಮಾತನಾಡಿ, ಯಡಿಯೂರಪ್ಪ ಅವರನ್ನು ಪದಚ್ಯುತಿಗೊಳಿಸಲು ಮುಂದಾಗಿರುವ ಬಿಜೆಪಿ ಹೈಕಮಾಂಡ್ ನಿಲುವಿಗೆ ವಿರೋಧ ವ್ಯಕ್ತಪಡಿಸಿದರು.

ಮೈಸೂರು ಪತ್ರಿಕಾ ಭವನದಲ್ಲಿ ಜಿಲ್ಲಾ ವೀರಶೈವ-ಲಿಂಗಾಯತ ಮಹಾ ಸಭಾದ ಸದಸ್ಯ ಲೋಕೇಶ್ ಮಾತನಾಡಿದರು.

ಇದನ್ನೂ ಓದಿ: ಕ್ಷೇತ್ರದಲ್ಲಿದ್ದು ನೆರೆ ಪರಿಹಾರ ಕಾರ್ಯ ಮಾಡಲೇಬೇಕು: MLAs, Ministersಗಳಿಗೆ ಸಿಎಂ ಖಡಕ್​ ಸೂಚನೆ

ಕಳೆದ ಚುನಾವಣೆಯಲ್ಲಿ ಯಡಿಯೂರಪ್ಪ ಅವರಿಂದ ಇಡೀ ಸಮುದಾಯವೇ ಅವರ ಪರವಾಗಿ ಬೆಂಬಲ ನೀಡಿ 58 ಶಾಸಕರ ಆಯ್ಕೆಗೆ ಕಾರಣವಾಯಿತು. ಈಗ ಅವರನ್ನು ವಯಸ್ಸಿನ ಕಾರಣ ನೀಡಿ ಕೆಳಗಿಸುವುದು ಸರಿಯಲ್ಲ. ಕೊರೊನಾ ಸಂದರ್ಭದಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ‌. ಒಂದು ವೇಳೆ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ವೀರಶೈವ ಲಿಂಗಾಯತರನ್ನೇ ಮುಖ್ಯಮಂತ್ರಿ ಸ್ಥಾನಕ್ಕೆ ನೇಮಕ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿಗೆ ಇದೇ ಮುಳುವಾಗಲಿದೆ ಎಂದು ಎಚ್ಚರಿಸಿದರು‌.

Last Updated : Jul 23, 2021, 3:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.