ETV Bharat / state

ಮೈಸೂರು ಬಸ್​​ ನಿಲ್ದಾಣ ವಿವಾದ.. ಇಬ್ಬರು ಅವಿವೇಕಿಗಳ ಜಗಳ ವಾಟಾಳ್ ವಾಗ್ದಾಳಿ - ಈಟಿವಿ ಭಾರತ ಕನ್ನಡ

ಮೈಸೂರು ಬಸ್ ನಿಲ್ದಾಣದಲ್ಲಿನ ಗುಂಬಜ್​ ತೆಗೆದಿದ್ದು ಸರಿಯಲ್ಲ. ಇದು ಇಬ್ಬರು ಅವಿವೇಕಿಗಳ ಜಗಳ. ಇದರಿಂದ ಮೈಸೂರಿಗೆ ಒಳ್ಳೆಯದಾಗುವುದಿಲ್ಲ ಎಂದು ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Vatal nagaraj slams prathap simha at mysore
ಮೈಸೂರು ಬಸ್​​ ನಿಲ್ದಾಣ ವಿವಾದ :ಇಬ್ಬರು ಅವಿವೇಕಿಗಳ ಜಗಳ...ವಾಟಾಳ್ ವಾಗ್ದಾಳಿ
author img

By

Published : Nov 27, 2022, 6:49 PM IST

ಮೈಸೂರು : ಮೈಸೂರು ಗುಂಬಜ್ ಮಾದರಿ ಬಸ್​ ನಿಲ್ದಾಣ ವಿಚಾರದಲ್ಲಿ ಸಂಸದ, ಶಾಸಕರ ಕಿತ್ತಾಟವನ್ನು ಅವಿವೇಕಿಗಳ ಜಗಳ ಎಂದು ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ.

ನಗರದಲ್ಲಿ ಪ್ರತಿಭಟನೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಸದ ಪ್ರತಾಪ್ ಸಿಂಹಗೆ ತಲೆನೂ ಇಲ್ಲ ಬುದ್ಧಿನೂ ಇಲ್ಲ. ಅತ್ಯಂತ ಸಣ್ಣ ವ್ಯಕ್ತಿ. ಕೆಲಸ ಮಾಡುವುದನ್ನು ಬಿಟ್ಟು ಒಂದಲ್ಲ ಒಂದು ರಗಳೆ ತೆಗೆಯುತ್ತಿದ್ದಾರೆ. ಇತ್ತೀಚಿಗೆ ರೈಲಿಗೆ ಟಿಪ್ಪು ಎಕ್ಸ್ ಪ್ರೆಸ್ ಹೆಸರನ್ನು ಬದಲಾಯಿಸಿ, ಒಡೆಯರ್ ಎಕ್ಸ್​ಪ್ರೆಸ್​ ಎಂದು ಹೆಸರಿಟ್ಟರು. ಹೆಸರು ಬದಲಾಯಿಸಿದ ತಕ್ಷಣ ಮೈಸೂರು ಆಕಾಶಕ್ಕೆ ಹೊರಟು ಹೋಯ್ತಾ? ಎಂದು ಪ್ರಶ್ನಿಸಿದರು.

ಮೈಸೂರು ಹಾಗೂ ರೈಲ್ವೆ ನಿಲ್ದಾಣ ಹಾಗೆ ಉಳಿದಿದೆ. ಬಸ್ ನಿಲ್ದಾಣದಲ್ಲಿನ ಗುಂಬಜ್​ ತೆಗೆದಿದ್ದು ಸರಿಯಲ್ಲ. ತಲೆಗೊಂದು ಟೋಪಿ ಹಾಕಿ ಲಾಂಗ್ ಕೋಟ್ ಹಾಕೊಂಡ್ ಬಂದ್ರೆ ನಾನು ಮುಸಲ್ಮಾನ ಆಗಿ ಬಿಡ್ತಿನಾ?. ಇದು ಸಣ್ಣತನ, ಅವಿವೇಕತನ. ಇದರಿಂದ ಮೈಸೂರಿಗೆ ಒಳ್ಳೆಯದಾಗುವುದಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಮೈಸೂರು ಬಸ್​​ ನಿಲ್ದಾಣ ವಿವಾದ : ಇಬ್ಬರು ಅವಿವೇಕಿಗಳ ಜಗಳ ; ವಾಟಾಳ್ ವಾಗ್ದಾಳಿ

ಸುಳ್ಳು ಬರೆದು ಜನರನ್ನು ಹಾದಿ ತಪ್ಪಿಸುವುದು ಸರಿಯಲ್ಲ : ಟಿಪ್ಪು ನಿಜ ಕನಸುಗಳು ನಾಟಕ ವಿಚಾರವಾಗಿ ಮಾತನಾಡಿ, ಅಡ್ಡಂಡ ಕಾರ್ಯಪ್ಪ ಅವರೇ ನೀವು ಪುಸ್ತಕದಲ್ಲಿ ಬರೆದಿದ್ದು ನಿಜವೇ? ಹೀಗೆ ಸುಳ್ಳು ಬರೆದು ಜನರನ್ನು ಎತ್ತಿ ಕಟ್ಟುವುದರಿಂದ ಬಡತನ ನಿವಾರಣೆಯಾಗುತ್ತದಾ?. ಸುಳ್ಳು ಬರೆದು ಜನರನ್ನು ದಿಕ್ಕು ತಪ್ಪಿಸುವುದು ಒಳ್ಳೆಯದಲ್ಲ. ಕನ್ನಂಬಾಡಿ ಕಟ್ಟಬೇಕೆನ್ನುವುದು ಟಿಪ್ಪು ಕನಸಾಗಿತ್ತು. ಬೇಕಿದ್ದರೆ ಕನ್ನಂಬಾಡಿ ಬಾಗಿಲಿಗೆ ಹೋಗಿ ಶಾಸನ ಇದೆ ನೋಡಿ ಬರಲಿ ಎಂದು ಕಿಡಿಕಾರಿದರು.

ಕರ್ನಾಟಕದ ಒಂದಗಲ ಜಾಗವನ್ನು ಬಿಟ್ಟುಕೊಡುವುದಿಲ್ಲ : ಕರ್ನಾಟಕ-ಮಹಾರಾಷ್ಟ್ರ ಗಡಿ ವಿಚಾರವಾಗಿ, ಮಹಾರಾಷ್ಟ್ರದಲ್ಲಿ ಸಂಘಟನೆಯವರು ಗೂಂಡಾಗಳಂತೆ ವರ್ತಿಸುತ್ತಿದ್ದಾರೆ. ನಮ್ಮ ಸಾರಿಗೆ ಬಸ್​​ಗಳಿಗೆ ಕಲ್ಲು ಹೊಡೆದರೆ, ಮಸಿ ಬಳಿದರೆ ತಕ್ಕ ಪಾಠ ಕಲಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬೆಳಗಾವಿ ಸುತ್ತಮುತ್ತಲಿನ ನಮ್ಮ ಶಾಸಕರು ಮರಾಠರ ಎಂಜೆಂಟರಂತೆ ವರ್ತಿಸುತ್ತಿದ್ದಾರೆ. ಬೆಳಗಾವಿ ನಮ್ಮದು ಕರ್ನಾಟಕದ ಒಂದಗಲ ಜಾಗವನ್ನು ನಾವು ಬಿಟ್ಟುಕೊಡುವುದಿಲ್ಲ ಎಂದು ಹೇಳಿದರು.

ನಮ್ಮ ಬಸ್ ಗಳಿಗೆ ಮಸಿ ಬಳೆದರೆ ಮಹಾರಾಷ್ಟ್ರದ ಮೇಲೆ ದೊಡ್ಡ ದಾಳಿ ಮಾಡುತ್ತೇವೆ. ಗಡಿಗಳನ್ನು ಬಂದ್ ಮಾಡಿ ಮಹಾರಾಷ್ಟ್ರದವರನ್ನು ಒಳಗೆ ಬರಲು ಬಿಡುವುದಿಲ್ಲ ಎಂದು ಎಂಇಎಸ್ ಸಂಘಟನೆ ಹಾಗೂ ಮಹಾರಾಷ್ಟ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಮಹಾ ಸರಕಾರದಿಂದ ರಾಜಕೀಯ : ಗಡಿ ಸಮಸ್ಯೆ ಈಗಾಗಲೇ ಮುಗಿದು ಹೋಗಿದೆ. ಆದರೆ, ಮಹಾರಾಷ್ಟ್ರದದವರು ರಾಜಕಾರಣಕೋಸ್ಕರ ಈ ಗಡಿ ಸಮಸ್ಯೆ ತೆಗೆಯುತ್ತಿದ್ದಾರೆ. ಗಡಿ ವಿಚಾರವಾಗಿ ಗೂಂಡಾಗಿರಿ ಮಾಡುತ್ತಿದ್ದಾರೆ. ರೌಡಿಗಳ ರೀತಿ ವರ್ತಿಸಿ ಅವಿವೇಕವನ್ನು ಪ್ರದರ್ಶಿಸುತ್ತಿದ್ದಾರೆ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ತಕ್ಕ ಉತ್ತರ ನೀಡಬೇಕು ಎಂದು ಹೇಳಿದರು.

ಇದನ್ನೂ ಓದಿ : ಸಂಸತ್ತಿನ ಮುಂದೆ ಟಿಪ್ಪು ಸುಲ್ತಾನ್ ಪ್ರತಿಮೆ ನಿಲ್ಲಿಸಬೇಕು: ವಾಟಾಳ್ ನಾಗರಾಜ್ ಒತ್ತಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.