ETV Bharat / state

ಮುಂದಿನ‌ ಸಾರಿ ಮೋದಿ ರಾಜ್ಯಕ್ಕೆ ಬಂದರೆ ಕರ್ನಾಟಕ ಬಂದ್: ವಾಟಾಳ್​​ ನಾಗರಾಜ್ - vatal nagaraj protest in mysore

ಕರ್ನಾಟಕಕ್ಕೆಸಂಪೂರ್ಣ ಪ್ರವಾಹ ಪರಿಹಾರ ನೀಡದೆ ಪ್ರಧಾನಿ ಮೋದಿ ಕರ್ನಾಟಕಕ್ಕೆ ಬಂದರೆ ಕರ್ನಾಟಕ ಬಂದ್​​​​ ಮಾಡಲಾಗುವುದು ಎಂದು ವಾಟಾಳ್​​ ನಾಗರಾಜ್​​ ಎಚ್ಚರಿಸಿದ್ದಾರೆ.

protest
ವಾಟಾಳ್​​ ನಾಗರಾಜ್ ಪ್ರತಿಭಟನೆ
author img

By

Published : Jan 5, 2020, 2:50 PM IST

ಮೈಸೂರು: ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳ ಸಂಪೂರ್ಣ ಪರಿಹಾರ ಹಣ ಬಿಡುಗಡೆ ಮಾಡದೆ, ಮಹದಾಯಿ ತೀರ್ಮಾನ ಕೈಗೊಳ್ಳದೆ ಬಂದರೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕರ್ನಾಟಕ ಬಂದ್ ಮಾಡಲಾಗುವುದು ಎಂದು ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್​ ನಾಗರಾಜ್ ಎಚ್ಚರಿಸಿದರು‌.

ವಾಟಾಳ್​​ ನಾಗರಾಜ್ ಪ್ರತಿಭಟನೆ

ಮೈಸೂರಿನ ರೈಲ್ವೆ ನಿಲ್ದಾಣದ ಮುಂಭಾಗ ಪ್ರತಿಭಟನೆ ನಡೆಸಿ, ನಂತರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು, ಪ್ರಧಾನಮಂತ್ರಿಗಳು ತುಮಕೂರಿನ ಸಿದ್ದಗಂಗಾ ಮಠಕ್ಕೆ ಬಂದು ವಿಭೂತಿ ರುದ್ರಾಕ್ಷಿ ಹಾಕಿಕೊಂಡರು. ಆದರೆ ಡಾ. ಶಿವಕುಮಾರ ಸ್ವಾಮೀಜಿಗಳಿಗೆ 'ಭಾರತರತ್ನ' ಕೊಡಲಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಸಚಿವರು ಒತ್ತಾಯ ಮಾಡಲಿಲ್ಲ. ಅಲ್ಲದೆ ಸಂಸದರ ಕೂಡ ಇದರ ಬಗ್ಗೆ ಧ್ವನಿಯೆತ್ತಲಿಲ್ಲ ಎಂದು ಕಿಡಿಕಾರಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮೊದಲಿನಂತೆ ಈಗ ಇಲ್ಲ, ಕಂಪ್ಲೀಟ್ ಡೌನ್ ಆಗಿದ್ದಾರೆ. ಧ್ವನಿ ಸಂಪೂರ್ಣ ಕುಗ್ಗಿದೆ ಎಂದರು.

ಟಿಪ್ಪು ಸುಲ್ತಾನ್ ವಿಷಯವನ್ನು ಪಠ್ಯದಿಂದ ತೆಗೆದರೆ ಇತಿಹಾಸಕ್ಕೆ ಮಾಡಿದ ಅಪಪ್ರಚಾರವಾಗಲಿದೆ. ಒಂದು ವೇಳೆ ತೆಗೆದಿದ್ದೇ ಆದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಾಗುವುದು ಆಕ್ರೋಶ ವ್ಯಕ್ತಪಡಿಸಿದರು.

ರಾಮನಗರ ಜಿಲ್ಲೆಯ ಹೆಸರನ್ನು ಬದಲಾಯಿಸಿ ಮತ್ತೊಂದು ಬೆಂಗಳೂರು ಮಾಡಲು ಹೊರಟಿದ್ದಾರೆ. ಕೆಂಗಲ್ ಹನುಮಂತಯ್ಯ ಅವರು ಇಟ್ಟಿರುವ ಹೆಸರನ್ನು ಯಾವುದೇ ಕಾರಣಕ್ಕೆ ಬದಲಾಯಿಸಬಾರದು ಎಂದರು.

ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲಿ ಕನ್ನಡಿಗರ ವಾಹನಗಳ ಮೇಲೆ ಕಲ್ಲು ಎಸೆದರೆ, ನಮ್ಮ ರಾಜ್ಯಕ್ಕೆ ಆ ರಾಜ್ಯಗಳ ಒಂದೇ ಒಂದು ವಾಹನವು ಒಳಬರಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.

Intro:ವಾಟಲ್ ನಾಗರಾಜ್ ಪ್ರತಿಭಟನೆ

Body:ಮುಂದಿನ‌ ಸಾರಿ ಬಂದರೆ ಕರ್ನಾಟಕ ಬಂದ್: ವಾಟಾಲ್ ನಾಗರಾಜ್
ಮೈಸೂರು: ರಾಜ್ಯಕ್ಕೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂಪೂರ್ಣ ಬಿಡುಗಡೆ ಮಾಡದೇ, ಮಹಾದಾಯಿ ತೀರ್ಮಾನ ಕೈಗೊಳ್ಳದೇ ಬಂದರೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕರ್ನಾಟಕ ಬಂದ್ ಮಾಡಲಾಗುವುದು ಎಂದು ವಾಟಾಲ್ ಪಕ್ಷದ ಅಧ್ಯಕ್ಷ ವಾಟಾಲ್ ನಾಗರಾಜ್ ಎಚ್ಚರಿಸಿದರು‌.
ಮೈಸೂರಿನ ರೈಲ್ವೆ ನಿಲ್ದಾಣದ ಮುಂಭಾಗ ಪ್ರತಿಭಟನೆ ನಡೆಸಿ, ನಂತರ ಮಾಧ್ಯಮಗಳೊಂದಿಗೆಚಮಾತನಾಡಿದರು, ಪ್ರಧಾನಮಂತ್ರಿಗಳು ತುಮಕೂರಿನ ಸಿದ್ದಗಂಗಾ ಮಠಕ್ಕೆ ಬಂದು ವಿಭೂತಿ ರುದ್ರಾಕ್ಷಿ ಹಾಕಿಕೊಂಡರು ಆದರೆ ಡಾಕ್ಟರ್ ಸಿ ಶಿವಕುಮಾರ ಸ್ವಾಮೀಜಿಗಳಿಗೆ ಭಾರತದ ಕೊಡಲಿಲ್ಲ ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಸಚಿವರು ಒತ್ತಾಯ ಮಾಡಲಿಲ್ಲ. ಅಲ್ಲದೆ ಸಂಸದರ ಕೂಡ ಇದರ ಬಗ್ಗೆ ಧ್ವನಿಯೆತ್ತಲಿಲ್ಲ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮೊದಲಿನಂತೆ ಈಗ ಇಲ್ಲ ಕಂಪ್ಲೀಟ್ ಡೌನ್ ಆಗಿದ್ದಾರೆ. ಸಂಪೂರ್ಣ ಧ್ವನಿ ಕುಗ್ಗಿದೆ. ಟಿಪ್ಪು ಸುಲ್ತಾನ್ ವಿಷಯವನ್ನು ಪಟ್ಟದಿಂದ ತೆಗೆದರೆ, ಇತಿಹಾಸಕ್ಕೆ ಮಾಡಿದ ಅಪಪ್ರಚಾರ. ಒಂದು ವೇಳೆ ತೆಗೆದಿದ್ದೇ ಆದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಾಗುವುದು ಆಕ್ರೋಶ ವ್ಯಕ್ತಪಡಿಸಿದರು.

ರಾಮನಗರ ಜಿಲ್ಲೆಯ ಹೆಸರನ್ನು ಬದಲಾಯಿಸಿ ಮತ್ತೊಂದು ಬೆಂಗಳೂರು ಮಾಡಲು ಹೊರಟಿದ್ದಾರೆ. ಕೆಂಗಲ್ ಹನುಮಂತಯ್ಯ ಅವರು ಇಟ್ಟಿರುವ ಹೆಸರನ್ನು ಯಾವುದೇ ಕಾರಣಕ್ಕೆ ಬದಲಾಯಿಸಬಾರದು ಎಂದು ಕಿಡಿಕಾರಿದರು.
ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲಿ ಕನ್ನಡಿಗರ ವಾಹನಗಳ ಮೇಲೆ ಕಲ್ಲು ಎಸೆದರೆ, ನಮ್ಮ ರಾಜ್ಯಕ್ಕೆ ಆ ರಾಜ್ಯಗಳ ಒಂದೇ ಒಂದು ವಾಹನವು ಒಳಬರಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.

Conclusion:ವಾಟಲ್ ಪ್ರತಿಭಟನೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.