ETV Bharat / state

ಸಿಂಗಾಪುರ್​ನಿಂದ ಮೈಸೂರಿಗೆ ಆಗಮಿಸಿದ ಬಿಳಿ ಘೇಂಡಾಮೃಗಗಳು! - Two white rhinoceros from Singapore to Mysore

ಪ್ರಾಣಿ ವಿನಿಮಯ ಕಾರ್ಯಕ್ರಮದಡಿಯಲ್ಲಿ ಸಿಂಗಾಪುರ ಮೃಗಾಲಯದಿಂದ ಮೈಸೂರಿನ ಶ್ರೀಚಾಮರಾಜೇಂದ್ರ ಮೃಗಾಲಯಕ್ಕೆ ಒಂದು ಜೊತೆ ಆಫ್ರಿಕಾದ ಬಿಳಿ ಘೇಂಡಾಮೃಗಳನ್ನು ತರಲಾಗಿದೆ.

ಸಿಂಗಾಪುರ್​ನಿಂದ ಮೈಸೂರಿಗೆ ಆಗಮಿಸಿದ ಎರಡು ಬಿಳಿ ಘೇಂಡಾಮೃಗಗಳು
author img

By

Published : Aug 15, 2019, 5:17 AM IST

ಮೈಸೂರು: ಪ್ರಾಣಿ ವಿನಿಮಯ ಕಾರ್ಯಕ್ರಮದಡಿಯಲ್ಲಿ ಸಿಂಗಾಪುರ ಮೃಗಾಲಯದಿಂದ ಮೈಸೂರಿನ ಶ್ರೀಚಾಮರಾಜೇಂದ್ರ ಮೃಗಾಲಯಕ್ಕೆ ಎರಡು ಆಫ್ರಿಕಾದ ಬಿಳಿ ಘೇಂಡಾಮೃಗಳನ್ನು ತರಲಾಗಿದೆ.

Two white rhinoceros from Singapore to Mysore
ಸಿಂಗಾಪುರ್​ನಿಂದ ಮೈಸೂರಿಗೆ ಆಗಮಿಸಿದ ಎರಡು ಬಿಳಿ ಘೇಂಡಾಮೃಗಗಳು

ಸಿಂಗಾಪುರ ಮೃಗಾಲಯದಿಂದ ವಿಮಾನ ಮಾರ್ಗದಲ್ಲಿ ಬೆಂಗಳೂರು ವಿಮಾನ ನಿಲ್ದಾಣ ತಲುಪಿದ ಒಂದು ಜೊತೆ ಆಫ್ರೀಕಾದ ಬಿಳಿ ಘೇಂಡಾಮೃಗಗಳು ಆಗಸ್ಟ್​ 12 ರಂದು ಮೈಸೂರು ಮೃಗಾಲಯಕ್ಕೆ ಆಗಮಿಸಿವೆ. ಒಬಾನ್ (ಗಂಡು) ಮತ್ತು ವೀಟಾ (ಹೆಣ್ಣು) ಹೆಸರಿನ ಘೇಂಡಾ ಮೃಗಗಳು ತಮ್ಮ ಹೊಸ ನೆಲೆಗೆ ಬಂದು ಸೇರಿದ್ದು, ಪ್ರಸ್ತುತ ಅವುಗಳನ್ನು ದಿಗ್ಬಂಧನ ಆವರಣದಲ್ಲಿರಿಸಿ ನಿಗಾವಹಿಸಲಾಗಿದೆ. ಇವುಗಳನ್ನು ಮೈಸೂರು ಮೃಗಾಲಯದ ಪರಿಸರಕ್ಕೆ ಸರಾಗವಾಗಿ ಪರಿಚಯವಾಗುವಂತೆ ಮಾರ್ಗದರ್ಶನ ನೀಡಲು ಸಿಂಗಪುರ್​ ಮೃಗಾಲಯದದಲ್ಲಿ 35ಕ್ಕಿಂತ ಹೆಚ್ಚು ವರ್ಷಗಳ ಅನುಭವ ಹೊಂದಿರುವ ಮುಖ್ಯ ಪ್ರಾಣಿಪಾಲಕ ಚಿದಂಬರಂ ಮಯಶೂರಿಗೆ ಆಗಮಿಸಿದ್ದಾರೆ.

ಒಬಾನ್​ಗೆ 2 ವರ್ಷ ಹಾಗೂ ವೀಟಾ 3.9 ವರ್ಷ ವಯಸ್ಸಿನದಾಗಿದ್ದು, ಮೂರು ವರ್ಷಗಳ ಅಂತರದಲ್ಲಿ ಮೈಸೂರು ಮೃಗಾಲಯವು ಬಿಳಿ ಘೇಂಡಾಮೃಗವನ್ನು ಮತ್ತೊಮ್ಮೆ ಪ್ರದರ್ಶಿಸುವ ಅವಕಾಶವನ್ನು ಪಡದಿದೆ. ಮೃಗಾಲಯ ಪರಿಸರದಲ್ಲಿ ಘೇಂಡಾಮೃಗಗಳು 40 ವರ್ಷಗಳವರೆಗೆ ಜೀವಿಸಬಲ್ಲವು. ಗಂಡು ಮತು ಹೆಣ್ಣು ಎರಡೂ ಘೇಂಡಾಮೃಗಗಳು ಈ ಮೃಗಾಲಯ ಪರಿಸರದಲ್ಲಿ ಶೀಘ್ರದಲ್ಲಿಯೇ ಪ್ರವರ್ಧಮಾನಕ್ಕೆ ಬಂದು ಅವುಗಳ 6 ರಿಂದ 8ನೇ ವಯಸ್ಸಿನಲ್ಲಿ ತಮ್ಮ ಸಂತಾನಾಭಿವೃದ್ಧಿ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತವೆ.

Intro:ಘೇಂಡಾಮೃಗBody:ಮೈಸೂರಿಗೆ ಆಗಮಿಸಿದ ಎರಡು  ಬಿಳಿ ಘೇಂಡಾಮೃಗ
ಮೈಸೂರು: ಪ್ರಾಣಿ ವಿನಿಮಯ ಕಾರ್ಯಕ್ರಮದಡಿಯಲ್ಲಿ ಸಿಂಗಪುರ ಮೃಗಾಲಯದಿಂದ ಮೈಸೂರಿನ ಶ್ರೀಚಾಮರಾಜೇಂದ್ರ ಮೃಗಾಲಯಕ್ಕೆ ಒಂದು ಜೊತೆ ಆಫ್ರಿಕಾದ ಬಿಳಿ ಘೇಂಡಾಮೃಗಳನ್ನು ತರಲಾಗಿದೆ.
ಸಿಂಗಪುರ ಮೃಗಾಲಯದಿಂದ ವಿಮಾನ ಮಾರ್ಗದಲ್ಲಿ ಬೆಂಗಳೂರು ವಿಮಾನ ನಿಲ್ದಾಣ ತಲುಪಿದ ಒಂದು ಜೊತೆ ಆಫ್ರೀಕಾದ ಬಿಳಿ ಘೇಂಡಾಮೃಗಗಳು ಆ.೧೨ರಂದು ಮೈಸೂರು ಮೃಗಾಲಯಕ್ಕೆ ಆಗಮಿಸಿವೆ.  ಒಬಾನ್ (ಗಂಡು) ಮತ್ತು ವೀಟಾ (ಹೆಣ್ಣು) ಹೆಸರಿನ ಘೇಂಡಾ ಮೃಗಗಳು ತಮ್ಮ ಹೊಸ ನೆಲೆಗೆ ಬಂದು ಸೇರಿದ್ದು ಪ್ರಸ್ತುತ ಅವುಗಳನ್ನು ದಿಗ್ಬಂಧನ ಆವರಣದಲ್ಲಿರಿಸಿ ನಿಗಾವಹಿಸಲಾಗಿದೆ.
ಇವುಗಳನ್ನು ಮೈಸೂರು ಮೃಗಾಲಯದ ಪರಿಸರಕ್ಕೆ ಸರಾಗವಾಗಿ ಪರಿಚಯವಾಗುವಂತೆ ಮಾರ್ಗದರ್ಶನ ನೀಡಲು ಸಿಂಗಪೂರ ಮೃಗಾಲಯದ ೩೫ಕ್ಕಿಂತ ಹೆಚ್ಚು ವರ್ಷಗಳ ಅನುಭವ ಹೊಂದಿರುವ ಮುಖ್ಯ ಪ್ರಾಣಿಪಾಲಕ ಚಿದಂಬರಂ ಅವರು ಪ್ರಾಣಿಗಳ ಜೊತೆ ಆಗಮಿಸಿದ್ದಾರೆ. ಒಬಾನ್ ೨ ವರ್ಷ ಹಾಗೂ ವೀಟಾ ೩.೯ ವರ್ಷ ವಯಸ್ಸಿನದಾಗಿದ್ದು ಮೂರು ವರ್ಷಗಳ ಅಂತರದಲ್ಲಿ ಮೈಸೂರು ಮೃಗಾಲಯವು ಬಿಳಿ ಘೇಂಡಾಮೃಗವನ್ನು ಮತ್ತೊಮ್ಮೆ ಪ್ರದರ್ಶಿಸುವ ಅವಕಾಶವನ್ನು ಪಡದಿದೆ.  ಮೃಗಾಲಯ ಪರಿಸರದಲ್ಲಿ ಘೇಂಡಾ ಮೃಗಗಳು ೪೦ ವರ್ಷಗಳ ವರೆಗೆ ಜೀವಿಸಬಲ್ಲವು. ಗಂಡು ಮತು ಹೆಣ್ಣು ಎರಡೂ ಘೇಂಡಾಮೃಗಗಳು ಈ ಮೃಗಾಲಯ ಪರಿಸರದಲ್ಲಿ ಶೀಘ್ರದಲ್ಲಿಯೇ ಪ್ರವರ್ಧಮಾನಕ್ಕೆ ಬಂದು ಅವುಗಳ ೬ ರಿಂದ ೮ನೇ ವಯಸ್ಸಿನಲ್ಲಿ ತಮ್ಮ ಸಂತಾನಾಭಿವೃದ್ಧಿ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತವೆ.
ಬೆಂಗಳೂರು ವಿಮಾನ ನಿಲ್ದಾಣದಿಂದ ಮೈಸೂರು ಮೃಗಾಲಯಕ್ಕೆ ಈ ಪ್ರಾಣಿಗಳ ಸಾಗಾಣಿಕೆಗೆ ಅಗತ್ಯವಿದ್ದ ಪರಿಣತಿ ಹಾಗೂ ಮುಂದಾಳತ್ವವನ್ನು ಪ್ರದರ್ಶಿಸಿದ ಮೃಗಾಲಯದ ಸಹಾಯಕ ನಿರ್ದೇಶಕರು ಹಾಗೂ ಆಸ್ಪತ್ರೆ ವಿಭಾಗದ ಮುಖ್ಯಸ್ಥರಾದ ಡಾ. ಕೆ.ಆರ್. ರಮೇಶ್, ಪ್ರಾಣಿಗಳ ಸಾಗಾಣಿಕೆಗೆ ಅಗತ್ಯವಿದ್ದ ಸಲಕರಣೆಗಳನ್ನು ಒದಗಿಸುವ ಬಗ್ಗೆ ಸೂಕ್ತ ಯೋಜನೆಯನ್ನು ರೂಪಿಸಿ ಅದನ್ನು ಯಶಸ್ವಿಗೊಳಿಸಿದ ಪ್ರಾಣಿವಿಭಾಗದ ಮುಖ್ಯಸ್ಥರು ಹಾಗೂ ವಲಯ ಅರಣ್ಯಾಧಿಕಾರಿ ಎ.ವಿ.ಸತೀಶ್, ಮೃಗಾಲಯದ ಸಿಬ್ಬಂದಿ ಹಾಗೂ ಪ್ರಾಣಿಪಾಲಕರುಗಳಿಗೆ ಮೃಗಾಲಯವು ಅಭಿನಂಧಿಸಿದೆ.  
ಆಫ್ರೀಕಾ ದೇಶದ ಅಪರೂಪದ ಹಾಗೂ ಅತ್ಯದ್ಭುತವಾದ ಈ ಪ್ರಾಣಿಗಳನ್ನು ನಮ್ಮ ಪ್ರಾಣಿಪ್ರಿಯರು ಶೀಘ್ರದಲ್ಲಿಯೇ ವೀಕ್ಷಿಸಲಿದ್ದಾರೆ. ಬಿಳಿ ಘೇಂಡಾ ಮೃಗಗಳನ್ನು ಮೃಗಾಲಯದ ಪ್ರಾಣಿಸಂಗ್ರಹಣೆಗೆ ಸೇರ್ಪಡೆ ಮಾಡಲು ಸಹಕಾರವನ್ನು ನೀಡಿದ ಸಿಂಗಪುರ ಮೃಗಾಲಯ, ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಸಚಿವಾಲಯ, ಕೇಂದ್ರ ಮೃಗಾಲಯ ಪ್ರಾಧಿಕಾರ, ವಾಣಿಜ್ಯೋದ್ಯಮ ಸಚಿವಾಲಯ, ಕೃಷಿ ಮಂತ್ರಾಲಯ, ಪಶುವೈದ್ಯಕೀಯ ಇಲಾಖೆ, ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ, ಕರ್ನಾಟಕ ಮೃಗಾಲಯ ಪ್ರಾಧಿಕಾರ, ಸಂಬಂಧಪಟ್ಟ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಮೃಗಾಲಯದ ಪ್ರಾಣಿಪಾಲಕರು ಹಾಗೂ ಸಿಬ್ಬಂದಿಗಳಿಗೆ ವಂದಿಸಿದೆ ಎಂದು  ಮೃಗಾಲಯ ಆಡಳಿತವು ಪ್ರಕಟಣೆಯಲ್ಲಿ ತಿಳಿಸಿದೆ. Conclusion:ಘೇಂಡಾಮೃಗ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.