ಮೈಸೂರು : ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಈ ನಡುವೆ ಆಕ್ಸಿಜನ್ ಕೊರತೆ ಉಂಟಾಗುತ್ತಿದ್ದು, ಪ್ರಾಣವಾಯುಗೆ ಇನ್ನಿಲ್ಲದ ಬೇಡಿಕೆ ಇದೆ.
ಇದೀಗ ಮಾರುಕಟ್ಟಯೆಲ್ಲಿ ಹಲವೆಡೆ ದುಪ್ಪಟ್ಟು ಹಣ ನೀಡಿದರೂ ಆಕ್ಸಿಜನ್ ಸಿಗುದ ಪರಿಸ್ಥಿತಿ ಇದೆ. ಈ ನಡುವೆ ಇಲ್ಲಿಬ್ಬರು ಸ್ನೇಹಿತರು ಹಣದಾಸೆಗೆ ಬೀಳದೆ ಮಾರುಕಟ್ಟೆ ದರಕ್ಕೆ ಆಕ್ಸಿಜನ್ ನೀಡುತ್ತಿದ್ದಾರೆ.
ಸುಮಾರು 25 ವರ್ಷಗಳಿಂದ ಅಗ್ರಹಾರದ ವೃತ್ತದ ಬಳಿ ಚಾಮುಂಡೇಶ್ವರಿ ಎಂಟಪ್ರೈಸರ್ಸ್ ಹೆಸರಿನಲ್ಲಿ ಆಕ್ಸಿಜನ್ ಸಿಲೆಂಡರ್ ವ್ಯಾಪಾರ-ವಹಿವಾಟು ನಡೆಸುತ್ತಿರುವ ಮಹಮ್ಮದ್ ಅಹಮದ್ ಹಾಗೂ ಎಂ.ಎಸ್. ಸಂಪತ್, ಕೊರೊನಾ ಸೋಂಕಿತರ ಸಂಬಂಧಿಕರು ಕರೆ ಮಾಡಿದಾಗ ಯಾವುದೇ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಡದೆ ಆಮ್ಲಜನಕ ಪೂರೈಸುತ್ತಿದ್ದಾರೆ.
ಸರ್ಕಾರದ ಸೂಚನೆಯಂತೆ ಸ್ಥಳೀಯ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಸಿ, ರೋಗಿಗಳಿಗೆ ನೆರವಾಗುತ್ತಿದ್ದಾರೆ. ಸಂಪತ್ ಹಾಗೂ ಮಹಮ್ಮದ್ ಅಹಮದ್ ಇವರಿಬ್ಬರು 25 ವರ್ಷಗಳ ಹಿಂದೆ ಆಕ್ಸಿಜನ್ ಸಿಲೆಂಡರ್ ಉದ್ಯಮ ಆರಂಭಿಸಿದ್ದರು. ಅಂದಿನಿಂದ ಇಂದಿನವರೆಗೂ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಕೆ ಮಾಡುತ್ತಾ ಬಂದಿದ್ದಾರೆ.