ETV Bharat / state

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿ ಗಣತಿ ವೇಳೆ ಎರಡು ಹುಲಿಮರಿಗಳ ಕಳೇಬರ ಪತ್ತೆ - ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿ ಮರಿಗಳ ಕಳೇಬರ ಪತ್ತೆ

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ದೊಡ್ಡ ಬೈರನಕುಪ್ಪೆ ವಲಯದ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಹುಲಿ ಗಣತಿ ನಡೆಸುತ್ತಿದ್ದ ವೇಳೆ ಎರಡು ಹುಲಿ ಮರಿಗಳ ಕಳೇಬರಗಳು ಪತ್ತೆಯಾಗಿವೆ.

Two baby tiger dead body found in tiger census at Nagarahole park
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿ ಮರಿಗಳ ಕಳೆಬರ ಪತ್ತೆ
author img

By

Published : Jan 26, 2022, 9:27 PM IST

ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿ ಗಣತಿ ಪ್ರಾರಂಭವಾಗಿದ್ದು, ಈ ವೇಳೆ ಹುಲಿ ದಾಳಿಗೆ ಸಿಲುಕಿ ಮೃತಪಟ್ಟಿರುವ ಎರಡು ಹುಲಿ ಮರಿಗಳ ಕಳೇಬರಗಳು ಪತ್ತೆಯಾಗಿವೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ದೊಡ್ಡ ಬೈರನಕುಪ್ಪೆ ವಲಯದ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ನಾಗರಹೊಳೆಯ ಹುಲಿ ಯೋಜನೆಯ ಮುಖ್ಯಸ್ಥ ಮಹೇಶ್ ಕುಮಾರ್ ನೇತೃತ್ವದ ತಂಡ ಗಣತಿ ನಡೆಸುತ್ತಿದೆ. ಈ ವೇಳೆ 8 ರಿಂದ 9 ತಿಂಗಳ ಎರಡು ಹುಲಿ ಮರಿಗಳ ಕಳೇಬರಗಳು ಪತ್ತೆಯಾಗಿದ್ದು, ಒಂದು ಹೆಣ್ಣು ಹುಲಿಯಾಗಿದೆ. ಇನ್ನೊಂದು ಹುಲಿ ಹೆಣ್ಣೋ, ಗಂಡೋ ಎಂದು ತಿಳಿಯಲು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

Two baby tiger dead body found in tiger census at Nagarahole park
ಎರಡು ಹುಲಿಮರಿಗಳ ಕಳೇಬರ ಪತ್ತೆ

ಡಿಸಿಎಫ್ ಮಹೇಶ್ ಕುಮಾರ್, ಎನ್​​​ಟಿಸಿಎಯ ರಘುರಾಂ ಹಾಗೂ ವೈದ್ಯರು ಸೇರಿ ಹುಲಿ ಮರಿಗಳ ಮರಣೋತ್ತರ ಪರೀಕ್ಷೆಯನ್ನು ಸ್ಥಳದಲ್ಲಿಯೇ ನಡೆಸಿ, ಕಳೇಬರಗಳನ್ನು ಸುಟ್ಟು ಹಾಕಲಾಗಿದೆ.

ಹುಲಿ ಗಣತಿಯನ್ನು ನಡೆಸಲು ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಬೀಟ್ ಹಾಕುತ್ತಿದ್ದ ಸಂದರ್ಭದಲ್ಲಿ ಸಿಬ್ಬಂದಿ ತಂಡಕ್ಕೆ ಹುಲಿ ಮರಿಗಳ ಕಳೇಬರಗಳು ಪತ್ತೆಯಾಗಿವೆ. ಗಂಡು ಹುಲಿಯೊಂದು ಹೆಣ್ಣು ಹುಲಿಯನ್ನು ಸೇರುವ ವೇಳೆ ಘಟನೆ ನಡೆದಿರಬಹುದು ಎಂದು ಅರಣ್ಯ ಇಲಾಖೆ ಶಂಕೆ ವ್ಯಕ್ತಪಡಿಸಿದೆ.

ಇದನ್ನೂ ಓದಿ:ರಾಜ್ಯದಲ್ಲಿಂದು 48,905 ಮಂದಿಗೆ ಕೋವಿಡ್ ಸೋಂಕು; 39 ಸೋಂಕಿತರು ಬಲಿ

ಮೃತಪಟ್ಟಿದ್ದ ಒಂದು ಹುಲಿ ಮರಿಯ ಎರಡು ಕಾಲುಗಳು ಮುರಿದಿದ್ದು, ಮತ್ತೊಂದು ಹುಲಿಯ ಮಾಂಸವನ್ನು ತಿಂದು ಹಾಕಲಾದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಈ ಹುಲಿಮರಿಗಳ ಕಳೇಬರ ಪತ್ತೆಯಾದ ಸ್ಥಳದಲ್ಲೇ ಹುಲಿ ಓಡಾಡಿರುವ ಹೆಜ್ಜೆ ಗುರುತುಗಳು ಪತ್ತೆಯಾಗಿವೆ ಎಂದು ಎಂದು ನಾಗರಹೊಳೆ ಮುಖ್ಯಸ್ಥ ಡಿ ಮಹೇಶ್ ಕುಮಾರ್ ತಿಳಿಸಿದ್ದಾರೆ.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.