ಮೈಸೂರು : ಮೊದಲ ಬಾರಿಗೆ ನಾವುಗಳು ಮತದಾನ ಮಾಡುತ್ತಿರುವುದು ಸಂತಸ ತಂದಿದೆ ಎಂದು ತೃತೀಯ ಲಿಂಗಿ ಪ್ರಣತಿ ಪ್ರಕಾಶ್ ಸಂತಸ ವ್ಯಕ್ತಪಡಿಸಿದರು. ತೃತೀಯ ಲಿಂಗಿ ಆದ ನನಗೆ ಈ ಮೊದಲು ಆಧಾರ್ ಕಾರ್ಡ್, ವೋಟರ್ ಐಡಿ ಇದ್ದರೂ ಸಹ ಅದರಲ್ಲಿ ಮೇಲ್ ಎಂದು ಗುರುತಿಸಿದ್ದರು. ಈಗ 5 ವರ್ಷಗಳಿಂದಿಚೆಗೆ ನಮ್ಮನ್ನು ತೃತೀಯ ಲಿಂಗಿಗಳೆಂದು ಗುರುತಿಸಲಾಗಿತ್ತು. ನಮಗೂ ತೃತೀಯ ಲಿಂಗಿಗಳೆಂದು ವೋಟರ್ ಐಡಿ ನೀಡಿದ್ದಾರೆ ಎಂದು ತೃತೀಯ ಲಿಂಗಿ ಪ್ರಣತಿ ಪ್ರಕಾಶ್ ಮೊದಲ ಬಾರಿಗೆ ಮತದಾನ ಮಾಡಿದ ಬಳಿಕ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.
ಇಂದು ಮೈಸೂರಿನಲ್ಲಿ ತೃತೀಯ ಲಿಂಗಿಗಳು ಸಹ ಮೊದಲ ಬಾರಿಗೆ ಮತದಾನ ಮಾಡಿರುವ ತೃತೀಯ ಲಿಂಗಿಗಳ ಸಂಘದ ಮುಖ್ಯಸ್ಥರಾದ ಪ್ರಣತಿ ಪ್ರಕಾಶ್, ಮೈಸೂರಿನ ಡಬಲ್ ರೋಡ್ನ ಉರ್ದು ಶಾಲೆಯಲ್ಲಿ ಮತದಾನ ಮಾಡಿ, ತಮ್ಮ ಸಂತೋಷವನ್ನು ಈಟಿವಿ ಭಾರತ ಜೊತೆ ಹಂಚಿಕೊಂಡಿದ್ದಾರೆ.
ಇಲ್ಲಿಯವರೆಗೆ ಮತದಾನ ಮಾಡಲು ತುಂಬಾ ನಾಚಿಕೆ ಇತ್ತು. ಈಗ ಎಲ್ಲರಂತೆ ನಾವೂ ಸಹ ನಮ್ಮ ಹಕ್ಕನ್ನು ಚಲಾಯಿಸಬಹುದು. ನಮ್ಮ ಸಮುದಾಯದ ಎಲ್ಲರೂ ಒಟ್ಟಾಗಿ ವೋಟ್ ಮಾಡಿ ಎಂದು ಪ್ರಣತಿ ಪ್ರಕಾಶ್ ವಿನಂತಿ ಮಾಡಿದರು.
ಇದನ್ನೂ ಓದಿ: ಮಂಗಳೂರಿನಲ್ಲಿ ಮತ ಚಲಾಯಿಸಿ ಸಂಭ್ರಮಿಸಿದ ಮಂಗಳಮುಖಿಯರು