ETV Bharat / state

ತೃತೀಯ ಲಿಂಗಿಗಳಿಗೆ 'ಚಪ್ಪಾಳೆ' ಒಂದು ಸಂಕೇತ: ತೃತೀಯ ಲಿಂಗಿಯ ಸಂದರ್ಶನ

ಇಂದು ವಿಶ್ವ ತೃತೀಯ ಲಿಂಗಿಗಳ ದಿನವಾಗಿದ್ದು, ತೃತೀಯ ಲಿಂಗಿಗಳ ದಿನದ ಹಿನ್ನೆಲೆಯಲ್ಲಿ ವಿಶೇಷ ಸಂದರ್ಶನ ಇಲ್ಲಿದೆ.

transgender
ತೃತೀಯ ಲಿಂಗಿ ಸಂದರ್ಶನ
author img

By

Published : Mar 31, 2023, 8:06 PM IST

Updated : Mar 31, 2023, 8:51 PM IST

ತೃತೀಯ ಲಿಂಗಿ ಸಂದರ್ಶನ

ಮೈಸೂರು: ತೃತೀಯ ಲಿಂಗಿಗಳು ಏಕೆ ವಿಶಿಷ್ಠವಾಗಿ ಚಪ್ಪಾಳೆ ಹೊಡೆಯತ್ತಾರೆ ಹಾಗೂ ಹೆಣ್ಣಿನ ರೀತಿ ಏಕೆ ಶೃಂಗಾರ ಮಾಡಿಕೊಳ್ಳುತ್ತಾರೆ ಎಂಬ ಬಗ್ಗೆ ಮೈಸೂರು ಜಿಲ್ಲೆಯ ತೃತೀಯ ಲಿಂಗಿ ಸಂಘದ ಅಧ್ಯಕ್ಷೆ ಪ್ರಣತಿ ಪ್ರಕಾಶ್ ಸಂದರ್ಶನದಲ್ಲಿ ವಿವರಿಸಿದ್ದಾರೆ. ಇಂದು ವಿಶ್ವ ತೃತೀಯ ಲಿಂಗಿಗಳ ದಿನದ ಹಿನ್ನೆಲೆಯಲ್ಲಿ ಅವರ ವಿಶೇಷ ಸಂದರ್ಶನ ಇಲ್ಲಿದೆ.

ಇಂದು ಇಲ್ಲಿ ವಿಶ್ವ ತೃತೀಯ ಲಿಂಗಿಗಳ ದಿನದ ಆಚರಣೆಯನ್ನು ಮೊದಲ ಬಾರಿಗೆ ಮಾಡಲಾಗುತ್ತಿದೆ. ತೃತೀಯ ಲಿಂಗಿಗಳೇ ಅಭಿನಯಿಸಿರುವ ಶಿವಲೀಲಾ ಎಂಬ ಚಿತ್ರ ಇಂದು ಬಿಡುಗಡೆ ಆಗುತ್ತಿದ್ದು, ತುಂಬಾ ಸಂತೋಷವನ್ನು ಉಂಟು ಮಾಡಿದೆ ಎಂದು ಮೈಸೂರು ಜಿಲ್ಲೆಯ ತೃತೀಯ ಲಿಂಗಿಗಳ ಸಂಘದ ಅಧ್ಯಕ್ಷೆ ಪ್ರಣತಿ ಪ್ರಕಾಶ್ ಈಟಿವಿ ಭಾರತ್ ಗೆ ಸಂದರ್ಶನದಲ್ಲಿ ತಿಳಿಸಿದರು.

ಏಕೆ ಹೆಣ್ಣಿನ ರೀತಿ ಶೃಂಗಾರ ಮಾಡಿಕೊಳ್ಳುತ್ತಾರೆ : ಸಾಮಾನ್ಯವಾಗಿ ತೃತೀಯ ಲಿಂಗಿಗಳು ಸರ್ಕಲ್​​ಗಳಲ್ಲಿ ಹಾಗೂ ಅಂಗಡಿಗಳಲ್ಲಿ ಹಣ ಕೇಳುವಾಗ ವಿಶಿಷ್ಠವಾಗಿ ಚಪ್ಪಾಳೆ ಹೊಡೆಯುತ್ತಾರೆ. ಈ ರೀತಿ ತೃತೀಯ ಲಿಂಗಿಗಳು ಹೊಡೆಯುವ ಚಪ್ಪಾಳೆಗೂ, ಸಾಮಾನ್ಯ ಜನ ಹೊಡೆಯುವ ಚಪ್ಪಾಳೆಗೂ ಬಹಳ ವ್ಯತ್ಯಾಸ ಇದೆ. ನಮಗೆ ಚಪ್ಪಾಳೆ ಹೊಡೆಯುವುದು ತಲಾತಲಾಂತರದಿಂದ ಬಂದ ಒಂದು ಪದ್ಧತಿ ಆಗಿದೆ. ತೃತೀಯ ಲಿಂಗಿಗಳೇ ಎನ್ನವುದಕ್ಕೆ ಚಪ್ಪಾಳೆ ಒಂದು ಸಂಕೇತ ಎನ್ನುತ್ತಾರೆ ಪ್ರಣತಿ ಪ್ರಕಾಶ್. ಜೊತೆಗೆ ನಾವು ಹುಟ್ಟುವಾಗ ಗಂಡಾಗಿ ಹುಟ್ಟುತ್ತೇವೆ, ಬೆಳೆಯುತ್ತ ದೈಹಿಕ ಬದಲಾವಣೆಗಳಿಂದ ನಾವು ಹೆಣ್ಣಾಗಿ ಬದಲಾಗುತ್ತೇವೆ, ಆದ್ದರಿಂದ ಹೆಣ್ಣಿನ ರೀತಿ ಬಟ್ಟೆಗಳನ್ನು ಹಾಕಿಕೊಂಡು ಭಿಕ್ಷೆ ಬೇಡುತ್ತೇವೆ ಎಂದು ಇದೇ ಸಂದರ್ಭದಲ್ಲಿ ಪ್ರಣತಿ ಪ್ರಕಾಶ್ ತಿಳಿಸಿದರು.

ಮೈಸೂರಿನಲ್ಲಿ ತೃತೀಯ ಲಿಂಗಿಗಳ ಸರ್ವೇ : ಮೊದಲ ಬಾರಿಗೆ ಮೈಸೂರು ಹಾಗೂ ಬಿಜಾಪುರದಲ್ಲಿ ತೃತೀಯ ಲಿಂಗಿಗಳ ಸರ್ವೇ ನಡೆಯುತ್ತಿದ್ದು, ಮೈಸೂರಿನ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಈ ಸರ್ವೇ ನಡೆಯುತ್ತಿದೆ. ಈ ಸರ್ವೇಯನ್ನು ತೃತೀಯ ಲಿಂಗಿಗಳೇ ನಡೆಸಿ, ತೃತೀಯ ಲಿಂಗಿಗಳ ಸಂಪೂರ್ಣ ಮಾಹಿತಿಯನ್ನು ಪಡೆದು, ಅವರಿಗೆ ಗುರುತಿನ ಚೀಟಿ ನೀಡುತ್ತಿದ್ದು, ಇದರಿಂದ ಮೈಸೂರಿನಲ್ಲಿ ಎಷ್ಟು ಜನ ತೃತೀಯ ಲಿಂಗಿಗಳು ಇದ್ದಾರೆ ಎಂಬುದು ನಿಖರವಾಗಿ ತಿಳಿಯುತ್ತದೆ. ಆ ಮೂಲಕ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಅನುಕೂಲ ಆಗುತ್ತದೆ ಎಂದು ತೃತೀಯ ಲಿಂಗಿಗಳ ಸರ್ವೇ ಹೇಗೆ ನಡೆಯತ್ತದೆ ಎಂಬುದನ್ನು ಪ್ರಣತಿ ಪ್ರಕಾಶ್ ವಿವರಿಸಿದರು.

ಸಮುದಾಯ ಗುರುತಿಸಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿದ ಪ್ರಣತಿ ಪ್ರಕಾಶ್: ಇದು ನಿಜವಾಗಲು ತುಂಬಾ ಸಂತಸದ ದಿನ. ಇಷ್ಟು ದಿನ ಮಹಿಳೆಯರ ದಿನ, ಅಪ್ಪಂದಿರ ದಿನ, ಅಮ್ಮಂದಿರ ದಿನ, ವೈದ್ಯರ ದಿನ, ಕಾರ್ಮಿಕರ ದಿನವಿತ್ತು. ಆದರೆ ನಮ್ಮ ತೃತೀಯ ಲಿಂಗಿಗಳಿಗೆ ದಿನ ಅಂತ ಮಾಡಿರುವಂಥದ್ದು. ಹೀಗಾಗಿ ಸರ್ಕಾರಕ್ಕೆ ಧನ್ಯವಾದಗಳು ಹೇಳಬೇಕು. ನಮ್ಮ ಸಮಾಜವನ್ನು ಸರ್ಕಾರ ಗುರುತಿಸುತ್ತಿದೆ ಎನ್ನುವ ಅಭಿಪ್ರಾಯ ನಮ್ಮ ಸಮುದಾಯದ ಎಲ್ಲರಿಗೂ ಬಂದಿದೆ ಎಂದರು.

ಇದನ್ನೂ ಓದಿ: ಮಂಗಳಮುಖಿಯರು ಚಪ್ಪಾಳೆ ತಟ್ಟುವುದೇಕೆ?: ಸುಶ್ಮಿತಾ ಸೇನ್ ಸಾಮಾಜಿಕ ಸಂದೇಶ- ವಿಡಿಯೋ

Last Updated : Mar 31, 2023, 8:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.