ಮೈಸೂರು: ಚಳಿಗಾಲದಲ್ಲಿ ಕಾಡು ಪ್ರಾಣಿಗಳು ಅಷ್ಟಾಗಿ ಕಾಡಿನಿಂದ ಹೊರ ಬರುವುದಿಲ್ಲ. ಆದ್ರೆ, ಅಪರೂಪವೆಂಬಂತೆ ಹುಲಿಗಳು ಹಿಂಡಾಗಿ ಬಂದು ಕಾಡಿನ ಸನಿಹದಲ್ಲಿ ನೀರು ಕುಡಿದಿರುವ ವಿಡಿಯೋವೊಂದು ವೈರಲ್ ಆಗಿದೆ. ಈ ದೃಶ್ಯವನ್ನು ಪ್ರವಾಸಿಗರು ಕಣ್ತುಂಬಿಕೊಂಡಿದ್ದಾರೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ದಮ್ಮನಕಟ್ಟೆ ಸಫಾರಿ ವಲಯದಲ್ಲಿ ನಾಲ್ಕೈದು ಹುಲಿಗಳು ಕಾಣಿಸಿಕೊಂಡಿವೆ. ಕೆರೆಯಲ್ಲಿ ಹುಲಿಗಳು ನೀರು ಕುಡಿಯುತ್ತಿರುವ ದೃಶ್ಯ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇನ್ನು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ಕಂಡು ಪ್ರಾಣಿಪ್ರಿಯರು ಸಂತಸ ವ್ಯಕ್ತಪಡಿಸಿದ್ದಾರೆ. ಆದ್ರೆ ಈ ವಿಡಿಯೋ ಯಾವಾಗ ಸೆರೆ ಹಿಡಿದಿದ್ದು ಎಂಬುದರ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ.