ETV Bharat / state

ಚಾಮರಾಜ ಕ್ಷೇತ್ರದಿಂದ ಹರೀಶ್ ಗೌಡರಿಗೆ ಟಿಕೆಟ್ ಫಿಕ್ಸ್​: ಜಮೀರ್ ಅಹಮ್ಮದ್ - election 2023

ಈ ಬಾರಿ ನೂರಕ್ಕೆ ನೂರರಷ್ಟು ಹರೀಶ್ ಗೌಡರಿಗೆ ಟಿಕೇಟ್ ಸಿಗಲಿದೆ ಎಂದು ಸಿದ್ದರಾಮಯ್ಯ ಬೆಂಬಲಿಗರಾದ ಜಮೀರ್ ಅಹಮ್ಮದ್ ಹೇಳಿದ್ದಾರೆ.

ticket-fix-for-harish-gowda-from-chamaraj-constituency
ಚಾಮರಾಜ ಕ್ಷೇತ್ರದಿಂದ ಹರೀಶ್ ಗೌಡರಿಗೆ ಟಿಕೇಟ್ ಫಿಕ್ಸ್​: ಜಮೀರ್ ಅಹಮ್ಮದ್
author img

By

Published : Dec 18, 2022, 8:35 PM IST

ಮೈಸೂರು: ನಗರದ ಉದಯಗಿರಿಯಲ್ಲಿ ನಡೆದ ಕ್ರಿಕೆಟ್ ಟೂರ್ನಮೆಂಟ್​ನಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಬೆಂಗಳೂರಿನ ಚಾಮರಾಜಪೇಟೆ ಶಾಸಕ ಜಮೀರ್​ ಅಹಮ್ಮದ್​, ಈ ಬಾರಿ ಹರೀಶ್​ ಗೌಡರಿಗೆ ಟಿಕೆಟ್​ ಸಿಗಲಿದೆ ಎಂದು ಹೇಳಿದ್ದಾರೆ.

ಟೂರ್ನ್​ಮೆಂಟ್​ನ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ನಾಯಕರಾದ ಸಿದ್ದರಾಮಯ್ಯ ಮೇಲೆ ವಿಶ್ವಾಸವಿದೆ. ನಮ್ಮದು ಹೈಕಮಾಂಡ್ ಪಕ್ಷ, ಟಿಕೆಟ್​ ಹಂಚಿಕೆ ವಿಷಯವನ್ನು ನಾನು ಹೇಳಲೂ ಬರುವುದಿಲ್ಲ. ಆದರೆ ನೂರಕ್ಕೆ ನೂರು ವಿಶ್ವಾಸವಿದೆ, ಈ ಬಾರಿ ಹರೀಶ್ ಗೌಡರಿಗೆ ಟಿಕೆಟ್ ಸಿಗಲಿದೆ ಎಂದರು.

ಈ ಮೂಲಕ ಚಾಮರಾಜ ಕ್ಷೇತ್ರದ ಟಿಕೆಟಅನ್ನು ಹರೀಶ್ ಗೌಡರಿಗೆ ನೀಡುವ ಸಂಬಂಧ ಪರೋಕ್ಷ ಸುಳಿವು ನೀಡಿದ್ದಾರೆ. ಆದರೆ, ಮಾಜಿ ಶಾಸಕರಾದ ವಾಸು ಸೇರಿದಂತೆ ಕಾಂಗ್ರೆಸ್​ನಲ್ಲಿ ಅಭ್ಯರ್ಥಿಗಳ ಸಂಖ್ಯೆ ಏರುತ್ತಲೇ ಇದೆ. ಜಮೀರ್ ಅಹಮ್ಮದ್‌ ಹೇಳಿಕೆ ಹರೀಶ್ ಗೌಡರಿಗೆ ಹುರುಪು ತಂದರೆ, ಪಕ್ಷದ ಬೇರೆ ಆಕಾಂಕ್ಷಿಗಳಿಗೆ ಬೇಸರವನ್ನೂ ಸಹ ಮೂಡಿಸಿದೆ.

ಇದನ್ನೂ ಓದಿ: ರಾತ್ರಿ ಬಸ್​ನಲ್ಲಿದ್ದ ಯುವಕ - ಯುವತಿ ತಡೆದ ಕಾರ್ಯಕರ್ತರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.