ETV Bharat / state

ಮೂವರು ಯುವಕರ ತಲೆ ಬೋಳಿಸಿದ ಆರೋಪ: ಆತ್ಮಹತ್ಯೆಗೆ ಯತ್ನಿಸಿದ ಯುವಕ - A young man trying to commit suicide

ಆತ್ಮಹತ್ಯೆಗೆ ಯತ್ನಿಸಿದ ಯುವಕ
ಆತ್ಮಹತ್ಯೆಗೆ ಯತ್ನಿಸಿದ ಯುವಕ
author img

By

Published : Jan 11, 2021, 9:22 AM IST

Updated : Jan 11, 2021, 10:29 AM IST

09:11 January 11

ಹಣ ಕದ್ದ ಆರೋಪದ ಹಿನ್ನೆಲೆ ಮೂವರು ಯುವಕರ ತಲೆ ಬೋಳಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಆತ್ಮಹತ್ಯೆಗೆ ಯತ್ನಿಸಿದ ಬೀರಿಹುಂಡಿ ಗ್ರಾಮದ ಯುವಕ

ಮೈಸೂರು: ಅಂಚೆ ಕಚೇರಿಯಲ್ಲಿ ಹಣ ಕಳವು ಮಾಡಿದ್ದಾರೆ ಎಂದು ಆರೋಪಿಸಿ ಮೂವರು ಯುವಕರ ತಲೆ ಬೋಳಿಸಿದ್ದು, ಅವಮಾನ ತಾಳಲಾರದೇ ಯುವಕನೋರ್ವ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರು ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.  

ಕುಮಾರ್ ಆತ್ಮಹತ್ಯೆಗೆ ಯತ್ನಿಸಿದ ಬೀರಿಹುಂಡಿ ಗ್ರಾಮದ ಯುವಕ. ಪೋಸ್ಟ್ ಆಫೀಸ್​ನಲ್ಲಿ ಹಣ ಕದ್ದಿದ್ದಾರೆ ಎಂದು ಆರೋಪಿಸಿ ಬೀರಿಹುಂಡಿ ಪೋಸ್ಟ್ ಆಫೀಸ್ ಸಿಬ್ಬಂದಿ ರಾಣಿ ಹಾಗೂ ಗ್ರಾಮ ಪಂಚಾಯತ್​ ಕಚೇರಿ ಸಿಬ್ಬಂದಿ ಸ್ವಾಮಿ ಎಂಬುವರ ಜೊತೆ ಕೆಲವು ಯುವಕರು ಸೇರಿಕೊಂಡು ಮೂವರು ಯುವಕರ ತಲೆ ಕೂದಲು ಬೋಳಿಸಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಮನನೊಂದ ಯುವಕ ಕುಮಾರ್ ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ತಲೆಬೋಳಿಸಿದ ಅವಮಾನ ತಾಳದೆ ಮತ್ತಿಬ್ಬರು ಯುವಕರು ನಾಪತ್ತೆಯಾಗಿದ್ದು, ಈ ಸಂಬಂಧ ಮಹಿಳಾ ಸಂಘಟನೆಯವರು ಜಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹೋದಾಗ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ ಎನ್ನಲಾಗಿದೆ. 

Last Updated : Jan 11, 2021, 10:29 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.