ETV Bharat / state

ಬೆಡ್​ಗಾಗಿ ಮೂರು ದಿನ ಅಲೆದಾಟ: ಮಗನ ಕಣ್ಣೆದುರೇ ಕಾರಿನಲ್ಲಿ ನರಳಿ ನರಳಿ ಪ್ರಾಣ ಬಿಟ್ಟ ತಾಯಿ - corona in mysuru

ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದೆ. ಬೆಡ್​ ಸಿಗದೇ 3 ದಿನ ಕಾರಿನಲ್ಲೇ ನರಳಿ ಸೋಂಕಿತೆ ಮೃತಪಟ್ಟಿರುವ ದಾರುಣ ಘಟನೆ ಮೈಸೂರಿನಲ್ಲಿ ನಡೆದಿದೆ.

corona-infected-death
ಮಗನ ಕಣ್ಣೆದುರೇ ನರಳಿ ಪ್ರಾಣ ಬಿಟ್ಟ ತಾಯಿ
author img

By

Published : May 6, 2021, 4:58 PM IST

Updated : May 6, 2021, 5:12 PM IST

ಮೈಸೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ತಾಯಿಗೆ ಚಿಕಿತ್ಸೆ ಕೊಡಿಸಲು ಮಗ ಆಸ್ಪತ್ರೆ ಅಲೆದರೂ ಬೆಡ್ ಸಿಗಲಿಲ್ಲ. ಇದರಿಂದ 3 ದಿನ ಕಾರಿನಲ್ಲೇ ನರಳಿದ ತಾಯಿ ಮೃತಪಟ್ಟಿರುವ ದಾರುಣ ಘಟನೆ ನಗರದಲ್ಲಿ ನಡೆದಿದೆ.

ಮಗನ ಕಣ್ಣೆದುರೇ ನರಳಿ ಪ್ರಾಣ ಬಿಟ್ಟ ತಾಯಿ

ಮಗ ಅನಿಲ್​ ತಾಯಿಯ ಚಿಕಿತ್ಸೆಗಾಗಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಪಡೆಯಲು ಅಲೆದಾಡಿದ್ದಾರೆ. ಕೋವಿಡ್ ಪರೀಕ್ಷಾ ವರದಿ ಇಲ್ಲ , ಬೆಡ್ ಖಾಲಿ ಇಲ್ಲ ಎಂದು ಯಾವ ಆಸ್ಪತ್ರೆಗಳಲ್ಲೂ ದಾಖಲು ಮಾಡಿಕೊಂಡಿಲ್ಲ. ಕೊನೆಗೆ ನಿನ್ನೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೋವಿಡ್ ಪರೀಕ್ಷಾ ವರದಿ ಬಂದ ನಂತರ ದಾಖಲು ಮಾಡಿಕೊಳ್ಳುತ್ತೇವೆ ಎಂದಿದ್ದಾರೆ. ಇಂದು ಕೊರೊನಾ ವರದಿ ಪಾಸಿಟಿವ್​ ಬಂದಿದ್ದು, ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲು ನಿರಾಕರಿಸಿದ್ದಾರೆ.

ವಿಧಿ ಇಲ್ಲದೇ ಮಗ ತಾಯಿಯನ್ನು ಕರೆದುಕೊಂಡು ಹೋಗುವ ಸಮಯದಲ್ಲಿ ಸೋಂಕಿತೆ ಕಾರಿನಲ್ಲೆ ಮೃತಪಟ್ಟಿದ್ದಾರೆ. ಈಗ ಮೃತ ದೇಹವನ್ನು ಪಾಲಿಕೆಯ ಜಯನಗರದ ಅನಿಲ ಚಿತಗಾರಕ್ಕೆ ತರಲಾಗಿದೆ ಎಂದು ಮಗ ಅನಿಲ್ ಅಳಲು ತೋಡಿಕೊಂಡಿದ್ದಾರೆ.

Last Updated : May 6, 2021, 5:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.