ETV Bharat / state

ಮೂವರು ಮನೆಗಳ್ಳರ ಬಂಧನ: 50 ಗ್ರಾಂ ಚಿನ್ನಾಭರಣ ವಶ - mysore three accused arrested

ಮೈಸೂರಿನ ಅಶೋಕಪುರಂ ಪೊಲೀಸರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮೂವರು ಮನೆಗಳ್ಳರನ್ನು ಬಂಧಿಸಿ, ಅವರಿಂದ 50 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

mysore
ಮೂವರು ಮನೆಗಳ್ಳರ ಬಂಧನ
author img

By

Published : Jan 6, 2021, 7:52 AM IST

ಮೈಸೂರು: ನಗರದಲ್ಲಿ ಮೂವರು ಮನೆಗಳ್ಳರನ್ನು ಬಂಧಿಸಿ, ಅವರಿಂದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.

ಜಿಲ್ಲೆಯ ಅಶೋಕಪುರಂ ಪೊಲೀಸರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮೂವರನ್ನು ಹಿಡಿದು ವಿಚಾರಣೆಗೆ ಒಳಪಡಿಸಿದಾಗ, 2017 ರಲ್ಲಿ ನಗರದಲ್ಲಿನ ಜಯನಗರದ ಮನೆಯೊಂದರಲ್ಲಿ ಬಾಗಿಲು ಮುರಿದು ಸುಮಾರು 50 ಗ್ರಾಂ ಚಿನ್ನ ಹಾಗೂ ನಗದನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಆರೋಪಿಗಳಿಂದ 50 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಓದಿ: ಮೈಸೂರಿನಲ್ಲಿ ಕ್ಲಬ್ ಮೇಲೆ ಸಿಸಿಬಿ ಪೊಲೀಸರ ದಾಳಿ: 5.60 ಲಕ್ಷ ರೂ. ವಶ, 19 ಮಂದಿ ಅಂದರ್​​!

ಯೋಗೇಶ್, ಉಪೇಂದ್ರ , ಪ್ರಸನ್ನ ಎಂಬ ಮೂವರು ಆರೋಪಿಗಳು 2020 ನೇ ಆಗಸ್ಟ್ ಕೊನೆಯ ವಾರದಲ್ಲಿ ಸರಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್​​ನಲ್ಲಿ ಕಳವು ಮಾಡಲು ವಿಫಲ ಯತ್ನ ನಡೆಸಿರುವುದು ತನಿಖೆ ವೇಳೆಯಲ್ಲಿ ಬೆಳಕಿಗೆ ಬಂದಿದೆ. ಇನ್ನು ಈ ಮೂವರು ಆರೋಪಿಗಳನ್ನು ಅಶೋಕಪುರಂ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.