ಮೈಸೂರು: ಕಾರು ಮತ್ತು ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ, 5.15 ಲಕ್ಷ ರೂ. ಮೌಲ್ಯದ ವಾಹನಗಳು ಹಾಗೂ ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಉದಯಗಿರಿಯ ಮುನ್ನೇಶ್ವರ ನಗರದ ಶಿವಕುಮಾರ್ ಬಂಧಿತ ವ್ಯಕ್ತಿ. ಶುಕ್ರವಾರ ಬೆಳಿಗ್ಗೆ ಉದಯಗಿರಿ ಪೊಲೀಸ್ ಠಾಣೆ ಅಪರಾಧ ವಿಭಾಗದ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಕ್ಯೂಬಾ ಮಸೀದಿ ಬಳಿ ಯಮಹ ಫ್ಯಾಸಿನೋ ಬೈಕ್‌ನಲ್ಲಿ ಬಂದಿದ್ದಾನೆ.
ಬೈಕ್ ಅಗಟ್ಟಿ, ದಾಖಲೆ ಕೇಳಿದಾಗ ಅವುಗಳನ್ನು ಒದಗಿಸಲು ಶಿವಕುಮಾರ್ ವಿಫಲನಾಗಿದ್ದಾನೆ. ಬಳಿಕ ವಿಚಾರಣೆ ವೇಳೆ ಒಂದೂವರೆ ತಿಂಗಳ ಹಿಂದೆ ಶಾಂತಿನಗರದ ಮಹಮ್ಮದೀಯ ಮಸೀದಿ 1 ನೇ ಕ್ರಾಸ್ ಬಳಿ ಮನೆಯ ಮುಂಭಾಗ ನಿಲ್ಲಿಸಿದ ವಾಹನಗಳನ್ನು ಕಳವು ಮಾಡಿರುವುದಾಗಿ ತಿಳಿಸಿದ್ದಾನೆ. ನಂತರ ಆತನ ಬಳಿಯಿದ್ದ ಬ್ಯಾಗ್ ಪರಿಶೀಲಿಸಿದಾಗ 3 ಮೊಬೈಲ್‌ಗಳು ದೊರೆತಿದ್ದು, ಇವುಗಳನ್ನು ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.