ETV Bharat / state

ಪತಿ ವಿರುದ್ಧ ಹೋರಾಟ ಮಾಡೇ ಮಾಡ್ತೀನಿ..ಆದರೆ ಸಂಶೋಧನಾ ವಿದ್ಯಾರ್ಥಿನಿಯ ರಕ್ಷಣೆಯಾಗಬೇಕು: ಪ್ರೊ. ಲೋಲಾಕ್ಷಿ - Mysore VV Political science Professor rape allegation

ಮೈಸೂರು ವಿವಿಯ ಪ್ರಾಧ್ಯಾಪಕ ರಾಮಚಂದ್ರ ವಿರುದ್ಧದ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿ ಪತ್ನಿ ಲೋಲಾಕ್ಷಿ ಪ್ರತಿಕ್ರಿಯೆ ನೀಡಿದ್ದಾರೆ. ಸಂಶೋಧನಾ ವಿದ್ಯಾರ್ಥಿನಿಗೆ ಸಂಸಾರ ಇದೆ. ಅವರಿಗೆ ರಕ್ಷಣೆಯಾಗಬೇಕ. ಆದರೆ ಪತಿಯ ವಿರುದ್ಧ ಹೋರಾಟ ನಡೆಸುತ್ತೇನೆ ಎಂದಿದ್ದಾರೆ.

prof-lolakshi
ಪ್ರೊ ಲೋಲಾಕ್ಷಿ
author img

By

Published : Aug 6, 2021, 4:38 PM IST

Updated : Aug 6, 2021, 10:04 PM IST

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕರೊಬ್ಬರ ವಿರುದ್ಧ ಸಂಶೋಧನಾ ವಿದ್ಯಾರ್ಥಿನಿ‌ ಮೇಲೆ‌ ಅತ್ಯಾಚಾರವೆಸಗಿದ ಆರೋಪ ಕೇಳಿ ಬಂದಿದೆ. ಈ ಕುರಿತು ಆರೋಪಿ ಪತ್ನಿ ಪ್ರೊ.ಲೋಲಾಕ್ಷಿ ಪ್ರತಿಕ್ರಿಯಿಸಿದ್ದಾರೆ. ಸಂಶೋಧನಾ ವಿದ್ಯಾರ್ಥಿನಿಗೆ ಸಂಸಾರ ಇರುವುದರಿಂದ, ಆಕೆಯ ರಕ್ಷಣೆಯಾಗಬೇಕು ಎಂಬುದು ನನ್ನ ಉದ್ದೇಶ. ಆದರೆ, ಪತಿ ವಿರುದ್ಧ ನನ್ನ ಹೋರಾಟ ಮುಂದುವರೆಯಲಿದೆ ಎಂದು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕಿಯಾಗಿರುವ ಪ್ರೊ. ಲೋಲಾಕ್ಷಿ ಹೇಳಿದ್ದಾರೆ.

ಪ್ರೊ.ಲೋಲಾಕ್ಷಿ

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪತಿ (ಪ್ರೊ.ರಾಮಚಂದ್ರ ) ವಿರುದ್ಧದ ಆರೋಪಗಳಿಗೆ ನನ್ನ ಬಳಿ ಕೆಲವು ಆಧಾರಗಳಿವೆ. ಇದರ ಬಗ್ಗೆ ಕುಟುಂಬಸ್ಥರು ಕುಳಿತು ಚರ್ಚೆ ಮಾಡಿ, ನಿರ್ಧಾರ ತೆಗೆದುಕೊಳ್ಳುತ್ತೇವೆ. ಕುಟುಂಬದ ವ್ಯಾಜ್ಯದಲ್ಲಿ ವಿದ್ಯಾರ್ಥಿನಿಯನ್ನು ಮಧ್ಯ ತಂದಿಲ್ಲ. ಆಧಾರಗಳನ್ನಿಟ್ಟುಕೊಂಡು ಹೋರಾಟ ಮಾಡುತ್ತೇನೆ ಎಂದಿದ್ದಾರೆ.

ಲೋಲಾಕ್ಷಿ ಪರ ವಕೀಲ ದಿನೇಶ್ ಮಾತನಾಡಿ, ವಿಚಾರಣೆಗೆ ಕರೆದಿದ್ದಾರೆ. ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ವಕೀಲ ದಿನೇಶ್

ಆರೋಪಿ ಪತ್ನಿ ಹೇಳಿದ್ದೇನು..?

ಘಟನೆಯ ಬಗ್ಗೆ ಗುರುವಾರ ಮಾತನಾಡಿದ್ದ ಆರೋಪಿ ಪತ್ನಿ ಲೋಲಾಕ್ಷಿ, ನನ್ನ ಪತಿ ಹಲವು ವಿದ್ಯಾರ್ಥಿನಿಯರನ್ನು ಬಳಸಿಕೊಂಡಿದ್ದಾನೆ ಎಂದು ಆರೋಪ ಮಾಡಿದ್ದರು. ನಾನು ಕಾಲೇಜಿಗೆ ಹೋಗಿದ್ದೆ. ಸ್ಟಡಿ ಮೆಟೀರಿಯಲ್ ತೆಗೆದುಕೊಳ್ಳುವ ಸಲುವಾಗಿ ಮನೆಗೆ ಬಂದೆ. ಆಗ ಮನೆಯಲ್ಲಿ ಕೂಗಾಟ ಕೇಳಿಸುತ್ತಿತ್ತು. ಬಾಗಿಲು ತೆಗೆಸಿದಾಗ ಸಂತ್ರಸ್ತೆ ನನ್ನ ಕಾಲು ಹಿಡಿದುಕೊಂಡಳು. ನನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಹೇಳಿಕೊಂಡಳು ಎಂದು ರಾಮಚಂದ್ರ ಅವರ ಪತ್ನಿಯೇ ಘಟನೆಯ ಮಾಹಿತಿ ನೀಡಿದ್ದರು.

ಸಂಶೋಧನಾ ವಿದ್ಯಾರ್ಥಿನಿ ಸ್ಪಷ್ಟನೆ ಏನು?

ರಾಜ್ಯಶಾಸ್ತ್ರ ವಿಭಾಗದ ಪ್ರೊ. ರಾಮಚಂದ್ರಪ್ಪನವರಲ್ಲಿ ಸಲಹೆ ಕೇಳಲು ನಾನು ಅವರ ಮನೆಗೆ ಹೋಗಿದ್ದು ನಿಜ. ಆದರೆ ರಾಮಚಂದ್ರಪ್ಪನವರ ಪತ್ನಿ ಲೋಲಾಕ್ಷಿ ಹೇಳಿದಂತೆ ಯಾವುದೇ ಕೆಟ್ಟ ಘಟನೆಗಳು ಅಲ್ಲಿ ನಡೆದಿಲ್ಲ ಎಂದು ಸಂಶೋಧನಾ ವಿದ್ಯಾರ್ಥಿನಿ ಸ್ಪಷ್ಟನೆ ನೀಡಿದ್ದಾರೆ.

ಓದಿ: ಮೈಸೂರು ವಿವಿ ಪ್ರಾಧ್ಯಾಪಕನಿಂದ ವಿದ್ಯಾರ್ಥಿನಿ ಮೇಲೆ‌ ಅತ್ಯಾಚಾರ ಆರೋಪ: ಪತಿಯನ್ನೇ ಠಾಣೆಗೆ ಕರೆದೊಯ್ದ ಪತ್ನಿ!

Last Updated : Aug 6, 2021, 10:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.