ಮೈಸೂರು : ನಂಜನಗೂಡಿನ ದೇವಸ್ಥಾನ ಸುತ್ತಮುತ್ತ ಭಿಕ್ಷೆ ಬೇಡಿ ಅಲ್ಲಿಯೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮಲಗುತ್ತಿದ್ದ ಭಿಕ್ಷುಕರು ಹಾಗೂ ನಿರ್ಗತಿಕರಿಗೆ ಕೊನೆಗೂ ನಂಜನಗೂಡು ತಾಲೂಕು ಆಡಳಿತ ಮಂಡಳಿ ಆಶ್ರಯ ನೀಡಿದೆ.
ಕೊರೊನಾ ಎರಡನೇ ಅಲೆ ಹಿನ್ನೆಲೆ ರಾಜ್ಯಾದ್ಯಂತ ಲಾಕ್‌ಡೌನ್ ಘೋಷಣೆ ಮಾಡಿದ್ದರಿಂದ ಭಿಕ್ಷೆ ಬೇಡಿ ಬದುಕುತ್ತಿದ್ದ ಭಿಕ್ಷುಕರಿಗೆ ಹಾಗೂ ನಿರ್ಗತಿಕರಿಗೆ ಊಟದ ಸಮಸ್ಯೆ ಮತ್ತು ಕೊರೊನಾ ಆತಂಕ ಅರಿತ ತಾಲೂಕು ಆಡಳಿತವು, ತಾಲೂಕಿನ ಪುರಭವನದಲ್ಲಿ 120 ಮಂದಿಗೆ ಆಶ್ರಯ ನೀಡಲು ಮುಂದಾಗಿದೆ.
ಆದರೆ, ಭಿಕ್ಷುಕರು ಹಾಗೂ ನಿರ್ಗತಿಕರ ಸಂಖ್ಯೆ ಹೆಚ್ಚಾಳವಾಗಿರುವುದರಿಂದ, ಪುರಭವನದಿಂದ ಲಿಂಗಣ್ಣ ಛತ್ರಕ್ಕೆ ಇವರನ್ನ ಸ್ಥಳಾಂತರ ಮಾಡಲು ತಾಲೂಕು ಆಡಳಿತ ನಿರ್ಧರಿಸಿದೆ.
ದೇವಸ್ಥಾನದ ದಾಸೋಹ ಭವನದಿಂದ ಬೆಳಗ್ಗೆ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ. ಲಾಕ್‌ಡೌನ್ ತೆರವಗೊಳಿಸುವವರೆಗೂ ಇವರೆಲ್ಲ ಇಲ್ಲಿಯೇ ಇರಲಿದ್ದಾರೆ.