ETV Bharat / state

ಮೈಸೂರು: ಕಳ್ಳತನವಾದ ಮೊಬೈಲ್ ಹುಡುಕಿಸಿಕೊಡುವಂತೆ ಸಿಎಂ ಬೊಮ್ಮಾಯಿಗೆ ಪತ್ರ! - ಮೊಬೈಲ್ ಹುಡುಕಿಸಿಕೊಡುವಂತೆ ಸಿಎಂ ಬೊಮ್ಮಾಯಿಗೆ ಪತ್ರ

ಪೊಲೀಸ್ ಕಮೀಷನರ್ ಗೆ ಪತ್ರ ಬರೆದಿದ್ದರೂ ಏನೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವ್ಯಕ್ತಿಯೋರ್ವ ಪತ್ರ ಬರೆದಿದ್ದಾರೆ. ಇನ್ನಾದರೂ ಕಳ್ಳತನವಾದ ನನ್ನ ಮೊಬೈಲ್​ ಹುಡುಕಿಸಿಕೊಡಿ, ಆರೋಪಿಯನ್ನು ಬಂಧಿಸಿ ಎಂದು ಮನವಿ ಮಾಡಿದ್ದಾರೆ.

ಸಿಎಂ ಬೊಮ್ಮಾಯಿಗೆ ಪತ್ರ
ಸಿಎಂ ಬೊಮ್ಮಾಯಿಗೆ ಪತ್ರ
author img

By

Published : Sep 20, 2021, 12:33 PM IST

ಮೈಸೂರು: ಕಳ್ಳತನವಾದ ಮೊಬೈಲ್ ಹುಡುಕಿಸಿಕೊಡುವಂತೆ ವ್ಯಕ್ತಿಯೊಬ್ಬ ಸಿಎಂಗೆ ಪತ್ರ ಬರೆದಿರುವ ವಿಚಿತ್ರ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಪಿರಿಯಾಪಟ್ಟಣದ ಕುಂದನಹಳ್ಳಿ ಜನತಾ ಬಡಾವಣೆಯ ನಿವಾಸಿ ಶಿವಣ್ಣ ಸಿಎಂಗೆ ಪತ್ರ ಬರೆದವರು.

ಆಗಸ್ಟ್ 28 ರಂದು ಬೆಳಗ್ಗೆ 10.20ರ ಸಮಯದಲ್ಲಿ ಗ್ರಾಮಾಂತರ ಬಸ್ ನಿಲ್ದಾಣದಿಂದ ವುಡ್ ಲ್ಯಾಂಡ್ಸ್ ಚಿತ್ರಮಂದಿರದ ಕಡೆ ನಡೆದುಕೊಂಡು ಹೋಗುವಾಗ ವ್ಯಕ್ತಿಯೊಬ್ಬ ಮೊಬೈಲ್ ಕಿತ್ತುಕೊಂಡು ಹೋಗಿದ್ದಾನೆ. ಬಳಿಕ ತಾನು ಮೊಬೈಲ್ ಹುಡುಕಿಕೊಡುವಂತೆ ಲಷ್ಕರ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇನ್ನೂ ಮೊಬೈಲ್ ಹುಡುಕಿಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ.

ಈ ಸಂಬಂಧ ಪೊಲೀಸ್ ಕಮೀಷನರ್ ಗೆ ಪತ್ರ ಬರೆದಿದ್ದರೂ ಏನೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ಇನ್ನಾದರೂ ಆರೋಪಿಯನ್ನು ಬಂಧಿಸಿ, ಮೊಬೈಲ್ ಹುಡುಕಿಸಿಕೊಡಬೇಕೆಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.