ಮೈಸೂರು: ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 7 ರಂದು ಮೈಸೂರು ಮತ್ತು ಉಡುಪಿಯಲ್ಲಿ ಚುನಾವಣಾ ರಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಆರ್ ಅಶೋಕ್ ಈ ಟಿವಿ ಭಾರತಕ್ಕೆ ನೀಡಿದ ವಿಶೇಷ ಸಂದರ್ಶನ ಹೇಳಿದ್ದಾರೆ.
ಇಂದು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ನಾಮಪತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಬಿಜೆಪಿ ಸಂಘಟನೆ ಸಭೆ ನಡೆಸಿ ಬಳಿಕ ಈ ಟಿವಿ ಭಾರತ್ ಗೆ ವಿಶೇಷ ಸಂದರ್ಶನ ನೀಡಿ ಮಾತನಾಡಿದ ಆರ್.ಅಶೋಕ್, ಹಳೆಯ ಮೈಸೂರು ಭಾಗದಲ್ಲಿ ಈ ಬಾರಿ ಬಿಜೆಪಿ ಗೆಲ್ಲುವಂತಹ ವಾತಾವರಣ ನಿರ್ಮಾಣವಾಗಿದ್ದು ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದೇವೆ ಎಂದರು.
ಮಂಡ್ಯದಲ್ಲಿ ಬಿಜೆಪಿ ಏಕೆ ಸ್ಪರ್ಧೆ ಮಾಡುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನಮಗೆ ಜೆಡಿಎಸ್ ಅನ್ನು ಸೋಲಿಸಬೇಕು, ಮಂಡ್ಯದಲ್ಲಿ ಅಭ್ಯರ್ಥಿಯನ್ನು ಹಾಕಿದರೆ ಜೆಡಿಎಸ್ ದಾರಿ ಸುಲಭವಾಗುತ್ತದೆ, ಅದರಿಂದ ಕೆಟ್ಟ ಸಂದೇಶ ಹೋಗುತ್ತದೆ. ಈ ಸಮ್ಮಿಶ್ರ ಸರ್ಕಾರ ತೊಲಗಬೇಕು, ಸಮ್ಮಿಶ್ರ ಸರ್ಕಾರ ಜನರಿಗೆ ದ್ರೋಹ ಮಾಡಿದೆ ಆದ್ದರಿಂದ ಇದೇ ರೀತಿಯ ಸರ್ಕಾರ ಕೇಂದ್ರದಲ್ಲಿ ಬರಬಾರದು ಎಂಬ ಉದ್ದೇಶದಿಂದ ನಾವು ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸ್ಪರ್ಧೆ ಮಾಡಿಸಿಲ್ಲ ಎಂದು ಹೇಳಿದರು.
ಇನ್ನೂ ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಗೊಂದಲ ಇನ್ನು ಒಂದು-ಎರಡು ಗಂಟೆಗಳಲ್ಲಿ ಫೈನಲ್ ಆಗುಲಿದೆ. ತೇಜಸ್ವಿನಿ ಅನಂತ್ ಕುಮಾರ್ ಅವರ ಹೆಸರನ್ನು ದೆಹಲಿಗೆ ಕಳುಹಿಸಿದೆವು ಆದರೆ ದೆಹಲಿಯಲ್ಲಿ ಏನು ಮಾಡುತ್ತಾರೋ ಗೊತ್ತಿಲ್ಲ, ಬದಲಾವಣೆಯಾದರೆ ಅದು ಕೇಂದ್ರದ ನಿರ್ಧಾರವಾಗಿರುತ್ತದೆ. ಇಂದು ಸುರೇಶ್ ಕುಮಾರ್, ರವಿ ಸುಬ್ರಹ್ಮಣ್ಯ ಹೆಸರು ಕೇಳಿ ಬರುತ್ತಿದ್ದು ನೋಡೋಣ ನಮ್ಮದೇನು ಅಭ್ಯಂತರ ಇಲ್ಲ ಎಂದರು.