ಮೈಸೂರು: ಕೋವಿಡ್-19 ಹರಡುವ ಭೀತಿ ಹಿನ್ನೆಲೆಯಲ್ಲಿ ದೇಶವೇ ಲಾಕ್ಡೌನ್ ಆಗಿರುವುದರಿಂದ ಇಂದು ಶ್ರೀರಾಮ ನವಮಿ ಇದ್ದರೂ ದೇವಾಲಯಗಳು ಬಂದ್ ಆಗಿವೆ.
ಆದರೆ ಮೈಸೂರಿನ ಶಿವರಾಂ ಪೇಟೆ ರಸ್ತೆಯಲ್ಲಿರುವ ಪುರಾತನ ದೇವಾಲಯವಾದ ಶ್ರೀರಾಮ ಮಂದಿರದಲ್ಲಿ ರಾಮ ನವಮಿ ಹಿನ್ನೆಲೆಯಲ್ಲಿ ಶ್ರೀರಾಮ ದೇವರಿಗೆ ಪೂಜೆ ಮಾಡಲಾಗುತ್ತಿತ್ತು. ಸರ್ಕಾರದ ಆದೇಶ ಉಲ್ಲಂಘಿಸಿ ಸಾರ್ವಜನಿಕರು ಅಕ್ಕಪಕ್ಕದಲ್ಲಿ ನಿಂತುಕೊಂಡಿದ್ದರು.
ಈ ದೃಶ್ಯವನ್ನು 'ಈಟಿವಿ ಭಾರತ್' ಪ್ರತಿನಿಧಿ ಸೆರೆ ಹಿಡಿಯುತ್ತಿದ್ದಂತೆ ಎಚ್ಚೆತ್ತ ದೇವಸ್ಥಾನದ ಪೂಜಾರಿ ತಕ್ಷಣ ದೇವಸ್ಥಾನದ ಬಾಗಿಲು ಬಂದ್ ಮಾಡಿದ್ದಾರೆ.
ರಾಮ ನವಮಿಗೆ ತಟ್ಟಿದ ಕೊರೊನಾ ಬಿಸಿ
ದೇಶಾದ್ಯಂತ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದೇವಾಲಯಗಳ ಬಾಗಿಲು ಬಂದ್ ಆಗಿದ್ದು, ಇಂದು ಶ್ರೀರಾಮ ನವಮಿ ಇರುವುದರಿಂದ ರಾಮನ ದೇವಾಲಯಗಳಲ್ಲಿ ಸರಳವಾಗಿ ಪೂಜೆ ಮಾಡಲಾಗುತ್ತಿದೆ.
ಕೊಸಂಬರಿ, ಪಾನಕ, ಮಜ್ಜಿಗೆ, ಪ್ರಸಾದ ವಿತರಣೆಗೆ ಬ್ರೇಕ್ ಹಾಕಲಾಗಿದೆ. ಹೂ ಹಾಗೂ ತರಕಾರಿ ಮಾರುವವರಿಗೆ ಹೊಡೆತ ಬಿದ್ದಿದೆ.