ETV Bharat / state

ಉಪಟಳ ನಿಡುತ್ತಿರೋ ಚಿರತೆಗಳ ಸೆರೆಗೆ ಬಂತು ಟಾಸ್ಕ್ ಫೋರ್ಸ್

author img

By

Published : Feb 2, 2023, 12:54 PM IST

ಚಿರತೆಗಳ ಉಪಟಳ - ಬಿಗ್​ ಕ್ಯಾಟ್​ಗಳನ್ನು ಸೆರೆ ಹಿಡಿಯಲು ಟಾಸ್ಕ್​​ ಫೋರ್ಸ್​ ರಚನೆ - ಸಿಎಂ ಬೊಮ್ಮಾಯಿ ಸೂಚನೆ ಮೇರೆಗೆ ಹೊರಬಿತ್ತು ಆದೇಶ

Leopard in Bone
ಬೋನ್​ನಲ್ಲಿರುವ ಚಿರತೆ

ಮೈಸೂರು: ಮೈಸೂರು ವನ್ಯಜೀವಿ ಉಪವಿಭಾಗದ ವ್ಯಾಪ್ತಿಯಲ್ಲಿ ಉಪಟಳ ನೀಡುವ ಚಿರತೆಗಳ ಸೆರೆಗೆ, ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ನೇತೃತ್ವದ 58 ಸಿಬ್ಬಂದಿ ಒಳಗೊಂಡ ನಾಲ್ಕು ಚಿರತೆ ಟಾಸ್ಕ್ ಫೋರ್ಸ್ ತಂಡವನ್ನು ರಚಿಸುವ ಉದ್ದೇಶದಿಂದ, ರಾಜ್ಯ ಸರ್ಕಾರ ಚಿರತೆ ಟಾಸ್ಕ್ ಫೋರ್ಸ್ ರಚನೆಗೆ ಆದೇಶ ಹೊರಡಿಸಿದೆ. ಮೈಸೂರು ವನ್ಯಜೀವಿ ಉಪವಿಭಾಗ ಒಳಗೊಂಡ, ಮೈಸೂರು ವೃತ್ತದ ಮೈಸೂರು, ನಂಜನಗೂಡು, ಎಚ್ ಡಿ ಕೋಟೆ, ಸರಗೂರು, ಟಿ. ನರಸೀಪುರ, ಮಂಡ್ಯ, ಪಾಂಡವಪುರ, ನಾಗಮಂಗಲ ತಾಲೂಕು ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯಲ್ಲಿ ಉಪಟಳ ನೀಡುವ ಚಿರತೆಗಳ ಸೆರೆಗೆ ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಸೌರವ್ ಕುಮಾರ್ ನೇತೃತ್ವದ ನಾಲ್ಕು ತಂಡದ 58 ಸಿಬ್ಬಂದಿಯುಳ್ಳ ತಂಡ ಕಾರ್ಯ ನಿರ್ವಹಿಸಲಿದೆ.

ನಾಲ್ವರು ಉಪವಲಯ ಅರಣ್ಯಾಧಿಕಾರಿಗಳು, 8 ಜನ ಗಸ್ತು ಅರಣ್ಯ ಪಾಲಕರು, 40 ಮಂದಿ ಟಾಸ್ಕ್ ಫೋರ್ಸ್ ಸಹಾಯಕರು, 5 ವಾಹನ ಚಾಲಕರು ಸೇರಿ 58 ಮಂದಿ ಸಿಬ್ಬಂದಿಯನ್ನೊಳಗೊಂಡ ನಾಲ್ಕು ತಂಡದ ಚಿರತೆ ಕಾರ್ಯಪಡೆ ರಚನೆ ಮಾಡಲಾಗಿದೆ. ಮೈಸೂರಿನ ಅರಣ್ಯ ಭವನದಲ್ಲಿ ನಿಯಂತ್ರಣ ಕೊಠಡಿ ಹೊಂದಿದ್ದು, ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲಿದೆ.

ಈ ಚಿರತೆ ಟಾಸ್ಕ್ ಫೋರ್ಸ್​ಗೆ ಅಗತ್ಯ ಇರುವ ಸರ್ಚ್ ಲೈಟ್, ಪಬ್ಲಿಕ್ ಅಡ್ರೆಸಿಂಗ್ ಸಿಸ್ಟಮ್, ಧ್ವನಿ ವರ್ಧಕ, 5 ವಾಹನಗಳು ಹಾಗೂ ಸಿಬ್ಬಂದಿ ನಿಯೋಜನೆಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿಗಳು ಆದೇಶ ಹೊರಡಿಸಲಿದ್ದು, ಅದರನ್ವಯ ಸಿಬ್ಬಂದಿ ನೇಮಕಾತಿ ನಡೆಯಲಿದೆ. ಚಿರತೆ ಕಾರ್ಯಪಡೆ ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಿ ಅಗತ್ಯವಾದ ಸಹಾಯ ಪಡೆಯುವಂತೆ ರಾಜ್ಯ ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.

ಮುಖ್ಯ ಅರಣ್ಯ ಅಧಿಕಾರಿ ಮಾಲತಿ ಪ್ರಿಯ ಹೇಳುವುದೇನು?: ಸರ್ಕಾರದ ನಿರ್ದೇಶನದಂತೆ ಚಿರತೆಯ ಕಾರ್ಯಪಡೆಯನ್ನು ರಚಿಸಲಾಗಿದ್ದು, ಇದು ಮೈಸೂರಿನ ಅರಣ್ಯ ಭವನದಿಂದ ಕಾರ್ಯಾಚರಣೆ ಮಾಡಲಿದೆ. ಈ ಚಿರತೆಯ ಟಾಸ್ಕ್ ಫೋರ್ಸ್​ಗೆ ಸಿಬ್ಬಂದಿ ನೇಮಕ, ವಾಹನಗಳ ಸಿದ್ಧತೆಗೆ ಸೂಚಿಸಲಾಗಿದ್ದು, ಪಿಸಿಸಿಎಫ್ ಅವರು ಪ್ರತ್ಯೇಕ ಅನುದಾನ ನೀಡಲಿದ್ದಾರೆ. ನಾಲ್ಕು ತಂಡಗಳು ದಿನದ 24 ಗಂಟೆಯೂ ಸನ್ನದ್ಧವಾಗಿರಲಿದ್ದು, ಚಿರತೆಯ ಉಪಟಳದ ಬಗ್ಗೆ ಮಾಹಿತಿ ಬಂದ ತಕ್ಷಣ ಕಾರ್ಯಾಚರಣೆ ನಡೆಸಲಿವೆ ಎಂದು ಮೈಸೂರು ವಿಭಾಗದ ಅರಣ್ಯ ಮುಖ್ಯಸ್ಥೆ ಡಾ ಮಾಲತಿ ಪ್ರಿಯ 'ಈಟಿವಿ ಭಾರತ'​ಗೆ ಮಾಹಿತಿ ನೀಡಿದರು.

ಹೆಚ್ಚಾದ ಚಿರತೆ ಉಪಟಳ: ಮೈಸೂರು ವನ್ಯಜೀವಿ ಉಪ ವಿಭಾಗದ, ಮೈಸೂರು ವೃತ್ತದ ಮೈಸೂರು ನಗರ ಸುತ್ತಮುತ್ತ, ನಂಜನಗೂಡು, ಎಚ್ ಡಿ‌ ಕೋಟೆ ಹಾಗೂ ಸರಗೂರು ಭಾಗದ ಕಾಡಂಚಿನ ಗ್ರಾಮಗಳು, ಟಿ ನರಸೀಪುರ ತಾಲೂಕು, ಮಂಡ್ಯ, ಪಾಂಡವಪುರ, ನಾಗಮಂಗಲ ಸೇರಿದಂತೆ ಮೈಸೂರು ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿ, ಕಳೆದ ಮೂರು ವರ್ಷಗಳಲ್ಲಿ, ಚಿರತೆ ದಾಳಿಯಿಂದ ಜಾನುವಾರಗಳು ಹಾಗೂ ನಾಲ್ಕು ಜನರನ್ನು ಬಲಿ ತೆಗೆದುಕೊಂಡಿದ್ದವು.

ಈ ಹಿನ್ನೆಲೆಯಲ್ಲಿ ಕಳೆದ ವಾರ ಮೈಸೂರಿಗೆ ಭೇಟಿ ನೀಡಿದ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶೀಘ್ರವೇ ಚಿರತೆಯ ಟಾಸ್ಕ್ ಫೋರ್ಸ್ ರಚನೆಯ ಬಗ್ಗೆ ಹೇಳಿಕೆ ನೀಡಿದ್ದರು. ಅದರಂತೆ ಮೈಸೂರು ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿ ಚಿರತೆಯ ಟಾಸ್ಕ್ ಫೋರ್ಸ್ ರಚನೆ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಇದರನ್ವಯ ಮೈಸೂರು ಅರಣ್ಯ ಭವನದಿಂದ ಈ ಚಿರತೆ ಕಾರ್ಯಪಡೆ ಕಾರ್ಯಾಚರಣೆ ಆರಂಭಿಸಿದೆ. ಇದಕ್ಕೆ ಬೇಕಾದ ಅಗತ್ಯ ವಾಹನಗಳು, ಸಿಬ್ಬಂದಿ ನೇಮಕಾತಿ ಆರಂಭವಾಗಿದೆ ಎಂದು ಮೈಸೂರು ವಿಭಾಗದ ಮುಖ್ಯ ಅರಣ್ಯ ಅಧಿಕಾರಿ ಮಾಲತಿ ಪ್ರಿಯ ತಿಳಿಸಿದರು.

ಇದನ್ನೂ ಓದಿ: ಮೈಸೂರು: ಬಾಲಕನ ಬಲಿ ಪಡೆದ ಚಿರತೆ ಬೋನಿನಲ್ಲಿ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.