ETV Bharat / state

ಸರಳ ದಸರಾ ಆಚರಣೆ ಚಾಮುಂಡೇಶ್ವರಿಗೆ ಅವಮಾನ ಮಾಡಿದಂತೆ : ತನ್ವೀರ್ ಸೇಠ್ - Phone trap

ರಾಜ್ಯದಲ್ಲಿ ಉಂಟಾದ ಭೀಕರ ಪ್ರವಾಹದಿಂದ ದಸರಾ ಹಬ್ಬವನ್ನು ಸರಳವಾಗಿ ಆಚರಿಸಬೇಕು ಎಂದ ರಾಜ್ಯ ಸರ್ಕಾರದ ನಿರ್ಧಾರ ಸಮಂಜಸವಲ್ಲ ಇದರಿಂದ ತಾಯಿ ಚಾಮುಂಡೇಶ್ವರಿ ದೇವಿಗೆ ಅಪಮಾನ ಮಾಡಿದಂತೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.

ಶಾಸಕ ತನ್ವೀರ್ ಸೇಠ್
author img

By

Published : Aug 15, 2019, 1:23 PM IST

Updated : Aug 15, 2019, 4:11 PM IST

ಮೈಸೂರು : ನಾಡಹಬ್ಬ ದಸರಾವನ್ನು ರಾಜ್ಯ ಸರ್ಕಾರ ಸರಳ ರೀತಿಯಲ್ಲಿ ಆಚರಿಸಿದರೆ, ಅದು ಚಾಮುಂಡೇಶ್ವರಿಗೆ ದೇವಿಗೆ ಮಾಡಿದ ಅಪಮಾನ ಎಂದು ಶಾಸಕ ತನ್ವೀರ್ ಸೇಠ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಷ್ಟವಿದೆ ಅಂತಾ ಹೇಳಿ ಸರಳ ದಸರಾ ಮಾಡಿದರೆ, ಪ್ರವಾಸೋದ್ಯಮ ಆರ್ಥಿಕತೆ ಮೇಲೆ ಹಾಗೂ ಸ್ಥಳೀಯ ವಹಿವಾಟಿನ ಮೇಲೆ ಭಾರಿ ಹೊಡೆತ ಬೀಳುತ್ತದೆ. ತಾಯಿ ಚಾಮುಂಡೇಶ್ವರಿ ಮಹಿಷಾಸುರನನ್ನು ಸಂಹಾರ ಮಾಡಿದಂತೆ, ರಾಜ್ಯ ಸರ್ಕಾರ ಕಷ್ಟಗಳನ್ನು ಸಂಹಾರ ಮಾಡಬೇಕು ಎಂದರು.

ಶಾಸಕ ತನ್ವೀರ್ ಸೇಠ್

ಹಿಂದಿನ ರಾಜ್ಯ ಸರ್ಕಾರವೇನಾದರೂ ಫೋನ್ ಕದ್ದಾಲಿಕೆ ಮಾಡಿದ್ದರೆ, ದೂರು ನೀಡಿ ತನಿಖೆ ಮಾಡಿಸಲಿ ಎಂದು ಅನರ್ಹ ಶಾಸಕ ಎಚ್.ವಿಶ್ವನಾಥ್ ಹೇಳಿಕೆಗೆ ತಿರುಗೇಟು ನೀಡಿದರು. ರಾಜ್ಯ ಪ್ರವಾಹದಿಂದ ತತ್ತರಿಸಿದೆ, ಮುಖ್ಯಮಂತ್ರಿಗಳು ಸಚಿವ ಸಂಪುಟ ರಚನೆ ಮಾಡಿ ಅಗತ್ಯ ನೆರವು ಒದಗಿಸಬೇಕು.‌ ಇದೇ ಮೊದಲ ಭಾರಿಗೆ ಪೂರ್ಣ ಪ್ರಮಾಣದ ಸರ್ಕಾರವಿದ್ದರೂ, ಜಿಲ್ಲಾಡಳಿತ ಧ್ವಜಾರೋಹಣ ಮಾಡಿದೆ ಎಂದರು.

Intro:ತನ್ವೀರ್ ಸೇಠ್Body:ಸರಳ ದಸರಾ ಮಾಡಿದರೆ,ಚಾಮುಂಡೇಶ್ವರಿ ಮಾಡಿದ ಅಪಮಾನ:  ತನ್ವೀರ್ ಸೇಠ್
ಮೈಸೂರು: ನಾಡಹಬ್ಬ ದಸರಾವನ್ನು ರಾಜ್ಯ ಸರ್ಕಾರ ಸರಳದಿಂದ ಆಚರಿಸಿದರೆ,ಅದು ಚಾಮುಂಡೇಶ್ವರಿಗೆ ಮಾಡಿದ ಅಪಮಾನವೆಂದು ಶಾಸಕ ತನ್ವೀರ್  ಸೇಠ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಷ್ಟವಿದೆ ಅಂತಾ ಹೇಳಿ ಸರಳ ದಸರಾ ಮಾಡಿದ್ದರೆ,ಪ್ರವಾಸೋದ್ಯಮದ ಆರ್ಥಿಕತೆ ಮೇಲೆ ಹಾಗೂ ಸ್ಥಳೀಯ ವಹಿವಾಟಿನ ಭಾರಿ ಹೊಡೆತ ಬೀಳುತ್ತದೆ. ತಾಯಿ ಚಾಮುಂಡೇಶ್ವರಿ ಮಹಿಷಾಸುರನನ್ನು ಸಂಹಾರ ಮಾಡಿದ್ದಂತೆ,ರಾಜ್ಯ ಸರ್ಕಾರ ಕಷ್ಟಗಳನ್ನು ಸಂಹಾರ ಮಾಡಬೇಕು ಎಂದರು.
ಹಿಂದಿನ ರಾಜ್ಯ ಸರ್ಕಾರವೇನಾದರು ಫೋನ್ ಕದ್ದಾಲಿಕೆ ಮಾಡಿದ್ದರೆ, ದೂರು ನೀಡಿ ತನಿಖೆ ಮಾಡಿಸಲಿ ಎಂದು ಅನರ್ಹ ಶಾಸಕ ಎಚ್.ವಿಶ್ವನಾಥ್ ಹೇಳಿಕೆಗೆ ತಿರುಗೇಟು ನೀಡಿದರು.
ರಾಜ್ಯ ಪ್ರವಾಹದಿಂದ ತತ್ತರಿಸಿದೆ, ಮುಖ್ಯಮಂತ್ರಿಗಳು ಸಚಿವ ರಚನೆ ಮಾಡಿ ಅಗತ್ಯ ನೆರವು ಒದಗಿಸಬೇಕು.‌ಇದೇ ಮೊದಲ ಭಾರಿಗೆ ಪೂರ್ಣ ಪ್ರಮಾಣದ ಸರ್ಕಾರವಿದ್ದರು, ಜಿಲ್ಲಾಡಳಿತ ಧ್ವಜಾರೋಹಣ ಮಾಡಿದೆ ಎಂದರು.Conclusion:ತನ್ವೀರ್ ಸೇಠ್
Last Updated : Aug 15, 2019, 4:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.