ETV Bharat / state

ಮೈಸೂರಿನಲ್ಲಿ ಅದ್ಧೂರಿ ದಸರಾ : ಸರ್ಕಾರದಿಂದ ನೆರವಿನ ನಿರೀಕ್ಷೆಯಲ್ಲಿ ಟಾಂಗಾವಾಲಾಗಳು - Mysore dussera

ಮೈಸೂರಿನ ಟಾಂಗಾ ಸವಾರಿ ಎಂದರೆ ಅದಕ್ಕೊಂದು ಮಹತ್ವವಿದೆ. ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಟಾಂಗಾಗಳಿಗೆ ಉತ್ತೇಜನ ನೀಡುತ್ತಿದ್ದರು. ಇದರಿಂದ ಟಾಂಗಾ ವಾಲರ ಜೀವನ ಸುಧಾರಿಸಿತ್ತು. ಆದರೆ, ಇತ್ತೀಚಿನ ಸರ್ಕಾರಗಳು ಸಹಾಯಧನ ನೀಡುತ್ತಿಲ್ಲ.

ಟಾಂಗಾವಾಲಾ
ಟಾಂಗಾವಾಲಾ
author img

By

Published : Sep 14, 2022, 3:48 PM IST

ಮೈಸೂರು: ಪಾರಂಪರಿಕ ನಗರದಲ್ಲಿ ಪಾರಂಪರಿಕ ಟಾಂಗಾಗಳು ರಾಜರ ಕಾಲದಲ್ಲಿ ಹೆಚ್ಚಿನ ಮಾನ್ಯತೆ ಪಡೆದಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ನಾನಾ ಕಾರಣಗಳಿಂದ ಟಾಂಗಾ ಗಾಡಿಗಳು ಕಡಿಮೆಯಾಗುತ್ತಿವೆ. ಈ ಬಾರಿ ಅದ್ಧೂರಿ ದಸರಾದ ಹಿನ್ನೆಲೆಯಲ್ಲಿ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿ ಟಾಂಗಾ ವಾಲಾಗಳಿದ್ದಾರೆ. ಅವರು ತಮ್ಮ ನಿರೀಕ್ಷೆಗಳೇನು ಎಂಬುದರ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ್ದಾರೆ.

ಸಾಂಸ್ಕೃತಿಕ ನಗರಿ ಎಂಬ ಹೆಗ್ಗಳಿಕೆ ಹೊಂದಿರುವ ಮೈಸೂರಿಗೆ ಬರುವ ಪ್ರವಾಸಿಗರು ನಗರವನ್ನು ಒಂದು ಸುತ್ತು ಟಾಂಗಾ ಗಾಡಿಗಳಲ್ಲಿ ಕುಳಿತು ಸುತ್ತು ಹಾಕಲು ಎಲ್ಲ ಇಷ್ಟ ಪಡುತ್ತಾರೆ. ಆದರೆ, ಕೆಲವು ವರ್ಷಗಳಿಂದ ಆಧುನಿಕತೆಗೆ ಸಿಲುಕಿ ಪಾರಂಪರಿಕ ಟಾಂಗಾಗಳು ಕಡಿಮೆಯಾಗುತ್ತಿದ್ದು, ಕಳೆದ 2 ವರ್ಷಗಳಿಂದ ಕೋವಿಡ್ ಹೊಡೆತಕ್ಕೆ ಸಿಲುಕಿ ಟಾಂಗಾವಾಲಾಗಳು ನಲುಗಿದ್ದಾರೆ.

ಈ ಬಾರಿ ಅದ್ಧೂರಿ ದಸರಾದ ಹಿನ್ನೆಲೆಯಲ್ಲಿ ಸರ್ಕಾರ ಇವರಿಗೆ ಸೌಲಭ್ಯಗಳನ್ನು ನೀಡಲಿ ಜೊತೆಗೆ ವಿಶೇಷ ಗೌರವ ಧನವನ್ನು ನೀಡಬೇಕು ಎಂದು ಆಗ್ರಹಿಸುವ ಟಾಂಗಾವಾಲಾರು, ಈ ಹಿಂದೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶೋಭಾ ಕರಂದ್ಲಾಜೆ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕಾಲದಲ್ಲಿ ಟಾಂಗಾವಾಲಾಗಳಿಗೆ ವಿಶೇಷ ಸಮವಸ್ತ್ರ ಹಾಗೂ ಇತರ ಸೌಲಭ್ಯಗಳನ್ನು ನೀಡಿದ್ದು ಬಿಟ್ಟರೆ ಬೇರೆ ಯಾರು ಸೌಲಭ್ಯಗಳನ್ನು ನೀಡಿಲ್ಲ ಎಂದು ಟಾಂಗಾವಾಲಾ ವೆಂಕಟೇಶ್ 'ಈಟಿವಿ ಭಾರತ' ಜೊತೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

ಟಾಂಗಾವಾಲಾ ವೆಂಕಟೇಶ್​ ಅವರು ಮಾತನಾಡಿರುವುದು

ಮೈಸೂರಿನಲ್ಲಿ ಎಷ್ಟು ಟಾಂಗಾಗಳಿವೆ.. ಒಂದು ಕಾಲದಲ್ಲಿ 200 ಕ್ಕೂ ಹೆಚ್ಚು ಟಾಂಗಾ ಗಾಡಿಗಳಿದ್ದವು. ಇತ್ತೀಚೆಗೆ 30 ಸಾರೋಟ್ ಹಾಗೂ 50 ಟಾಂಗಾ ಗಾಡಿಗಳಿವೆ. ಅವುಗಳನ್ನು ನಿಲ್ಲಿಸಲು ಅಗ್ರಹಾರ, ಕುಕ್ಕರಹಳ್ಳಿ ಕೆರೆ, ಆರ್​​. ಎಂ.ಸಿ ಕಟ್ಟಡ ಮತ್ತು ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಟಾಂಗಾ ನಿಲ್ದಾಣಗಳಿದ್ದು, ಅರಮನೆಯ ಬಳಿ ಟಾಂಗಾ ನಿಲ್ದಾಣವನ್ನು ನಿರ್ಮಿಸಬೇಕೆಂದು ಟಾಂಗಾವಾಲಾರ ಬೇಡಿಕೆಯಾಗಿದೆ.

ಕಳೆದ 3 ವರ್ಷಗಳಿಂದ ಕೋವಿಡ್ ಹಿನ್ನಲೆಯಲ್ಲಿ ದಸರಾ ಅದ್ದೂರಿಯಾಗಿ ನಡೆದಿಲ್ಲ. ಇದರಿಂದ ಟಾಂಗಾವಾಲಾರು ಸಂಕಷ್ಟಕ್ಕೆ ಸಿಲುಕಿದ್ದು, ತಮಗೆ ಟಾಂಗಾ ಗಾಡಿಗಳನ್ನು ರಿಪೇರಿ ಮಾಡಿಸಲು ಹಾಗೂ ಕುದುರೆ ವೆಚ್ಚವನ್ನು ಭರಿಸಲು ಸರ್ಕಾರ ಸಹಾಯ ಮಾಡಬೇಕು ಎಂಬುದು ಮನವಿ ಮಾಡಿದ್ದಾರೆ.

ಮೈಸೂರಿನ ಟಾಂಗಾ ಸವಾರಿ ಎಂದರೆ ಅದಕ್ಕೊಂದು ಮಹತ್ವವಿದೆ. ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಟಾಂಗಾಗಳಿಗೆ ಉತ್ತೇಜನ ನೀಡುತ್ತಿದ್ದರು. ಇದರಿಂದ ಟಾಂಗಾವಾಲಾಗಳ ಜೀವನ ಸುಧಾರಿಸಿತ್ತು. ಆದರೆ, ಇತ್ತೀಚಿನ ಸರ್ಕಾರಗಳು ಸಹಾಯಧನ ನೀಡುತ್ತಿಲ್ಲ. ಇವರಿಗೆ ಸಹಾಯ ನೀಡಿದರೆ ಮೈಸೂರಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕಾರಿಯಾಗಲಿದೆ.

ಓದಿ: ಮೈಸೂರಿನ ಅರಮನೆಯಲ್ಲಿ ಸೆ 20 ರಂದು ರತ್ನ ಖಚಿತ ಸಿಂಹಾಸನ ಜೋಡಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.