ETV Bharat / state

ದಳಪತಿಗಳ ಅಚ್ಚರಿ ಭೇಟಿ: ಸಾ.ರಾ‌. ಮಹೇಶ್- ಜಿ.ಟಿ. ದೇವೇಗೌಡ ಹೇಳಿದ್ದೇನು? - Mahesh and GT Devegowda meet today

ಜೆಡಿಎಸ್​ ಶಾಸಕರಾದ ಸಾ.ರಾ. ಮಹೇಶ್ ಹಾಗೂ ಜಿ.ಟಿ. ದೇವೇಗೌಡ ಇಬ್ಬರು ಇಂದು ಭೇಟಿಯಾಗಿ, ಮಾತುಕತೆ ನಡೆಸಿದರು. ಉಭಯ ನಾಯಕರ ಈ ಮಾತುಕತೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಮಾಜಿ ಸಚಿವರಾದ ಜಿ‌.ಟಿ. ದೇವೇಗೌಡ ಹಾಗೂ ಶಾಸಕ ಸಾ.ರಾ‌. ಮಹೇಶ್ ಇಂದು ಭೇಟಿ

author img

By

Published : Dec 13, 2020, 6:10 PM IST

Updated : Dec 13, 2020, 7:09 PM IST

ಮೈಸೂರು: ಸಮ್ಮಿಶ್ರ ಸರ್ಕಾರ ಪತನಗೊಂಡ ನಂತರ ದೂರವಾಗಿದ್ದ ಮಾಜಿ ಸಚಿವರಾದ ಜಿ‌.ಟಿ. ದೇವೇಗೌಡ ಹಾಗೂ ಶಾಸಕ ಸಾ.ರಾ‌. ಮಹೇಶ್ ಇಂದು ಭೇಟಿಯಾಗಿ, ಮಾತುಕತೆ ನಡೆಸಿದ್ದಾರೆ.

ಗ್ರಾ.ಪಂ. ಚುನಾವಣೆ ಬೆನ್ನಲ್ಲೇ ಜಲದರ್ಶಿನಿ ಸರ್ಕಾರಿ ಅತಿಥಿಗೃಹದಲ್ಲಿ ಶಾಸಕರಾದ ಸಾ.ರಾ. ಮಹೇಶ್ ಹಾಗೂ ಜಿ.ಟಿ. ದೇವೇಗೌಡ ಮಾತುಕತೆ ನಡೆಸಿದರು. ಉಭಯ ನಾಯಕರ ಮಾತುಕತೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಜೆಡಿಎಸ್​ ಶಾಸಕರಾದ ಸಾ.ರಾ. ಮಹೇಶ್ ಹಾಗೂ ಜಿ.ಟಿ. ದೇವೇಗೌಡ ಇಂದು ಭೇಟಿ

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಸಾ‌.ರಾ. ಮಹೇಶ್, ಜಿ.ಟಿ. ದೇವೇಗೌಡರು ನಮ್ಮ ನಾಯಕರು. ಅವರನ್ನ ಭೇಟಿ ಮಾಡುವುದರಲ್ಲಿ ವಿಶೇಷ ಏನಿಲ್ಲ. ಅವರು ನಮ್ಮ ಪಕ್ಷದಲ್ಲೇ ಇದ್ದಾರೆ. ಮುಂದೆ ನಮ್ಮ ಜೊತೆ ಬಂದೇ ಬರ್ತಾರೆ. ಕೆಲ ದಿನಗಳ ಕಾಲ ಆ್ಯಕ್ಟಿವ್ ಇರಲಿಲ್ಲ. ಇನ್ಮುಂದೆ ಆ್ಯಕ್ಟಿವ್ ಆಗ್ತಾರೆ. ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ ಅಂತ ಕೇಳ್ತಿನಿ. ಅವರು ನಮಗಿಂತ 25 ವರ್ಷ ದೊಡ್ಡವರು. ನಮ್ಮಂತವರು ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳುವ ಅಧಿಕಾರ ಅವರಿಗೆ ಇದೆ. ಹಾಗೇನಾದರೂ ನಾನು ತಪ್ಪು ಮಾಡಿದ್ರೆ, ಅದನ್ನು ತಿದ್ದಿಕೊಳ್ಳುತ್ತೇನೆ. ಕುಮಾರಸ್ವಾಮಿ ಜಿಟಿಡಿಯವರನ್ನ ಭೇಟಿ ಮಾಡುವ ಸಂದರ್ಭ ಬಂದಿಲ್ಲ. ಅಂತಹ ಸಂದರ್ಭ ಬಂದರೆ ಅವರು ಜಿಡಿಟಿ ಅವರನ್ನ ಭೇಟಿ ಮಾಡ್ತಾರೆ. ಇನ್ಮುಂದೆ ಎಲ್ಲವೂ ಸರಿಯಾಗಲಿದೆ. ಗ್ರಾ.ಪಂ. ಚುನಾವಣೆಯಲ್ಲಿ ನಮ್ಮ ಪಕ್ಷ ಹೆಚ್ಚಿನ ಸಾಧನೆ ಮಾಡಲಿದೆ ಎಂದರು.

ಇದನ್ನು ಓದಿ:ಗ್ರಾ.ಪಂ ಚುನಾವಣೆಯಲ್ಲಿ ನಾನು ಭಾಗವಹಿಸುವುದಿಲ್ಲ: ಜಿ.ಟಿ.ದೇವೇಗೌಡ

ಪಕ್ಷದ ಕಾರ್ಯಕರ್ತರು ಚುನಾವಣೆಯಲ್ಲಿ ಸಕ್ರಿಯವಾಗಿದ್ದಾರೆ. ನಾನು ಏನು ಮಾತನಾಡಲ್ಲ. ಇದು ವೈಯುಕ್ತಿಕ ಭೇಟಿ. ನನ್ನ ಹೇಳಿಕೆಯನ್ನು ಮಾಧ್ಯಮದಲ್ಲಿ ತಪ್ಪಾಗಿ ಅರ್ಥೈಸಲಾಗಿದೆ. ನಾನು ಆ ರೀತಿ ಏನು ನಡೆದುಕೊಂಡಿಲ್ಲ ಎಂದು ಹೇಳಿ ಯಾವುದೇ ಪ್ರತಿಕ್ರಿಯೆ ‌ನೀಡದೆ ಜಿ.ಟಿ. ದೇವೇಗೌಡ ಮುಂದಕ್ಕೆ ತೆರಳಿದರು.

Last Updated : Dec 13, 2020, 7:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.