ಮೈಸೂರು: ನಗರದಲ್ಲಿ ಜಪ್ತಿ ಮಾಡಲಾಗಿದ್ದ ಲಕ್ಷಾಂತರ ಮೌಲ್ಯದ ಕೇಬಲ್ಗಳಿದ್ದ ಸರಕು ಸಾಗಣಿಕೆ ವಾಹನವನ್ನು ಮಹಾನಗರ ಪಾಲಿಕೆ ಆವರಣದಲ್ಲೇ ಕಳವು ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಖಾಸಗಿ ಕಂಪನಿಯೊಂದು ವಿದ್ಯುತ್ ಕಂಬಗಳಿಗೆ ಮಹಾನಗರ ಪಾಲಿಕೆಯ ಅನುಮತಿ ಪಡೆಯದೆ ಕೇಬಲ್ಗಳನ್ನು ಆಳವಡಿಸುತ್ತಿತ್ತು. ಈ ಹಿನ್ನೆಲೆ ಮಹಾನಗರ ಪಾಲಿಕೆಯ ಅಧಿಕಾರಿಗಳು ಎಪ್ರಿಲ್ 30 ರಂದು ಕೇಬಲ್ಗಳಿದ್ದ ಸರಕು ವಾಹನವನ್ನು ಜಪ್ತಿ ಮಾಡಿ ಪಾಲಿಕೆಯ ಆವರಣದಲ್ಲಿ ತಂದು ನಿಲ್ಲಿಸಿದ್ದರು. ಇದೀಗ ಲಕ್ಷಾಂತರ ರೂಪಾಯಿ ಮೌಲ್ಯದ ಕೇಬಲ್ಗಳಿದ್ದ ಸರಕು ಸಾಗಣೆ ವಾಹನವನ್ನು ಕದ್ದೊಯ್ದಿದ್ದಾರೆ.
ಆದರೆ ಪಾಲಿಕೆ ಆವರಣದಿಂದ ನಾಪತ್ತೆಯಾಗಿರುವುದನ್ನು ಇದನ್ನು ನೋಡಿದ ಉಪಮೇಯರ್ ಅವರು ಮೇಯರ್ ಗಮನಕ್ಕೆ ತಂದಿದ್ದಾರೆ. ಬಳಿಕ ಮೇಯರ್ ಪಾಲಿಕೆಯ ಆವರಣದಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯನ್ನು ಪರಿಶೀಲಿಸಿದ್ದಾರೆ. ಆದ್ರೆ ಅದರಲ್ಲಿ ವಾಹನ ಕಳ್ಳತನಾಗಿರುವುದು ಪತ್ತೆಯಾಗಿಲ್ಲ ಎಂದು ಹೇಳಲಾಗ್ತಿದೆ.
ಜಪ್ತಿಯಾಗಿದ್ದ ವಾಹನ ಕಳ್ಳತನವಾಗಿದೆ ಎಂದು ಮೇಯರ್ ಅವರು ನಗರದ ಕೆ.ಅರ್. ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.