ETV Bharat / state

ಜ.3,4 ರಂದು ರಾಜ್ಯಮಟ್ಟದ ಕಬಡ್ಡಿ: ಟ್ರೋಫಿ ಅನಾವರಣ

ಜನವರಿ 3 ಮತ್ತು 4 ರಂದು ಹಾಸನದಲ್ಲಿ ರಾಜ್ಯಮಟ್ಟದ ಕಬಡ್ಡಿ ಟೂರ್ನಮೆಂಟ್ ನಡೆಯಲಿದೆ. ಡಾ. ಸೂರಜ್ ರೇವಣ್ಣ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಟೂರ್ನಮೆಂಟ್ ಆಯೋಜಿಸಲಾಗಿದೆ.

ಜ.3,4 ರಂದು ರಾಜ್ಯಮಟ್ಟದ ಕಬಡ್ಡಿ: ಟ್ರೋಫಿ ಅನಾವರಣ
State level Kabaddi on Jan 3 4 Trophy unveiling
author img

By

Published : Dec 7, 2022, 12:01 PM IST

ಮೈಸೂರು: ಜನವರಿ 3 ಮತ್ತು 4 ರಂದು ನಡೆಯಲಿರುವ ರಾಜ್ಯ ಮಟ್ಟದ ಸೂರಜ್ ರೇವಣ್ಣ ಕಬಡ್ಡಿ ಟ್ರೋಫಿಯನ್ನು ಪದ್ಮ ಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಅನಾವರಣಗೊಳಿಸಿದರು. ನಗರದ ಲಲಿತ್ ಮಹಲ್ ಹೋಟೆಲ್​​ನಲ್ಲಿ ಈ ಸಮಾರಂಭ ನೆರವೇರಿತು.

ಜನವರಿ 3 ಮತ್ತು 4 ರಂದು ಹಾಸನದಲ್ಲಿ ರಾಜ್ಯಮಟ್ಟದ ಕಬಡ್ಡಿ ಟೂರ್ನಮೆಂಟ್ ನಡೆಯಲಿದೆ. ಡಾ. ಸೂರಜ್ ರೇವಣ್ಣ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಟೂರ್ನಮೆಂಟ್ ಆಯೋಜಿಸಲಾಗಿದೆ. ಇದರ ನಿಮಿತ್ತ ನಿನ್ನೆ ರಾತ್ರಿ ನಗರದ ಪಾರಂಪರಿಕ ಲಲಿತ್ ಮಹಲ್ ಹೋಟೆಲ್ ನಲ್ಲಿ ನಡೆದ ವರ್ಣ ರಂಜಿತ ಕಾರ್ಯಕ್ರಮದಲ್ಲಿ ಟೂರ್ನಿಯ ಟ್ರೋಫಿಯನ್ನು ಪದ್ಮ ಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಅನಾವರಣ ಮಾಡಿದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಶಾಸಕರಾದ ಎಚ್ ಡಿ ರೇವಣ್ಣ, ಜಿ ಟಿ ದೇವೆಗೌಡ, ಸಿ ಎಸ್ ಪುಟ್ಟರಾಜು, ಸಾ ರಾ ಮಹೇಶ್, ಸಿ ಎನ್ ಬಾಲಕೃಷ್ಣ, ಸಂಸದ ಪ್ರಜ್ವಲ್ ರೇವಣ್ಣ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.

ಇದನ್ನು ಓದಿ: ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌: ಮಣಿಕಟ್ಟು ನೋವಲ್ಲೂ ಬೆಳ್ಳಿ ಗೆದ್ದ ಮೀರಾಬಾಯಿ ಚಾನು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.