ETV Bharat / state

ರಾಜ್ಯದ ಮೊದಲ 'ಬೀದಿ ನಾಯಿಗಳ ಪುನರ್ವಸತಿ ಕೇಂದ್ರ' ಉದ್ಘಾಟನೆಗೆ ಸಿದ್ದ: ಇಲ್ಲಿರುವ ಸೌಲಭ್ಯಗಳೇನು?

Stray dog rehabilitation center: ರಾಜ್ಯದಲ್ಲಿ ನಿರ್ಮಾಣಗೊಳ್ಳುತ್ತಿರುವ ಮೊದಲ 'ಬೀದಿ ನಾಯಿಗಳ ಆರೈಕೆ ಕೇಂದ್ರ' ಇನ್ನೇನು ಉದ್ಘಾಟನೆಗೆ ಸಿದ್ಧವಾಗಿದೆ. ಇಲ್ಲಿರುವ ಸೌಲಭ್ಯದ ಬಗ್ಗೆ ಪಾಲಿಕೆಯ ಆರೋಗ್ಯಾಧಿಕಾರಿ ಡಾ.ನಾಗರಾಜ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

State first stray dog rehabilitation center
ಬೀದಿ ನಾಯಿಗಳ ಪುನರ್ವಸತಿ ಕೇಂದ್ರ
author img

By

Published : Aug 11, 2023, 5:34 PM IST

ರಾಜ್ಯದ ಮೊದಲ 'ಬೀದಿ ನಾಯಿಗಳ ಪುನರ್ವಸತಿ ಕೇಂದ್ರ' ಉದ್ಘಾಟನೆಗೆ ಸಿದ್ದ: ಇಲ್ಲಿರುವ ಸೌಲಭ್ಯಗಳೇನು?

ಮೈಸೂರು: ರಾಜ್ಯದಲ್ಲಿ ಮೊದಲ ಬಾರಿಗೆ ಮೈಸೂರಿನ ಮಹಾನಗರ ಪಾಲಿಕೆಯ ವತಿಯಿಂದ ಬೀದಿ ನಾಯಿಗಳ ಪುನರ್ವಸತಿ ಕೇಂದ್ರ ನಿರ್ಮಾಣಗೊಂಡಿದೆ. ಇದು ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಮೂಲಕ ರಾಜ್ಯದಲ್ಲಿ ನಿರ್ಮಾಣಗೊಳ್ಳುತ್ತಿರುವ ಮೊದಲ 'ಬೀದಿ ನಾಯಿಗಳ ಆರೈಕೆ ಕೇಂದ್ರ' ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಇಲ್ಲಿ ಯಾವ ರೀತಿಯ ಸೌಲಭ್ಯಗಳಿವೆ? ಎಷ್ಟು ವೆಚ್ಚದಲ್ಲಿ ಕೇಂದ್ರವನ್ನು ಸ್ಥಾಪಿಸಲಾಗಿದೆ? ಎಂಬಿತ್ಯಾದಿ ವಿಚಾರಗಳ ಬಗ್ಗೆ ಪಾಲಿಕೆಯ ಆರೋಗ್ಯಾಧಿಕಾರಿ ಡಾ.ನಾಗರಾಜ್ ಈಟಿವಿ ಭಾರತಕ್ಕೆ ವಿವರ ನೀಡಿದರು.

ಶೀಘ್ರದಲ್ಲೇ ಉದ್ಘಾಟನೆ: ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಮೈಸೂರಿನ ಹೊರವಲಯದ ಎಚ್.ಡಿ.ಕೋಟೆ ರಸ್ತೆಯ ರಾಯನಕೆರೆ ಬಳಿ ಬೀದಿ ನಾಯಿಗಳ ಪುನರ್ವಸತಿ ಕೇಂದ್ರ (ಬೀದಿ ನಾಯಿಗಳ ಆರೈಕೆ ಕೇಂದ್ರ) ಉದ್ಘಾಟನೆಗೆ ಸಿದ್ದವಾಗಿದೆ. ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಕೇಂದ್ರ ಸರ್ಕಾರದ 2.50 ಕೋಟಿ ರೂಪಾಯಿ ಅನುದಾನದಲ್ಲಿ ನಿರ್ಮಾಣವಾಗಿರುವ ಈ ಕೇಂದ್ರವು ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ.

ಕೇಂದ್ರದಲ್ಲಿ ದೊರೆಯುವ ಸೌಲಭ್ಯಗಳು: ಮೈಸೂರು ನಗರದಲ್ಲಿ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಕಾರಣಕ್ಕಾಗಿ ಬೀದಿ ನಾಯಿಗಳ ಹಾವಳಿಯನ್ನು ಕಡಿಮೆ ಮಾಡಲು, ಅವುಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಲು ಈ ಕೇಂದ್ರವನ್ನು ಉಪಯೋಗಿಸಲಾಗುವುದು. ಜೊತೆಗೆ ರೋಗಗ್ರಸ್ತ ನಾಯಿಗಳು ಹಾಗೂ ಅಪಘಾತಕ್ಕೆ ಒಳಗಾದ ನಾಯಿಗಳನ್ನು ಇಲ್ಲಿಗೆ ತಂದು ಚಿಕಿತ್ಸೆ ಕೊಡಿಸಲಾಗುವುದು. ಅಲ್ಲದೇ, ರೇಬಿಸ್ ಬಂದ ನಾಯಿಗಳನ್ನು ಕರೆದುಕೊಂಡು ಬಂದು ಪ್ರತ್ಯೇಕ ಚಿಕಿತ್ಸೆ ಕೊಡಿಸಿ, ಅವುಗಳನ್ನು ಗುಣಮುಖ ಮಾಡುವುದು ಈ ಕೇಂದ್ರದಲ್ಲಿನ ಕೆಲಸವಾಗಿರಲಿದೆ.

2.17 ಗುಂಟೆ ವಿಸ್ತೀರ್ಣದ ಪ್ರದೇಶದಲ್ಲಿ ಇರುವ ಬೀದಿ ನಾಯಿಗಳ ಪುನರ್ವಸತಿ ಕೇಂದ್ರದಲ್ಲಿ ಒಪಿಡಿ, ಪ್ರಯೋಗಾಲಯ, ಆಪರೇಷನ್ ಥಿಯೇಟರ್, ಔಷಧ ವಿಭಾಗ, ಮರಿಗಳ ಆರೈಕೆ ಕೊಠಡಿ, ರೋಗ ಬಂದ ನಾಯಿಗಳಿಗೆ ಪ್ರತ್ಯೇಕ ಚಿಕಿತ್ಸೆ ನೀಡುವ ವಾರ್ಡ್, ವೈದ್ಯರ ಕೊಠಡಿ, ವಿಶ್ರಾಂತಿ ಕೊಠಡಿ, ಸಿಬ್ಬಂದಿ ಕೊಠಡಿ, ಸಾಕುಮರಿಗಳ ಆರೈಕೆ ಕೊಠಡಿ ಹಾಗೂ ಅಡಿಗೆ ಕೊಠಡಿ ಸೇರಿದಂತೆ ಇತರೆ ಎಲ್ಲಾ ಸೌಲಭ್ಯಗಳನ್ನು ಒಳಗೊಂಡ ಕೊಠಡಿಯನ್ನು ಇಲ್ಲಿ ನಿರ್ಮಾಣ ಮಾಡಲಾಗಿದೆ.

ಪಾಲಿಕೆಯ ಆರೋಗ್ಯಾಧಿಕಾರಿ ಹೇಳಿದ್ದೇನು?: "ವಿಶೇಷವಾಗಿ ಬೀದಿ ನಾಯಿಗಳ ಪುನರ್ವಸತಿ ಕೇಂದ್ರ ಮಾಡಬೇಕೆಂದು ಕೌನ್ಸಿಲ್ ಸಭೆಯಲ್ಲಿ ಚರ್ಚೆ ನಡೆಸಲಾಗಿತ್ತು. ಅದರಂತೆ ಪುನರ್ವಸತಿ ಕೇಂದ್ರವನ್ನು ನಿರ್ಮಾಣ ಮಾಡಲಾಗಿದೆ. ಅಪಘಾತಕ್ಕೆ ಒಳಗಾದ ಹಾಗೂ ಇತರ ಕಾಯಿಲೆಗಳಿಗೆ ಒಳಗಾದ ನಾಯಿಗಳನ್ನು ಈ ಪುನರ್ವಸತಿ ಕೇಂದ್ರಕ್ಕೆ ತಂದು, ಚಿಕಿತ್ಸೆ ನೀಡುವ ಕೆಲಸ ಆಗಲಿದೆ. ಅವುಗಳು ಗುಣಮುಖವಾದ ನಂತರ ವಾಪಸ್ ಬೀಡುವ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದೆ. ವಿಶೇಷವಾಗಿ ಇದು ರಾಜ್ಯದಲ್ಲೇ ಮೊದಲ ಪುನರ್ವಸತಿ ಕೇಂದ್ರ ಆಗಿರಲಿದೆ. ಬೀದಿ ನಾಯಿಗಳ ಜೊತೆಗೆ ಅನಾರೋಗ್ಯ ಪೀಡಿತ ಕುದುರೆಗಳು ಹಾಗೂ ಬೀದಿ ಹಸುಗಳನ್ನು ಇಲ್ಲಿಗೆ ತಂದು ಚಿಕಿತ್ಸೆ ಕೊಡಿಸುವ ಯೋಜನೆ ಕೂಡ ಇದೆ. ಸದ್ಯಕ್ಕೆ ಬೀದಿ ನಾಯಿಗಳ ಪುನರ್ವಸತಿ ಕೇಂದ್ರ ಶೀಘ್ರವೇ ಉದ್ಘಾಟನೆ ಆಗಲಿದೆ" ಎಂದು ಪಾಲಿಕೆಯ ಆರೋಗ್ಯಾಧಿಕಾರಿ ಡಾ. ನಾಗರಾಜ್ ತಿಳಿಸಿದರು.

ಇದನ್ನೂ ಓದಿ: ಬೆಂಗಳೂರು: ಪಾರ್ಕ್‌ ಮಾಡಿದ್ದ ಕಾರ್‌ನಲ್ಲಿ ನಾಯಿ ಲಾಕ್; ಕಿಟಕಿ ಮುರಿದು ರಕ್ಷಿಸಿದ ಯೋಧರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.