ಮೈಸೂರು: ಕೊರೋನಾ ಸೋಂಕಿತರ ಮನೆಗೆ ಹಾವೊಂದು ಎಂಟ್ರಿ ಕೊಟ್ಟು ಕೆಲವು ಕಾಲ ಮನೆಯವರನ್ನು ಆತಂಕ್ಕೀಡು ಮಾಡಿದ ಘಟನೆ ನಗರದ ಜೆ.ಪಿ.ನಗರದಲ್ಲಿ ನಡೆದಿದೆ.
ಜೆ.ಪಿ.ನಗರದಲ್ಲಿರುವ ಕೋವಿಡ್ ಸೋಂಕಿತರ ಮನೆಗೆ ಬೆಳಗ್ಗೆ ಹಾವೊಂದು ಬಂದಿದ್ದು, ಹೋಮ್ ಐಸೋಲೇಷನ್ನಲ್ಲಿದ್ದ ಸೋಂಕಿತರು ತಕ್ಷಣ ಸ್ನೇಕ್ ಶ್ಯಾಮ್ ಗೆ ಕರೆ ಮಾಡಿದ್ದಾರೆ
ಬಳಿಕ ಸ್ನೇಕ್ ಶ್ಯಾಮ್ ಆಗಮಿಸಿ, ಈ ಹಾವನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ.