ಮೈಸೂರು: ನಾಡಿಗೆ ಬಂದಿರುವ ಕೊರೊನಾ ಕಂಟಕ ನಿವಾರಣೆಯಾಗಲೆಂದು ಸುತ್ತೂರು ಶ್ರೀಗಳು ಇಷ್ಟಲಿಂಗ ಪೂಜೆ ನೆರವೇರಿಸಿದರು.
ಕೊರೊನಾ ಸಂಕಷ್ಟ ಪರಿಹಾರಕ್ಕೆ ಸುತ್ತೂರು ಶ್ರೀಗಳಿಂದ ಇಷ್ಟಲಿಂಗ ಪೂಜೆ ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಬಸವ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ಇಂದು ಸಂಜೆ 7 ಗಂಟೆಗೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಸುತ್ತೂರು ಶಾಖಾ ಮಠದಲ್ಲಿ ಇಷ್ಟಲಿಂಗ ಪೂಜೆಯನ್ನು ಸುತ್ತೂರು ಪೀಠಾಧಿಪತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ನೆರವೇರಿಸಲಾಯಿತು. ಕೊರೊನಾ ವೈರಸ್ನಿಂದ ಪ್ರಪಂಚವೇ ತಲ್ಲಣಗೊಂಡಿದ್ದು, ಈ ಸಂಕಷ್ಟ ನಿವಾರಣೆಯಾಗಲೆಂದು ಪೀಠಾಧಿಪತಿ ಲಿಂಗ ಪೂಜೆ ನೆರವೇರಿಸಿ, ಸಂಕಷ್ಟದಿಂದ ಮುಕ್ತಿ ಹೊಂದಿ ಜನತೆಗೆ ಆರೋಗ್ಯ, ನೆಮ್ಮದಿ ದೊರೆಯಲೆಂದು ಪ್ರಾರ್ಥಿಸಿದರು.