ETV Bharat / state

ಆಯುಕ್ತೆ - ಡಿಸಿ ಜಟಾಪಟಿ; ಸುತ್ತೂರು ಮಠದಲ್ಲಿ ರಹಸ್ಯ ಸಂಧಾನ ಸಭೆ - mysore latest news updates

ಜಿಲ್ಲಾಧಿಕಾರಿಗಳ ವರ್ತನೆಯನ್ನು ಖಂಡಿಸಿ ರಾಜೀನಾಮೆ ನೀಡಿದ್ದ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಸುತ್ತೂರು ಪೀಠಾಧಿಪತಿ ಶಿವರಾತ್ರಿ‌ ದೇಶಿಕೇಂದ್ರ ಸ್ವಾಮೀಜಿಗಳನ್ನು ಭೇಟಿ ಮಾಡಿ ಮೈಸೂರು ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

sutturu
sutturu
author img

By

Published : Jun 4, 2021, 3:10 PM IST

Updated : Jun 4, 2021, 9:46 PM IST

ಮೈಸೂರು: ನಿನ್ನೆ ಜಿಲ್ಲಾಧಿಕಾರಿ ವಿರುದ್ಧ ಆರೋಪ ಮಾಡಿ ರಾಜೀನಾಮೆ ನೀಡಿದ್ದ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರನ್ನು ಸುತ್ತೂರು ಮಠಕ್ಕೆ ಕರೆಸಿ ಶ್ರೀಗಳ ನೇತೃತ್ವದಲ್ಲಿ ರಹಸ್ಯ ಸಂಧಾನ ಸಭೆ ನಡೆಸಲಾಗಿದೆ.

ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ನಿನ್ನೆ ಜಿಲ್ಲಾಧಿಕಾರಿಗಳ ವರ್ತನೆಯನ್ನು ಖಂಡಿಸಿ ರಾಜೀನಾಮೆ ನೀಡಿದ್ದು, ರಾಜ್ಯಾದ್ಯಂತ ಇದು ದೊಡ್ಡ ಸುದ್ದಿಯಾಗಿ ಸರ್ಕಾರಕ್ಕೆ ಮುಜುಗರ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಬೆಳಗ್ಗೆಯೇ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಮೈಸೂರಿಗೆ ಆಗಮಿಸಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನಂತರ ಸುತ್ತೂರು ಮಠದಲ್ಲಿ ಶ್ರೀಗಳ ನೇತೃತ್ವದಲ್ಲಿ ಅರ್ಧಗಂಟೆ ರಹಸ್ಯ ಸಭೆ ನಡೆಸಿದ್ದಾರೆ. ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವಾರು ನಾಯಕರು ಸಂಧಾನ ಸಭೆಯಲ್ಲಿದ್ದರು.

ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಅಸಮಾಧಾನ:

ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಅಸಮಾಧಾನ:

ಸುತ್ತೂರು ಪೀಠಾಧಿಪತಿ ಶಿವರಾತ್ರಿ‌ ದೇಶಿಕೇಂದ್ರ ಸ್ವಾಮೀಜಿಗಳ ಮುಂದೆ ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಶಿಲ್ಪಾ ನಾಗ್ ಅಸಮಾಧಾನ ಹೊರಹಾಕಿದ್ದಾರೆ.

ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ, ಜಿಲ್ಲಾಡಳಿತದಿಂದ ತುಂಬಾ ಲೋಪದೋಷ ಇತ್ತು. ಆದರೆ, ಪಾಲಿಕೆಯಿಂದ ಸಾಕಷ್ಟು ಕೋವಿಡ್ ಕೆಲಸ ಆಗಿದೆ. ಜಿಲ್ಲಾಧಿಕಾರಿಗಳು ಹೆಚ್ಚು ಆಸಕ್ತಿ ತೋರಿಸಬಹುದಿತ್ತು. ಹಾಗೆ ಅವರು ನಡೆದುಕೊಳ್ಳಲಿಲ್ಲ ಎಂದರು.

ನಾನು ಎಲ್ಲ ಸಂಸ್ಥೆಗಳ‌ ಜೊತೆ ಮಾತಾಡಿ ಕೋವಿಡ್ ಕಂಟ್ರೋಲ್​​ಗೆ ಸಿದ್ಧತೆ ಮಾಡಿದ್ದೀನಿ. ನನಗೆ ಈಗೋ ಇರಲಿಲ್ಲ, ಕೆಲಸ ಮಾಡಬೇಕಿದ್ದಿದ್ದು ನನ್ನ ಉದ್ದೇಶ. ಸಿಎಸ್‌ಆರ್ ಫಂಡ್ ಬಗ್ಗೆ ಯಾರೂ ಜವಾಬ್ದಾರಿ ತೆಗೆದುಕೊಂಡಿಲ್ಲ. ಹಾಗಾಗಿ ನಾನೇ ಇದರ ಜವಾಬ್ದಾರಿ ತೆಗೆದುಕೊಂಡೆ. ಎಲ್ಲರೂ ಕೊರೊನಾ ಕಂಟ್ರೋಲ್‌ಗೆ ಕೈ ಜೋಡಿಸಿದ್ದಾರೆ ಎಂದರು. 'ಈಗೋ' ಇಷ್ಟು ದೊಡ್ಡದಾಗಿ ಇರಬಾರದು. ಎಲ್ಲವನ್ನು ಎಲ್ಲರನ್ನೂ ಸಮಾನವಾಗಿ ನೋಡಬೇಕು ಎಂದು ಡಿಸಿ ವಿರುದ್ಧ ಬೇಸರ ಹೊರಹಾಕಿದರು‌.

ಇದನ್ನೂ ಓದಿ:ಇದು ದುರಹಂಕಾರಿ ಅಧಿಕಾರಿಯ‌ ವಿರುದ್ದ ಪ್ರತಿಭಟನೆಯ ಸಂಕೇತ: ಕಣ್ಣೀರಲ್ಲೇ ರಾಜೀನಾಮೆ ನೀಡಿದ ಆಯುಕ್ತೆ ಶಿಲ್ಪಾ ನಾಗ್​​​

Last Updated : Jun 4, 2021, 9:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.