ಮೈಸೂರು: ಶ್ರೀ ಚಾಮರಾಜೇಂದ್ರ ಮೃಗಾಲಯದ ಮಾಂಸಾಹಾರಿ ಪ್ರಾಣಿಗಳಿಗೆ ದನದ ಮಾಂಸ ನೀಡಲು ಚರ್ಚೆ ನಡೆಸುತ್ತೇವೆ ಎಂದು ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.
ಮೃಗಾಲಯ ವೀಕ್ಷಣೆ ಮಾಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರದ ಜೊತೆ ದನದ ಮಾಂಸ ನೀಡುವ ಬಗ್ಗೆ ಚರ್ಚೆ ಮಾಡುತ್ತೇವೆ. ಮೃಗಾಲಯದ ಅಧಿಕಾರಿಗಳು ದನದ ಮಾಂಸ ಕೊಡುವ ಬಗ್ಗೆ ಮನವಿ ಮಾಡಿದ್ದಾರೆ. ಬುಧವಾರ ಅರಣ್ಯ ಸಚಿವರು ನಮ್ಮ ಕ್ಷೇತ್ರಕ್ಕೆ ಬರ್ತಿದ್ದಾರೆ. ಅವರೊಟ್ಟಿಗೆ ದನದ ಮಾಂಸ ಪೂರೈಕೆಗೆ ವಿನಾಯಿತಿ ನೀಡುವ ಬಗ್ಗೆ ಮಾತನಾಡುತ್ತೀನಿ ಎಂದರು.
ಕೊರೊನಾ ಸಂದರ್ಭದಲ್ಲಿ ತುಂಬಾ ಸಮಸ್ಯೆ ಆಗಿತ್ತು, ಈಗ ಸ್ವಲ್ಪ ಚೇತರಿಕೆ ಆಗ್ತಿದೆ. ಆ ಬಗ್ಗೆ ಮೃಗಾಲಯ ನಿರ್ವಹಣೆ ಕುರಿತು ಮಾಹಿತಿ ಪಡೆಯಲಿಕ್ಕೆ ಬಂದೆ. ಮೊದಲು ಹಣದ ಕೊರತೆ ಇತ್ತು, ಈಗ ಸ್ವಲ್ಪ ಚೇತರಿಕೆ ಆಗಿದೆ. ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಾಗಿದೆ. ಮೊದಲು 59 ಕೋಟಿಯಷ್ಟು ಆದಾಯ ಬರ್ತಿತ್ತು. ಈಗ 17 ಕೋಟಿಯಷ್ಟು ಆದಾಯ ಬರ್ತಿದೆ. ಆದರಿನ್ನೂ 47 ಕೋಟಿಯಷ್ಟು ನಷ್ಟದಲ್ಲಿದ್ದೇವೆ ಎಂದು ಹೇಳಿದರು.
ಪ್ರಾಣಿ ವಿನಿಮಯ ಯೋಜನೆಯಲ್ಲಿ ಕೆಲ ಪ್ರಾಣಿಗಳು ಬರಲಿವೆ. ಆ ಪ್ರಾಣಿಗಳಿಗಾಗಿ ಮನೆಗಳನ್ನ ನಿರ್ಮಾಣ ಮಾಡಲಾಗುತ್ತಿದೆ. ಮನೆಗಳ ನಿರ್ಮಾಣಕ್ಕೆ ಇನ್ಫೋಸಿಸ್ ಸುಧಾಮೂರ್ತಿಯವರು, ಆರ್‌ಬಿಐ ಸೇರಿದಂತೆ ಹಲವರು ಸಹಕರಿಸಿದ್ದಾರೆ. ಮೃಗಾಲಯಕ್ಕೆ ಸಹಕಾರ ನೀಡಿರುವ ಎಲ್ಲರಿಗೂ ಸನ್ಮಾನ ಮಾಡುವ ಉದ್ದೇಶ ಇದೆ.
ಸಿಎಸ್‌ಆರ್ ಸೇರಿದಂತೆ ಬೇರೆ ಬೇರೆ ಇಲಾಖೆಗಳ ಫಂಡ್ ಬಳಸುವ ಹಿನ್ನೆಲೆ ಒಂದು ಸಭೆ ಮಾಡುತ್ತೇವೆ. ಮೃಗಾಲಯ, ಕೆರೆ ಸೇರಿದಂತೆ ಹಲವು ವಿಚಾರಕ್ಕೆ ಫಂಡ್ ಬಳಸುವ ಚಿಂತನೆ ಇದೆ ಎಂದು ತಿಳಿಸಿದರು.
ಓದಿ: ಬಂಜಾರ ಅಭಿವೃದ್ಧಿ ನಿಗಮಕ್ಕೆ 10 ಕೋಟಿ ಅನುದಾನ ಘೋಷಿಸಿದ ಸಿಎಂ ಬಿಎಸ್ವೈ
ಸುಧಾಮೂರ್ತಿಯವರು, ಆರ್‌ಬಿಐ ನವರು ಸಹಕಾರ ಮಾಡಿದ್ದಾರೆ. ಅವ್ರಿಗೆ ಸನ್ಮಾನ ಮಾಡುತ್ತೇವೆ. ಜೊತೆಗೆ ಪ್ರಾಣಿ ಪಕ್ಷಿಗಳ ದತ್ತು ಸ್ವೀಕಾರ ರಿನಿವಲ್ ಆಗುತ್ತಿವೆ. ಕೊರೊನಾ ನಂತರ ಮೃಗಾಲಯಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ ಎಂದರು.