ಮೈಸೂರು: ಕೊರೊನಾದಿಂದ ಕಂಗೆಟ್ಟಿದ್ದ ಗ್ರಾಮಾಂತರ ಸಾರಿಗೆ ಅನ್ಲಾಕ್ ಬಳಿಕ ಆರ್ಥಿಕ ಚೇತರಿಕೆಯತ್ತ ಮುಖ ಮಾಡುತ್ತಿರುವುದು ಅಧಿಕಾರಿಗಳಿಗೆ ಚೈತನ್ಯ ನೀಡಿದಂತಾಗಿದೆ.
ಕೊರೊನಾ ನಡುವೆ ಸಾರಿಗೆ ಬಸ್ಗಳ ಸಂಚಾರ ಯಥಾಸ್ಥಿತಿಗೆ ಬರುತ್ತಿರುವುದರಿಂದ ಪ್ರತಿನಿತ್ಯ 1600 ರೌಂಡ್ಸ್ ಬಸ್ಗಳ ಸಂಚಾರವಾಗುತ್ತಿದೆ. ಬೆಂಗಳೂರು-ಮೈಸೂರು ಸೇರಿದಂತೆ ಎಲ್ಲ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೂ ನಿರಾತಂಕವಾಗಿ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದಾರೆ. ಬಸ್ಗಳ ಸಂಚಾರ ಏರಿದಂತೆ ಸಾರಿಗೆ ಬೊಕ್ಕಸಕ್ಕೆ ಅನುಕೂಲವಾಗುತ್ತಿದೆ.
ನಷ್ಟದಿಂದ ಕಂಗೆಟ್ಟಿದ್ದ ಸಾರಿಗೆ ಬಸ್ಗಳಿಗೆ ಪ್ರಯಾಣಿಕರು ಕೊರೊನಾಗೆ ಅಂಜದೆ ಬರುತ್ತಿರುವುದರಿಂದ ಗ್ರಾಮಾಂತರ ಸಾರಿಗೆಗೆ ಸ್ಫೂರ್ತಿ ಸಿಕ್ಕಿದಂತಾಗಿದೆ ಎಂದು ಗ್ರಾಮಾಂತರ ಸಾರಿಗೆ ನಿಯಂತ್ರಣಾಧಿಕಾರಿ ಹೇಮಂತ್ ಕುಮಾರ್ ಹೇಳಿದ್ದಾರೆ.