ETV Bharat / state

ಬೆಂಗಳೂರಿನಲ್ಲಿ 2 ದಿನ ರೈತರಿಂದ ದುಂಡು ಮೇಜಿನ ಸಭೆ : ಕುರುಬೂರು ಶಾಂತಕುಮಾರ್ - Kurubooru Shanthakumar

ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆಯಲು ದುಂಡು‌ ಮೇಜಿನ ರೈತ ಪರಿಷತ್ ಮಾಡಲಾಗುತ್ತಿದೆ. ರಾಜ್ಯದ ರಾಜಕೀಯ ನಾಯಕರಿಗೆ ರೈತರ ಮೇಲೆ ಕಾಳಜಿ ಇಲ್ಲ. ಗಂಭೀರ ಸಮಸ್ಯೆ ಚರ್ಚೆ ಮಾಡುವುದನ್ನ ಬಿಟ್ಟು ತಮ್ಮ ಸಂಬಳ ಹೆಚ್ಚು ಮಾಡಿಕೊಂಡಿದ್ದಾರೆ..

Kurubooru Shanthakumar talked in Pressmeet
ಕುರುಬೂರು ಶಾಂತಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
author img

By

Published : Mar 14, 2022, 5:41 PM IST

ಮೈಸೂರು : ರೈತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಾರ್ಚ್ 19 ಮತ್ತು 20ರಂದು ಬೆಂಗಳೂರಿನಲ್ಲಿ ದುಂಡು ಮೇಜಿನ ರೈತ ಪರಿಷತ್ ನಡೆಸಲು ರೈತ ಸಂಘಟನೆಗಳು ತೀರ್ಮಾನಿಸಿವೆ. ರಾಷ್ಟ್ರೀಯ ರೈತ ಮುಖಂಡರು ಪರಿಷತ್​ನಲ್ಲಿ ಭಾಗವಹಿಸಲಿದ್ದಾರೆ‌ ಎಂದು‌ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.

ನಗರದಲ್ಲಿ ಇಂದು ಕುರುಬೂರು ಶಾಂತಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೃಷಿ ಖಾಯ್ದೆ ಹಿಂಪಡೆಯುವುದು, ಬೆಂಬಲ ಬೆಲೆ ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದೇವೆ. ಸರ್ಕಾರಕ್ಕೆ ರೈತರ ಬಗ್ಗೆ ಯಾವುದೇ ಕಾಳಜಿ ಇಲ್ಲ. ರಸಗೊಬ್ಬರ, ಬಿತ್ತನೆ ಬೀಜದ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ರೈತರ ಮೇಲೆ ಹೊರೆ ಹೆಚ್ಚಾಗುತ್ತಿದೆ. ರೈತರ ಸಮಸ್ಯೆ ಬಗೆಹರಿಸುವಲ್ಲಿ ಸರ್ಕಾರ ಚಿಂತನೆ ಮಾಡಿಲ್ಲ. ರೈತರ ಕಣ್ಣಿಗೆ ಮಣ್ಣು ಎರಚುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆಯಲು ದುಂಡು‌ ಮೇಜಿನ ರೈತ ಪರಿಷತ್ ಮಾಡಲಾಗುತ್ತಿದೆ. ರಾಜ್ಯದ ರಾಜಕೀಯ ನಾಯಕರಿಗೆ ರೈತರ ಮೇಲೆ ಕಾಳಜಿ ಇಲ್ಲ. ಗಂಭೀರ ಸಮಸ್ಯೆ ಚರ್ಚೆ ಮಾಡುವುದನ್ನ ಬಿಟ್ಟು ತಮ್ಮ ಸಂಬಳ ಹೆಚ್ಚು ಮಾಡಿಕೊಂಡಿದ್ದಾರೆ.

ವಿರೋಧ ಪಕ್ಷಗಳು ಸಹ ಇದರ ಬಗ್ಗೆ ಚರ್ಚೆಯನ್ನೇ ಮಾಡಲಿಲ್ಲ. ಜನರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ತಮ್ಮ ಸಂಬಳವನ್ನು ಹೆಚ್ವು ಮಾಡಿಕೊಂಡಿದ್ದಾರೆ. ಸ್ವಹಿತಾಸಕ್ತಿಯೇ ಅವರಿಗೆ ಮುಖ್ಯವಾಗಿದೆ. ರಾಜಕೀಯ ನಾಯಕರಿಗೆ ಜನಪರ ಚಿಂತನೆಗಳೇ ಇಲ್ಲ ಎಂದರು.

ಕೋಡಿಹಳ್ಳಿ ಚಂದ್ರಶೇಖರ್ ಅವರ ರೈತ ರಾಜಕೀಯ ಪಕ್ಷ ಸ್ಥಾಪನೆಯ ವಿಚಾರದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕೋಡಿ ಹಳ್ಳಿ‌ಚಂದ್ರಶೇಖರ್ ಅವರು ರೈತ ಮುಖಂಡನೆ ಅಲ್ಲ, ರೈತ ಹೋರಾಟಕ್ಕಿಂತ ಅವರು ರಾಜಕೀಯ ಹೋರಾಟದಲ್ಲಿ ಗುರುತಿಸಿಕೊಂಡಿದ್ದೆ ಹೆಚ್ಚು. ರೈತ ಮುಖಂಡರ ಹೆಸರಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಈ ರೀತಿ ಚಿಂತನೆ ಮಾಡೋದಾದ್ರೆ ಒಂದು‌ ರಾಜಕೀಯ ಪಕ್ಷ ಸೇರಿ ಜನಪ್ರತಿನಿಧಿಯಾಗಿ ಜನರ ಸೇವೆ ಮಾಡಲಿ ಎಂದರು.

ದೆಹಲಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಒಂದು ವರ್ಷಗಳ ಕಾಲ ಹೋರಾಟ ಮಾಡಿತ್ತು. ಆದರೆ, ಪಂಜಾಬ್ ಚುನಾವಣೆ ಸಂದರ್ಭದಲ್ಲಿ ಕಿಸಾನ್ ಮೋರ್ಚಾ ಸ್ವತಂತ್ರವಾಗಿ ಸ್ಪರ್ಧಿಸಿತ್ತು. ಒಂದೂ ಸೀಟ್ ಬರದೆ ಹೀನಾಯ ಸೋಲಾಯಿತು. ರೈತರು, ರೈತರ ಚಿಂತನೆಗಳಿಗೆ ಜನ ಬೆಲೆ ಕೊಡುತ್ತಾರೆ. ಆದರೆ, ರಾಜಕೀಯಕ್ಕೆ ಹೋದರೆ ಬೆಲೆ ಕೊಡುವುದಿಲ್ಲ. ರೈತ ಹೋರಾಟಗಳೇ ಬೇರೆ, ರಾಜಕಾರಣವೇ ಬೇರೆ, ಜನಪರ ಚಿಂತನೆಗಳೇ ಬೇರೆ, ಇದ್ಯಾವುದು ಹೊಂದಾಣಿಕೆ ಆಗುವುದಿಲ್ಲ ಎಂದು ಕುರುಬೂರು ಶಾಂತಕುಮಾರ್ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.