ಮೈಸೂರು: ಲಾಕ್ಡೌನ್ ನಿಂದ ನಂಜನಗೂಡು ದೇವಸ್ಥಾನದ ಮುಂಭಾಗಕ್ಕೆ ಭಕ್ತಾದಿಗಳಿಗೆ ನಿರ್ಬಂಧ ಹೇರಿದಂತೆ, ಕಪಿಲೆ ನದಿಗೂ ಭಕ್ತಾದಿಗಳಿಗೆ ಮತ್ತು ಸ್ಥಳೀಯರಿಗೆ ನೋ ನಿರ್ಬಂಧ ವಿಧಿಸಿ ಆದೇಶ ಹೊರಡಿಸಲಾಗಿದೆ.
ಕಪಿಲೆ ನದಿಯಲ್ಲಿ ಭಕ್ತಾದಿಗಳು ಹಾಗೂ ಸ್ಥಳೀಯರಿಗೂ ನಿರ್ಬಂಧ ಹೇರಿರುವುದರಿಂದ ನದಿ ಸ್ವಚ್ಛ ಹಾಗೂ ಸುಂದರವಾಗಿ ಹರಿಯುತ್ತಿರುವುದನ್ನ, ನೋಡಲು ರಮಣೀಯವಾಗಿ ಕಾಣುತ್ತಿದೆ. ಕೊರೊನಾ ಮೊದಲನೇ ಅಲೆ ಕಡಿಮೆಯಾದಾಗ ಲಾಕ್ ಡೌನ್ ಸಡಿಲಿಕೆ ಮಾಡಿದಾಗ ಭಕ್ತಾದಿಗಳ ದಂಡು ಪ್ರತಿನಿತ್ಯ ಕಪಿಲಾ ನದಿಗೆ ಹರಿದು ಬರುತ್ತಿತ್ತು. ಇದರಿಂದ ಭಕ್ತಾದಿಗಳು ಮುಡಿ ತೆಗೆಸಿ, ಬಟ್ಟೆ ಹಾಗೂ ಕೈಗಳಿಗೆ ಕಟ್ಟಿದ ದಾರ ಇತರೆ ತ್ಯಾಜ್ಯಗಳನ್ನು ನದಿಯಲ್ಲಿ ಬಿಟ್ಟು ಹೋಗುತ್ತಿದ್ದರು. ಅಲ್ಲದೇ ಸ್ಥಳೀಯರು ಕೂಡ ಬಟ್ಟೆ ಒಗೆಯಲು ಬರುತ್ತಿದ್ದರು. ಇದರಿಂದ ನದಿಯ ನೀರು ಮಲಿನವಾಗುತ್ತಿತ್ತು.
ಕೊರೊನಾ ಎರಡನೇ ಅಲೆ ಆರಂಭವಾದಾಗ ಲಾಕ್ ಡೌನ್ ಘೋಷಣೆ ಮಾಡಲಾಯಿತು. ಆದರೂ ಕೆಲವರು ಕಪಿಲಾ ನದಿಗೆ ಬಂದು ಸ್ನಾನ ಮಾಡಿ ಹೋಗುತ್ತಿದ್ದರು. ಇದರಿಂದ ಎಚ್ಚೆತ್ತ ತಾಲೂಕು ಆಡಳಿತ ಮಂಡಳಿ ಕಪಿಲಾ ನದಿಯ ಬಳಿ ಭಕ್ತಾದಿಗಳಿಗೆ ಹಾಗೂ ಸ್ಥಳೀಯರಿಗೂ ನಿರ್ಬಂಧ ಹೇರಿದೆ. ಇದರಿಂದಾಗಿ ನದಿ ಸ್ವಚ್ಛ ಹಾಗೂ ಸುಂದರವಾಗಿ ಹರಿಯುತ್ತಿದೆ. ಕಪಿಲಾ ಜಲಾಶಯದಲ್ಲಿ ನೀರಿನ ಮಟ್ಟ ಏರುತ್ತಿರುವುದರಿಂದ, ನಂಜನಗೂಡಿನಲ್ಲಿ ಹರಿಯುತ್ತಿರುವ ಕಪಿಲಾ ನದಿ ನೀರಿನ ಮಟ್ಟವು ಹೆಚ್ಚಳವಾಗಿದೆ.