ETV Bharat / state

Bitcoin case: ಬಿಟ್ ಕಾಯಿನ್ ಮೋಸ.. ಆಸೆಗೆ ಬಿದ್ದು ಲಕ್ಷಗಟ್ಟಲೆ ಹಣ ಕಳೆದುಕೊಂಡ ಮೈಸೂರಿನ ನಿವಾಸಿಗಳು - ಬಿಟ್ ಕಾಯಿನ್​ ಮೇಲೆ ಹೂಡಿಕೆ

ಬಿಟ್ ಕಾಯಿನ್ ಮೇಲೆ ​ಹೂಡಿಕೆ ಮಾಡಿದರೆ ಲಕ್ಷಗಟ್ಟಲೆ ಹಣ ಗಳಿಸಬಹುದು ಎಂಬ ಮೈಸೂರಿನ ಇಬ್ಬರು ವ್ಯಕ್ತಿಗಳು 87 ಲಕ್ಷ ಹಣ ಕಳೆದುಕೊಂಡಿದ್ದಾರೆ.

Bitcoin
ಬಿಟ್ ಕಾಯಿನ್ ಆಸೆಗೆ ಬಿದ್ದು ಲಕ್ಷಗಟ್ಟಲೆ ಹಣ ಕಳೆದುಕೊಂಡ ಮೈಸೂರಿನ ನಿವಾಸಿಗಳು: ದೂರು ದಾಖಲು
author img

By

Published : Jul 20, 2023, 4:24 PM IST

Updated : Jul 20, 2023, 6:58 PM IST

ಮೈಸೂರು: ಸುಲಭವಾಗಿ ಹಣ ಗಳಿಸಲು ಹೋದರೆ ಅಪಾಯ ಗ್ಯಾರಂಟಿ ಎಂಬ ಮಾತಿಗೆ ಮೈಸೂರಿನಲ್ಲೊಂದು ಘಟನೆ ನಡೆದಿದೆ. ಬಿಟ್ ಕಾಯಿನ್​ ಮೇಲೆ ಹೂಡಿಕೆ ಮಾಡಿದರೆ ಲಕ್ಷಗಟ್ಟಲೆ ಹಣ ಗಳಿಸಬಹುದು ಎಂಬ ಮೆಸೇಜ್​ಗೆ ಮರುಳಾಗಿ, ಮೈಸೂರಿನ ಇಬ್ಬರು ವ್ಯಕ್ತಿಗಳು 87 ಲಕ್ಷ ಹಣ ಕಳೆದುಕೊಂಡಿದ್ದಾರೆ. ಈ ಸಂಬಂಧ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹೀಗೆ ಬಿಟ್ ಕಾಯಿನ್​ಗೆ ಹೂಡಿಕೆ ಮಾಡಿದರೆ ಲಕ್ಷಗಟ್ಟಲೆ ಹಣ ಗಳಿಸಬಹುದು ಎಂಬ ಆಸೆಗೆ ಬಿದ್ದು, ಹಣ ಕಳೆದುಕೊಂಡಿದ್ದಾರೆ. ಮೈಸೂರಿನ ಮೇಟಗಳ್ಳಿ ನಿವಾಸಿ ವಿಜಯಲಕ್ಷ್ಮಿ 52 ಲಕ್ಷ ಹಾಗೂ ಮಹಮ್ಮದ್ ಜಾವೇದ್ 35 ಲಕ್ಷ ದುಡ್ಡು ಕಳೆದುಕೊಂಡು ವಂಚನೆಗೆ ಒಳಗಾಗಿದ್ದಾರೆ. ಇವರು ಬಿಟ್ ಕಾಯಿನ್ ಮೂಲಕ ಸುಲಭವಾಗಿ ಹಣಗಳಿಸಬಹುದು ಎನ್ನುವ ಜಾಹೀರಾತಿಗೆ ಮರುಳಾಗಿದ್ದಾರೆ. ಇವರಿಬ್ಬರು ಸಹ ಬ್ಯಾಂಕ್​ನಲ್ಲಿ ಸಾಲ ಮಾಡಿ ಬಿಟ್ ಕಾಯಿನ್​ ಮೇಲೆ ಹೂಡಿಕೆ ಮಾಡಿದ್ದಾರೆ.

residents-of-mysore-who-fell-in-love-with-bitcoin
ಬಿಟ್ ಕಾಯಿನ್

ವಂಚನೆಗೆ ಒಳಗಾಗಿದ್ದು ಹೇಗೆ?: ಟೆಲಿಗ್ರಾಂ ಆ್ಯಪ್​​ನಲ್ಲಿ ಖದೀಮರು ಗ್ರೂಪ್ ರಚನೆ ಮಾಡಿದ್ದರು. ಇದರಿಂದ ಬಿಟ್ ಕಾಯಿನ್​ಗೆ ಹಣ ಹಾಕಿದರೆ ಹೆಚ್ಚಿನ ಹಣ ಸುಲಭವಾಗಿ ಗಳಿಸಬಹುದು ಎಂಬ ಜಾಹೀರಾತಿನ ಮೂಲಕ ಗಮನಸೆಳೆದಿದ್ದರು. ನಕಲಿ ಸ್ಕ್ರೀನ್ ಶಾಟ್​ಗಳನ್ನು ಗ್ರೂಪ್​ನ ಸದಸ್ಯರಿಗೆ ಕಳಿಸಿದ್ದರು. ಟೆಲಿಗ್ರಾಂ ಗ್ರೂಪ್​ ಸದಸ್ಯರನ್ನು ಮರಳು ಮಾಡಿದ್ದರು. ತಾವು ಸಹ ಹೂಡಿಕೆ ಮಾಡುವಂತೆ ಚಾಟ್ ಮಾಡಿದ್ದರು. ಹೆಚ್ಚು ಲಾಭದ ಆಸೆ ತೋರಿಸಿ, ತಾವು ಸಹ ಹೂಡಿಕೆ ಮಾಡುವಂತೆ ಪ್ರೇರೇಪಿಸುತ್ತಿದ್ದ ಖದೀಮರು, ದೇಶದ ವಿವಿಧ ರಾಜ್ಯಗಳಲ್ಲಿ ಇರುವ 51 ಅಕೌಂಟ್​ಗಳಿಗೆ ಹಣ ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡುತ್ತಿದ್ದರು.

ಪೊಲೀಸರು ಹೇಳಿದ್ದೇನು?: ಇವರ ನೆಟ್​ವರ್ಕ್ ಜಮ್ಮು ಕಾಶ್ಮೀರದಿಂದ ಕೇರಳದವರೆಗೆ ವ್ಯಾಪಿಸಿದ್ದು, ಎಲ್ಲಾ ರಾಜ್ಯಗಳಲ್ಲೂ ಬ್ಯಾಂಕ್ ಅಕೌಂಟ್ ಹೊಂದಿರುವ ಇವರು. ಬ್ಯಾಂಕ್ ಅಕೌಂಟ್​ಗೆ ಹಣ ಹಾಕಿದ ತಕ್ಷಣ ಡ್ರಾ ಮಾಡಿಕೊಂಡು ವಂಚನೆ ಮಾಡುತ್ತಿರುವುದು ಗೊತ್ತಾಗಿದೆ. ಈ ಬಿಟ್ ಕಾಯಿನ್ ಟ್ರೇಡಿಂಗ್ ಮೋಸದ ಬಗ್ಗೆ ತಿಳಿದ ಸೆನ್ ಪೊಲೀಸರು ಬೆಚ್ಚಿಬಿದ್ದಿದ್ದಾರೆ. ಟೆಲಿಗ್ರಾಂ ಗ್ರೂಪ್ ಮೂಲಕ ನಕಲಿ ಚಾಟ್​ಗಳನ್ನು ಸೃಷ್ಟಿಸಿ ಮೋಸ ಮಾಡುತ್ತಿರುವ ಗ್ಯಾಂಗ್​ನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಮೈಸೂರು ನಗರ ಪೋಲಿಸ್ ಕಮಿಷನರ್ ರಮೇಶ್ ಬಾನೋತ್ ಪ್ರತಿಕ್ರಿಯಿಸಿ, ''ಬಿಟ್ ಕಾಯಿನ್ ಟ್ರೇಡಿಂಗ್​ನಲ್ಲಿ ಹಣ ಹೂಡಿಕೆ ಮಾಡುವ ಮುನ್ನ ಎಚ್ಚರಿಕೆ ವಹಿಸಬೇಕು. ಆನ್​ಲೈನ್​ ಮೂಲಕ ಈ ರೀತಿ ವ್ಯವಹಾರಗಳಿಗೆ ಹಣ ಹಾಕುವ ಮುನ್ನ ಎಲ್ಲವನ್ನೂ ಪರಿಶೀಲನೆ ಮಾಡಬೇಕು. ಈ ರೀತಿ ಜಾಲತಾಣಗಳ ಮೂಲಕ ಸುಳ್ಳು ಮಾಹಿತಿಗಳನ್ನು ಸೃಷ್ಟಿಸಿ ಹಣ ವಂಚಿಸುವವರ ಜೊತೆ ಎಚ್ಚರಿಕೆಯಿಂದ ಇರಬೇಕು ಎಂದು ಅವರು ಸಲಹೆ ನೀಡಿದರು.

ಇದನ್ನೂ ಓದಿ: ವಸ್ತುಗಳನ್ನು ಆನ್ಲೈನ್​ನಲ್ಲಿ ಖರೀದಿ ಮಾಡಿ ಮಾರಾಟ ಮಾಡಿದರೆ ಕಮಿಷನ್ ನೀಡುವ ಆಮಿಷ.. ಮಹಿಳೆಗೆ 18.66 ಲಕ್ಷ ವಂಚನೆ

Last Updated : Jul 20, 2023, 6:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.