ETV Bharat / state

ಸಿಹಿಗುಂಬಳ ಖರೀದಿಸುವಂತೆ ವಿಡಿಯೋ ಮೂಲಕ ರೈತನ ಮನವಿ - ಮೈಸೂರು ರೈತರ ಸಮಸ್ಯೆ

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗಾವುಡುಗೆರೆ ಹೋಬಳಿಯ ಉಳ್ಯಾಳು ಗ್ರಾಮದ ರೈತ, ಸುಮಾರು 4 ಎಕರೆಯಲ್ಲಿ ಸಿಹಿಗುಂಬಳಕಾಯಿ ಬೆಳೆದಿದ್ದು, ಸದ್ಯ 20 ಟನ್​ನಷ್ಟು ಬೆಳೆಯಾಗಿದೆ.

Request through video to buy a pumpkin
ಸಿಹಿಗುಂಬಳಕಾಯಿಯನ್ನು ಕೊಂಡುಕೊಳ್ಳುವಂತೆ ವಿಡಿಯೋ ಮೂಲಕ ಮನವಿ ಮಾಡಿದ ರೈತ
author img

By

Published : May 21, 2021, 12:49 PM IST

ಮೈಸೂರು: ಕೋವಿಡ್​ ಕಾರಣ ತಾನು ಬೆಳೆದ ಸಿಹಿಗುಂಬಳಕಾಯಿಯನ್ನು ಯಾರೂ ಕೊಂಡುಕೊಳ್ಳಲು ಮುಂದಾಗುತ್ತಿಲ್ಲ, ಹೀಗಾಗಿ ಸೂಕ್ತ ಬೆಲೆ ಸಿಗುತ್ತಿಲ್ಲ. ಜನರು ತನ್ನ ಬೆಳೆಯನ್ನು ಖರೀದಿಸಿ ಸಹಾಯಕ್ಕೆ ಬರಬೇಕೆಂದು ಮೈಸೂರು ಭಾಗದ ರೈತನೊಬ್ಬ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದು, ಈ ವಿಡಿಯೋ ಈಗ ವೈರಲ್ ಆಗುತ್ತಿದೆ.

ವಿಡಿಯೋ ಮೂಲಕ ಮನವಿ ಮಾಡಿದ ರೈತ

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗಾವುಡುಗೆರೆ ಹೋಬಳಿಯ ಉಳ್ಯಾಳು ಗ್ರಾಮದ ರೈತ, ಸುಮಾರು 4 ಎಕರೆಯಲ್ಲಿ ಸಿಹಿಗುಂಬಳಕಾಯಿ ಬೆಳೆದಿದ್ದು, ಸದ್ಯ 20 ಟನ್​ನಷ್ಟು ಬೆಳೆಯಾಗಿದೆ.

"ಕುಟುಂಬದ ಸದಸ್ಯರೆಲ್ಲರೂ ಸೇರಿ ಈ‌ ಕೃಷಿ ಮಾಡಿದ್ದು, ಇದನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಕೋವಿಡ್​​ ಸಮಯವಾದ ಹಿನ್ನೆಲೆಯಲ್ಲಿ ಸೂಕ್ತ ಮಾರುಕಟ್ಟೆ ಇಲ್ಲದ ಕಾರಣ, ಇದನ್ನು ಯಾರೂ ಸಹ ತೆಗೆದುಕೊಳ್ಳಲು ಮುಂದಾಗುತ್ತಿಲ್ಲ. ಹಾಗಾಗಿ ದಾನಿಗಳು ಅಥವಾ ಆರ್ಥಿಕವಾಗಿ ಸಬಲರಾಗಿರುವವರು ಕಡಿಮೆ ಬೆಲೆಗೆ ಕೊಂಡುಕೊಳ್ಳಿ. ಬಡವರಿಗೆ ಸಹಾಯವಾಗುತ್ತದೆ." ಎಂದು ಮನವಿ ಮಾಡಿದ್ದಾರೆ. ಆಸಕ್ತರು ಅವರ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಲು ಕೋರಿದ್ದಾರೆ.

ಸಂಪರ್ಕಕ್ಕೆ ಮೊಬೈಲ್ ಸಂಖ್ಯೆ: 9945175961

ಇದನ್ನೂ ಓದಿ: ವ್ಯಾಕ್ಸಿನ್​​ಗಾಗಿ ಕೆ.ಸಿ‌‌‌.ಜನರಲ್ ಆಸ್ಪತ್ರೆಯೆದುರು ಜನರ ಸಾಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.