ETV Bharat / state

NIRF ರ‍್ಯಾಂಕಿಂಗ್​ ಪಟ್ಟಿ ಬಿಡುಗಡೆ : 76 ರಿಂದ 19ನೇ ರ‍್ಯಾಂಕ್​​ಗೆ ಜಿಗಿದ ಮೈಸೂರು ವಿವಿ

ನಾನು ಕುಲಪತಿಯಾಗುವ ಮೊದಲು ಮೈಸೂರು ವಿವಿ 76ನೇ ರ‍್ಯಾಂಕ್​​ನಲ್ಲಿತ್ತು. ನಂತರ 54ನೇ ರ‍್ಯಾಂಕ್, ಕಳೆದ ವರ್ಷ 27ನೇ ರ‍್ಯಾಂಕ್​​, ಈ ವರ್ಷ‌ 19ನೇ ರ‍್ಯಾಂಕ್​​​ಗೆ ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ರ‍್ಯಾಂಕ್ ಗೆ ಹತ್ತಿರವಾಗುತ್ತೇವೆ..

76 ರಿಂದ 19ನೇ ರ‍್ಯಾಂಕ್​​ಗೆ ಜಿಗಿದ ಮೈಸೂರು ವಿವಿ

author img

By

Published : Sep 10, 2021, 7:34 PM IST

ಮೈಸೂರು : ಮೈಸೂರು ವಿಶ್ವವಿದ್ಯಾಲಯ ನಾಲ್ಕು ವರ್ಷಗಳ ಹಿಂದೆ 76ರ ರ‍್ಯಾಂಕ್​​​ನಲ್ಲಿ ಇತ್ತು. ಆದರೀಗ ಪ್ರಸಕ್ತ ವರ್ಷದಲ್ಲಿ 19ನೇ ರ‍್ಯಾಂಕ್ ಗೆ ಬಂದಿದೆ. ಕೊರೊನಾ ಸ್ಥಿತಿಯಲ್ಲಿಯೂ ಮೈಸೂರು ವಿಶ್ವವಿದ್ಯಾಲಯ ಅಗ್ರಸ್ಥಾನಕ್ಕೇರುತ್ತಿರುವುದು ಮೈಸೂರಿಗರಲ್ಲಿ ಸಂತಸ ಮೂಡಿಸುತ್ತಿದೆ.

76 ರಿಂದ 19ನೇ ರ‍್ಯಾಂಕ್​​ಗೆ ಜಿಗಿದ ಮೈಸೂರು ವಿವಿ

ನ್ಯಾಷನಲ್ ಇನ್ಸ್ ಟಿಟ್ಯೂಟ್ ರ‍್ಯಾಂಕಿಂಗ್​ ಫ್ರೇಮ್ ವರ್ಕ್(NIRF) ದೇಶದಲ್ಲಿರುವ ವಿಶ್ವವಿದ್ಯಾನಿಲಯಗಳ ಶೈಕ್ಷಣಿಕ ಮತ್ತು ಭೌತಿಕ ಗುಣಮಟ್ಟ ಆಧರಿಸಿ ಬಿಡುಗಡೆ ಮಾಡಿರುವ ರ‍್ಯಾಂಕ್ ಪಟ್ಟಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ 19ನೇ ಸ್ಥಾನ ಸಿಕ್ಕಿದೆ.

76ನೇ ರ್ಯಾಂಕ್ ನಿಂದ 19ನೇ‌ ರ್ಯಾಂಕ್ ಜಿಗಿಯಲು ಕಾರಣವೇನು : ಈ ಕುರಿತು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿ, ಕೋವಿಡ್ ಸಂದರ್ಭದಲ್ಲಿಯೂ ಕೂಡ ಅಕಾಡೆಮಿ ಆಕ್ಟಿವಿಟಿ ಕಡಿಮೆ ಮಾಡಿಲ್ಲ.

ಅಲ್ಲದೆ ವಿದ್ಯಾರ್ಥಿಗಳಿಗೆ ಆನ್​​ಲೈನ್ ಹಾಗೂ ಆಫ್ ಲೈನ್ ನಲ್ಲಿ ಕೂಡ ಪಾಠ ಮಾಡಲಾಗಿದೆ. ಸಂಶೋಧನೆಗಳನ್ನ ನಾವು ನಿಲ್ಲಿಸಲಿಲ್ಲ. ಟೀಚಿಂಗ್, ಲರ್ನಿಂಗ್, ರಿಸರ್ಚ್ ಇವುಗಳ ಆಧಾರದ ಮೇಲೆ ಮೈಸೂರು ವಿವಿಗೆ 19ನೇ ರ‍್ಯಾಂಕ್ ಸಿಕ್ಕಿದೆ ಎಂದರು.

ನಾನು ಕುಲಪತಿಯಾಗುವ ಮೊದಲು ಮೈಸೂರು ವಿವಿ 76ನೇ ರ‍್ಯಾಂಕ್​​ನಲ್ಲಿತ್ತು. ನಂತರ 54ನೇ ರ‍್ಯಾಂಕ್, ಕಳೆದ ವರ್ಷ 27ನೇ ರ‍್ಯಾಂಕ್​​, ಈ ವರ್ಷ‌ 19ನೇ ರ‍್ಯಾಂಕ್​​​ಗೆ ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ರ‍್ಯಾಂಕ್ ಗೆ ಹತ್ತಿರವಾಗುತ್ತೇವೆ.

ನ್ಯಾಕ್ ಸಂಸ್ಥೆಯು ಕೂಡ ಸೆ.15ರಿಂದ 17ರವರೆಗೆ ಮೌಲ್ಯಮಾಪನ ಮಾಡಲಿದೆ. ಈಗಾಗಲೇ 700 ನಂಬರ್ ಮೌಲ್ಯ ಮಾಪನವಾಗಿದೆ. 300 ನಂಬರ್ ಮೌಲ್ಯಮಾಪನವಾಗಬೇಕಿದೆ ಎಂದು ಹೇಳಿದರು.

ಇದನ್ನೂ ಓದಿ : ವಸತಿರಹಿತರಿಗೆ ಸಿಹಿಸುದ್ದಿ: 4 ಲಕ್ಷ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಗೆ ಸಿಎಂ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.